ಸಿಎಂ ಬೊಮ್ಮಾಯಿ ಪಿಎಗೆ ಹನಿಟ್ರ್ಯಾಪ್; ಬ್ಲಾಕ್ ಮೇಲ್ ಮಾಡಿದ ಯುವತಿ

Team Newsnap
1 Min Read
Beware of Fraudsters (Banker's Diary)

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಪಿಎ ಹರೀಶ್ ಎಂಬುವವರನ್ನು ಮಹಿಳೆ ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಿದ್ದಾಳೆ.

ಈ ಮೂಲಕ ಸರ್ಕಾರದ ಮಹತ್ವದ ದಾಖಲೆಗಳನ್ನು ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ.ಪಡಿತರ ಚೀಟಿದಾರರಿಗೆ ಇನ್ಮುಂದೆ ಕೇಂದ್ರದಿಂದ 21 ಕೆಜಿ ಗೋಧಿ ಮತ್ತು 14 ಕೆಜಿ ಅಕ್ಕಿ?

ಪರಿಷತ್ ಡಿ ದರ್ಜೆ ನೌಕರಳಾಗಿರುವ ಯುವತಿ ಸಿಎಂ ಬೊಮ್ಮಾಯಿ ಅವರ ಪಿಎ ಆಗಿರುವ ಹರೀಶ್ ಅವರಿಗೆ ಹನಿಟ್ರ್ಯಾಪ್ ಮಾಡಿದ್ದಾಳೆ . ಬಳಿಕ ಬ್ಲ್ಯಾಕ್ ಮೇಲ್ ಮೂಲಕ ಹಲವು ಮಹತ್ವದ ದಾಖಲೆಗಳನ್ನು ಪಡೆದಿದ್ದಾಳೆ.

ಅಷ್ಟು ಮಾತ್ರವಲ್ಲದೇ ಹಣ ವಸೂಲಿಯನ್ನೂ ಮಾಡಿದ್ದಾಳೆ ಹೀಗೆ ಪಡೆದ ದಾಖಲೆಗಳನ್ನು ವಿಪಕ್ಷಗಳಿಗೆ ನೀಡಿರುವ ಅನುಮಾನವಿದೆ ಎಂದು ಜನ್ಮಭೂಮಿ ಫೌಂಡೇಶನ್ ಅಧ್ಯಕ್ಷ ನಟರಾಜ್ ಶರ್ಮಾ ವಿಧಾನಸೌಧ ಠಾಣೆಯಲ್ಲಿ ದೂರು ನೀಡಿದ್ದಾರೆ

ಆರಂಭದಲ್ಲಿ ಯುವತಿ ಪಿಎ ಹರೀಶ್ ಜೊತೆ ಸಲುಗೆ ಬೆಳೆಸಿ ಟ್ರ್ಯಾಪ್ ಮಾಡಿದ್ದಾಳೆ. ಬಳಿಕ ಹನಿಟ್ರ್ಯಾಪ್ ಮಾಡಿ ಬ್ಲ್ಯಾಕ್ ಮೇಲ್ ಮೂಲಕ ದಾಖಲೆಗಳನ್ನು ಪಡೆದುಕೊಂಡಿದ್ದಾಳೆ. ಹನಿಟ್ರ್ಯಾಪ್ ಗೆ ಒಳಗಾಗಿದ್ದ ಹರೀಶ್ ಅವರನ್ನು ಈಗಾಗಲೇ ಸೇವೆಯಿಂದ ತೆಗೆದು ಹಾಕಲಾಗಿದೆ ಎನ್ನಲಾಗಿದೆ. ಈ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆ ನಡೆಸುವಂತೆ ದೂರು ದಾಖಲಿಸಲಾಗಿದೆ.

Share This Article
Leave a comment