ಮೇಲುಕೋಟೆಯ ಚಲುವ ನಾರಾಯಣನಿಗೆ ಹರಕೆ ತೀರಿಸಿದ ಮಧ್ಯ ಪ್ರದೇಶ ಸಿಎಂ ಚೌವಾಣ್

Team Newsnap
2 Min Read

ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹರಕೆ ತೀರಿಸಲು ಬುಧವಾರ ಮೇಲುಕೋಟೆಗೆ ಆಗಮಿಸಿದ್ದರು.
ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಐತಿಹಾಸಿಕ ಧಾರ್ಮಿಕ ಕ್ಷೇತ್ರ ಮೇಲುಕೋಟೆಗೆ ಆಗಮಿಸಿದ
ಮಧ್ಯ ಪ್ರದೇಶ ಸಿಎಂಗೆ ಪೊಲೀಸರಿಂದ ಗೌರವ ವಂದನೆ ನೀಡಲಾಯಿತು.

ಮೇಲುಕೋಟೆ ಜೀಯರ್ ಮಠದ ಮುಂದೆ ಪೊಲೀಸ್ ಗೌರವ ಹಾಗೂ
ಜಿಲ್ಲಾಡಳಿತ, ಜೀಯರ್ ಮಠದಿಂದ
ಮಧ್ಯ ಪ್ರದೇಶ ಸಿಎಂಗೆ ಮಂಡ್ಯ ಡಿಸಿ ಡಾ. ವೆಂಕಟೇಶ್, ಜೀಯರ್ ಶ್ರೀ‌ ಸ್ವಾಗತಿಸಿದರು.

ಬಹುಮತಕ್ಕೆ ಅಗತ್ಯವಿದ್ದಷ್ಟು ಸ್ಥಾನ ಗೆಲುವಿಗಾಗಿ ಹರಕೆ ಕಟ್ಟಿಕೊಂಡಿದ್ದ ಚೌಹಾಣ್ ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ 28 ಸ್ಥಾನಗಳ ಪೈಕಿ 19ರಲ್ಲಿ ಗೆದ್ದಿದ್ದ ಬಿಜೆಪಿ ಗೆಲುವು ಸಾಧಿಸಿರುವುದಕ್ಕೆ ಹರಕೆ ಸಲ್ಲಿಸಿದ್ದಾರೆ.

ಮೇಲುಕೋಟೆ ಚಲುವ ನಾರಾಯಣಸ್ವಾಮಿಗೆ ಹರಕೆ ಕೋರಿಕೆ ಈಡೇರಿದ ಹಿನ್ನೆಲೆಯಲ್ಲಿ ಕುಟುಂಬ ಸಮೇತರಾಗಿ ಚಲುವನಾರಾಯಣಸ್ವಾಮಿ ದರ್ಶನ ಮಾಡಿದರು.

ಈ ಹಿಂದೆಯೂ ಎರಡು ಬಾರಿ ಮೇಲುಕೋಟೆಗೆ ಬಂದಿದ್ದ ಚೌಹಾಣ್
ಕಳೆದ ವರ್ಷ ನವೆಂಬರ್ ಗೆ ಬಂದು ಸಿಎಂ ಸ್ಥಾನಕ್ಕಾಗಿ ಹರಕೆ ಹೊತ್ತುಕೊಂಡಿದ್ದರು.

ಹರಕೆ ಕಟ್ಟಿಕೊಂಡಿದ್ದ ಕೆಲವೇ ತಿಂಗಳಲ್ಲಿ ಸಿಎಂ ಸ್ಥಾನಕ್ಕೇರಿದ್ದ ಚೌಹಾಣ್.
ಜೂನ್ 26ರಂದು 2ನೇ ಸಲ ಬಂದು ಹರಕೆ ತೀರಿಸಿ, ಹೊಸ ಹರಕೆ ಹೊತ್ತು ಕೊಂಡಿದ್ದರು.
ಮೂರನೇ ಬಾರಿಗೆ ಭೇಟಿ ನೀಡಿದ ಚೌಹಾಣ್ ಮೊದಲು ಜೀಯರ್ ಮಠಕ್ಕೆ ಭೇಟಿ.
ನಂತರ ಚಲುವನಾರಾಯಣ ಸ್ವಾಮಿ, ಬೆಟ್ಟದ ಯೋಗ ನರಸಿಂಹಸ್ವಾಮಿ ದೇವರುಗಳ ದರ್ಶನ ಮಾಡಿದರು.

ದೇವರ ಕೃಪೆಯಿಂದ ಸಿಎಂ ಆಗಿದ್ದೇನೆ.

ದೇಶದ ಮತ್ತು ಮಧ್ಯಪ್ರದೇಶದ ಜನರಿಗೆ ಒಳ್ಳೆಯದನ್ನು ಮಾಡುವಂತೆ ಪ್ರಾರ್ಥನೆ ಮಾಡಿದ್ದೇನೆ. ನಮ್ಮ ದೇಶದ ಪ್ರಧಾನಮಂತ್ರಿ ಆತ್ಮನಿರ್ಭರ ಸಂಕಲ್ಪ ಮಾಡಿದ್ದಾರೆ. ಆ ಸಂಕಲ್ಪ ಮಾಡಲು ಎಲ್ಲಾ ಪ್ರದೇಶಗಳಲ್ಲಿ ಆತ್ಮ ನಿರ್ಭರ ಮಾಡಬೇಕಿದೆ. ಈ ಸಂಕಲ್ಪಕ್ಕಾಗಿ ಮದ್ಯಪ್ರದೇಶದ ಜನರು ಕೂಡ ಸೇರಿ ಕೈಜೋಡಿಸುತ್ತೇವೆ ಎಂದು ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದರು.

ಚಲುವನಾರಾಯಣಸ್ವಾಮಿ ದರ್ಶನದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಚೌಹಾಣ್ ಈ ಕರೋನಾ ಮಹಾಮಾರಿ ತೊಲಗಿ ಜನರ ಹೃದಯದಲ್ಲಿ ಸಂತೋಷ ಬರುಬೇಕಿದೆ. ನಮ್ಮ ದೇಶ ಭಾರತ ಮತ್ತೊಮ್ಮೆ ವಿಶ್ವಗುರು ಆಗಬೇಕಿದೆ ಇದೇ ನನ್ನ ಪ್ರಾರ್ಥನೆಯನ್ನು ದೇವರಲ್ಲಿ ಮಾಡಿದ್ದೇನೆ ಎಂದರು.

ನಾನು ಸಿ.ಎಂ. ಆಗಲು ಮೇಲುಕೋಟೆ ಭಗವಂತನ ಆಜ್ಞೆ ಜೊತೆಗೆ ಕೃಪೆಯೂ ಇದೆ ಎಂದು ಮಧ್ಯಪ್ರದೇಶ ಸಿಎಂ ಹೇಳಿದರು.

Share This Article
Leave a comment