ಸೆಪ್ಟಂಬರ್ 10 ರೊಳಗೆ ಮೈಶುಗರ್ ಕಾರ್ಖಾನೆ ಆರಂಭಿಸಲು ಸಿದ್ದತೆ ಮಾಡಲಾಗಿದೆ. ಸಿಎಂ ಬೊಮ್ಮಾಯಿ ಮೈಷುಗರ್ ಗೆ ಚಾಲನೆ ನೀಡಲಿದ್ದಾರೆ ಎಂದು ಮಂಡ್ಯದಲ್ಲಿ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಭಾನುವಾರ ಪ್ರಕಟಿಸಿದರು.
ಮೈಷುಗರ್ ಕಾರ್ಖಾನೆ ಗೆ ನೀಡಿ ಪರಿಶೀಲನೆ ಮಾಡಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು
ಗಣೇಶ ಚತುರ್ಥಿ ದಿನದಿಂದಲೇ ರೈತರಿಂದ ಕಬ್ಬು ಖರೀದಿ ಮಾಡುವ ಪ್ರಕ್ರಿಯೆ ಆರಂಭವಾಗಲಿದೆ
ಈಗಾಗಲೇ 4 ಲಕ್ಷ ಟನ್ ಕಬ್ಬು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು.
ಮೈಶುಗರ್ ಮತ್ತೆ ನಷ್ಟಕ್ಕೆ ಹೋಗದ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ತಾಂತ್ರಿಕ ಸಮಿತಿ ವರದಿ ಆಧರಿಸಿಯೇ ಕಾರ್ಖಾನೆ ಪುನರಾಂಭಿಸುತ್ತೇವೆ. ಹಣ ಪೋಲಾಗುವುದನ್ನು ತಡೆಗಟ್ಟಲಾಗುವುದು ಎಂದರು.
ಕಳೆದ ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ ಕಾರ್ಖಾನೆಯನ್ನು ಸೆ. 10 ರೊಳಗೆ ಮೈಶುಗರ್ ಅಧಿಕೃತ ಚಾಲನೆ ನೀಡಲು ಸಿಎಂ ಬಸವರಾಜ ಬೊಮ್ಮಾಯಿ ಮಂಡ್ಯಕ್ಕೆ ಬರುವುದಾಗಿ ಎಂದು ಹೇಳಿದ್ದಾರೆ.
ಹೆಮ್ಮೆಯ ಫ್ಯಾಕ್ಟರಿ ಯಾವತ್ತು ಬಂದ್ ಆಗದಂತೆ ನೋಡಿಕೊಳ್ಳಲು ತೀರ್ಮಾನಿಸಿದ್ದೇವೆ. ಅಲ್ಲದೆ
ಎಥನಾಲ್ ಉತ್ಪಾದನೆ ಮಾಡುವ ಹೆಜ್ಜೆ ಇಟ್ಟಿದ್ದೇವೆ. ಸಿಎಂ ಆನಿರ್ಧಾರವನ್ನು ಘೋಷಣೆ ಮಾಡಲಿದ್ದಾರೆ ಎಂದು ತಿಳಿಸಿದರು.
ಬ್ಯಾಂಕೂ ಮುಗ್ಧ ಗ್ರಾಹಕರೂ (ಬ್ಯಾಂಕರ್ಸ್ ಡೈರಿ)
ಈ ಬಾರಿ ಹಣಕಾಸು ತೊಂದರೆಯಾಗದಂತೆ ಸರ್ಕಾರವೇ ನೋಡಿಕೊಳ್ಳುತ್ತೆ. 31 ಕೋಟಿ ಕೆಇಬಿ ಬಾಕಿ ಇತ್ತು.
ಹೀಗಾಗಿ ಕಾರ್ಖಾನೆಗೆ ಕರೆಂಟ್ ಕೂಡ ಇರಲಿಲ್ಲ. ನಮ್ಮ ಸರ್ಕಾರ ಆ ಸಮಸ್ಯೆಯನ್ನು ಬಗೆಹರಿಸಿದೆ.
ಅದೇ ರೀತಿ ಎಲ್ಲಾ ಸರಿದೂಗಿಸಿ ಕಾರ್ಖಾನೆ ಆರಂಭಿಸುತ್ತಿದ್ದೇವೆ. ಫ್ಯಾಕ್ಟರಿಯನ್ನು ಸರ್ಕಾರಿ ನಿಯಂತ್ರಣದಲ್ಲೇ
ಪಾರದರ್ಶಕವಾಗಿ ಕಾರ್ಖಾನೆ ನಡೆಸುತ್ತೇವೆ ಎಂದು ಸಕ್ಕರೆ ಸಚಿವ ಶಂಕರ್ ಬಿ.ಪಾಟೀಲ್ ಮುನೇನಕೊಪ್ಪ ಹೇಳಿದರು.
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
- ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ
- ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
- ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
ಆಯೋಧ್ಯೆ ರಾಮಮಂದಿರಕ್ಕೆ ಸ್ಫೋಟದ ಬೆದರಿಕೆ: ಆರ್ಡಿಎಕ್ಸ್ ಬಳಸಿ ಧ್ವಂಸಗೊಳಿಸುವ ಎಚ್ಚರಿಕೆ