ಜನಪ್ರಿಯ ಬಜೆಟ್ ಬ್ಲೂಪ್ರಿಂಟ್‌ಗೆ ಸಿಎಂ ಸೂಚನೆ- ಎಲೆಕ್ಷನ್ ಬಜೆಟ್‌ನಲ್ಲಿ ಬಂಪರ್ ಗಿಫ್ಟ್

Team Newsnap
1 Min Read
CM to lay foundation on 19th march for the construction of Ram mandir in Ramnagar ರಾಮನಗರದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮಾ. 19 ರಂದು ಸಿಎಂ ಶಂಕುಸ್ಥಾಪನೆ

ಮುಂದಿನ ತಿಂಗಳು ಮಂಡನೆಯಾಗಲಿರುವ ರಾಜ್ಯ ಬಜೆಟ್ ಯೋಜನೆಗಳ ಬಗ್ಗೆ ಪ್ಲ್ಯಾನ್ ಮಾಡಿ, ಬ್ಲೂಪ್ರಿಂಟ್ ಕೊಡಿ. ಮಹಿಳೆಯರು, ರೈತರು, ಶ್ರಮಿಕ ವರ್ಗ ಗಮನದಲ್ಲಿಟ್ಟುಕೊಂಡು‌ ಜನಪ್ರಿಯ ಯೋಜನೆಗಳು ಇರಲಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಹಣಕಾಸು ಇಲಾಖೆ ಹಿರಿಯ ಅಧಿಕಾರಿಗಳಿಗೆ ಸಿಎಂ ಈ ಸೂಚನೆ ನೀಡಿ, ಕಾಂಗ್ರೆಸ್ ಗೃಹಲಕ್ಷ್ಮಿ ಯೋಜನೆಗೆ ಸಮರ್ಥವಾಗಿ ನಿಲ್ಲುವಂತಹ ಪ್ಲ್ಯಾನ್ ಮಾಡಿ ಎಂದಿದ್ದಾರೆ ಎಂದು ಹೇಳಲಾಗಿದೆ.ಗುರುರಾಘವೇಂದ್ರ, ವಸಿಷ್ಠ ಸೌಹಾರ್ದ ಬ್ಯಾಂಕ್ ಹಗರಣ ಸಿಬಿಐ ತನಿಖೆಗೆ : ಸಚಿವ ಎಸ್.ಟಿ. ಎಸ್

ಫೆಬ್ರವರಿ ಮೂರನೇ ವಾರದಲ್ಲಿ ರಾಜ್ಯ ಬಜೆಟ್ ಮಂಡಿಸಲು ಸಿಎಂ ಬಸವರಾಜ ಬೊಮ್ಮಾಯಿ ಸಿದ್ಧತೆ ನಡೆಸಿದ್ದಾರೆ.

ಚುನಾವಣೆ ಹತ್ತಿರದ ಬಜೆಟ್ ಆಗಿರುವ ಕಾರಣ ಬಂಪರ್ ಗಿಫ್ಟ್‌ಗಳ ಸುರಿಮಳೆ ಸಾಧ್ಯತೆ ಇದೆ.

ಜನಪ್ರಿಯ ಬಜೆಟ್ ಮಂಡಿಸಲು ಈಗಾಗಲೇ ಬ್ಲೂಪ್ರಿಂಟ್ ರೆಡಿ ಮಾಡುವಂತೆ ಸೂಚನೆ ನೀಡಿದ್ದಾರಂತೆ. ಕಾಂಗ್ರೆಸ್ ಪ್ರಣಾಳಿಕೆಯ ನಾಗಲೋಟಕ್ಕೆ ಬ್ರೇಕ್ ಹಾಕಲು ಸಿಎಂ ತಂತ್ರ ನಡೆಸಿದ್ದು, ಕಾಂಗ್ರೆಸ್ ಭರವಸೆಗಳ ಸುರಿಮಳೆಗೆ ತಡೆ ಹಾಕಲು ಬಜೆಟ್ ಘೋಷಣೆ ಅಸ್ತ್ರ ಪ್ರಯೋಗ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

Share This Article
Leave a comment