ಕೆ ಆರ್ ಎಸ್ – ಕಬಿನಿಗೆ ಬಾಗಿನ ಅಪಿ೯ಸಿದ ಸಿಎಂ ಬಸವರಾಜ್

Team Newsnap
1 Min Read

ಸಿಎಂ ಬಸವರಾಜ ಬೊಮ್ಮಾಯಿ ಮಂಗಳವಾರ ಕೆಆರ್​​ಎಸ್​​ ಹಾಗೂ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಿದರು

ಮೊದಲು ಕೆಆರ್​​ಎಸ್​ನಲ್ಲಿ ಬಾಗಿನ ಅರ್ಪಿಸಿದ ಸಿಎಂ ಬಳಿಕ ಮೈಸೂರಿನ ಜಿಲ್ಲೆ ಹೆಚ್.ಡಿ.ಕೋಟೆಯಲ್ಲಿರುವ ಕಬಿನಿ ಜಲಾಶಯದಲ್ಲಿ ಅರ್ಪಿಸಿದರು.

ಕಾವೇರಿಗೆ ಬಾಗಿನ ಅರ್ಪಣೆ ಹಿನ್ನೆಲೆಯಲ್ಲಿ ಕೆ.ಆರ್.ಎಸ್ ಅಣೆಕಟನ್ನು ತಳಿರು ತೋರಣ, ಹೂಗಳಿಂದ‌ ಸಿಂಗಾರಗೊಳಿಸಲಾಗಿತ್ತು.

ಅಣೆಕಟ್ಟು ಮುಖ್ಯದ್ವಾರದ ಎದುರು ಪುನೀತ್ ರಾಜಕುಮಾರ್ ಗೆ ಸಿಎಂ ಮುತ್ತಿಟ್ಟ ಫ್ಲೆಕ್ಸ್ ಅಳವಡಿಕೆ ಮಾಡಲಾಗಿತ್ತು. ಮುಖ್ಯದ್ವಾರದಲ್ಲಿ ಅಳವಡಿಕೆ ಮಾಡಿರುವುದರಿಂದ ಫ್ಲೆಕ್ಸ್​ ಕಾರ್ಯಕ್ರಮದ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು.

KRS1

ಸಿಎಂ ಬಾಗಿನ ಅರ್ಪಣೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಜಲಾಶಯದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಇತ್ತ ಪುಷ್ಪಾಲಂಕಾರದಿಂದ ಜಲಾಶಯ ಕಂಗೊಳಿಸುತ್ತಿತ್ತು.

ಕಪಿಲೆಗೆ ಪೂಜೆ ಸಲ್ಲಿಸಿ ಸಿಎಂ ಬಾಗಿನ ಸಮರ್ಪಣೆ ಮಾಡಿದರು. ಈ ವೇಳೆ ವೀಕ್ಷಿಸಿದ ಉಸ್ತುವಾರಿ ಸಚಿವ‌ ಎಸ್​​.ಟಿ ಸೋಮಶೇಖರ್, ಶಾಸಕ ಅನಿಲ್ ಚಿಕ್ಕಮಾಧು, ಜಿಲ್ಲಾಧಿಕಾರಿ ಬಗಾದಿ ಗೌತಮ್ ಈ ಸಂದರ್ಭದಲ್ಲಿ ಹಾಜರಿದ್ದರು.

ಕೆಆರ್ ಎಸ್ ಮಾದರಿ ಅಭಿವೃದ್ದಿ :

ಕಬಿನಿಯಲ್ಲಿ ಬಾಗಿನ ಅರ್ಪಣೆ ಬಳಿಕ ಮಾತನಾಡಿದ ಸಿಎಂ, ರಾಜ್ಯದಲ್ಲಿ ಜಲಾಶಯಗಳು ತುಂಬಿವೆ. ಜಲಾಶಯಗಳಿಗೆ ಬಾಗಿನ ಅರ್ಪಿಸುವುದು ಖುಷಿಯ ವಿಚಾರ. ನಮಗಿಂತ ರೈತರಿಗೆ ಖುಷಿಯಾದರೆ ನಮಗೆ ಸಂತೋಷ. ಈ ಹಿಂದೆ ಕೂಡ ನೀರಾವರಿ ಸಚಿವನಾಗಿ ಬಾಗಿನ ಅರ್ಪಿಸಿದ್ದೇನೆ. ಕಬಿನಿ ಜಲಾಶಯದ ಮುಂದೆ ಬೃಂದಾವನ ಮಾದರಿ ಮಾಡುವ ಪ್ರಸ್ತಾಪ ಹಿಂದಿನಿಂದಲೂ ಇದೆ. ಅದನ್ನೆಲ್ಲ ಪರಿಶೀಲನೆ ಮಾಡುತ್ತೇವೆ‌ ಎಂದರು.

Share This Article
Leave a comment