ಸಿಎಲ್ ಪಿ ಸಭೆ- ಸಿದ್ದುಗೆ 75, ಡಿಕೆಶಿಗೆ 40 ಶಾಸಕರ ಬೆಂಬಲ – ಎಐಸಿಸಿ ಅಂಗಳಕ್ಕೆ ಸಿಎಂ ಆಯ್ಕೆ ಚೆಂಡು

Team Newsnap
1 Min Read

ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ ಭಾನುವಾರ ಸಂಜೆ ನಡೆಯಿತು. ಈ ಮಹತ್ವದ ಸಭೆಯಲ್ಲಿ ಸಿಎಲ್ ಪಿ ನಾಯಕನಾಗಿ ಯಾರನ್ನು ಆಯ್ಕೆ ಮಾಡಬೇಕು ಎನ್ನುವ ಬಗ್ಗೆ ಒಂದೇ ಸಾಲಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿರ್ಧಾರಕ್ಕೆ ಬಿಡುವಂತ ನಿರ್ಣಯವನ್ನು ಕೈಗೊಳ್ಳಲಾಗಿದೆ.

ನಾಳೆಯೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯು ಮುಂದುವರೆಯಲಿದೆ ಒಬ್ಬೊಬ್ಬರಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಂದೆ ಶಾಸಕರು ತಮ್ಮ ಸಿಎಂ ಅಭ್ಯರ್ಥಿಯ ಆಯ್ಕೆಯ ಮಾಹಿತಿಯನ್ನು ಮುಂದಿಡಲಿದ್ದಾರೆ.

ಇಂದಿನ ಮಹತ್ವದ ಸಿಎಲ್ ಪಿ ಸಭೆಗೆ ಅನೇಕ ಶಾಸಕರು ಬರಲು ಸಾಧ್ಯವಾಗಿರಲಿಲ್ಲ. ಎಲ್ಲಾ ಶಾಸಕರು ನಿರ್ಧಾರವನ್ನು ಎಐಸಿಸಿ ಅಧ್ಯಕ್ಷರಿಗೆ ಬಿಡಲು ನಿರ್ಧರಿಸಿದರು.

ಸಿದ್ದರಾಮಯ್ಯ ಪರ ಸುಮಾರು 75 ಶಾಸಕರ ಬೆಂಬಲವಿದ್ದರೆ, ಶಿವಕುಮಾರ್ ಅವರಿಗೆ ಸುಮಾರು 40 ಶಾಸಕರ ಬೆಂಬಲವಿದೆ ಎನ್ನಲಾಗುತ್ತಿದೆ.

ಈ ಕಾರಣಕ್ಕಾಗಿ ಎಐಸಿಸಿ ಅಧ್ಯಕ್ಷರು ಶಾಸಕರನ್ನು ಒಬ್ಬೊಬ್ಬರಾಗಿ ಭೇಟಿಯಾಗಿ ಸಿಎಲ್ಪಿ ನಾಯಕನ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

ಕಾಂಗ್ರೆಸ್ ಶಾಸಕಾಂಗ ಸಭೆ ಅಂತ್ಯ:

ಒಂದೇ ಸಾಲಿನ ನಿರ್ಣಯ ಕೈಗೊಂಡು ನೂತನ ಸಿಎಂ ಆಯ್ಕೆ ಹೈಕಮಾಂಡ್ ನಿರ್ಧಾರಕ್ಕೆ ಬಿಡಲಾಗಿದೆ,

ಸಿಎಲ್ ಪಿ ತನ್ನ ವರದಿಯನ್ನು ಪಕ್ಷದ ಹೈಕಮಾಂಡ್ ಗೆ ಕಳುಹಿಸಲಿದ್ದು, ಅವರು ಮುಂದಿನ ಕರ್ನಾಟಕದ ಮುಖ್ಯಮಂತ್ರಿಯ ಹೆಸರನ್ನು ಆಯ್ಕೆ ಮಾಡಿ ಘೋಷಿಸಲಿದ್ದಾರೆ. ಹೀಗಾಗಿ ಕರ್ನಾಟಕದ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದೇ ತೀವ್ರ ಕುತೂಹಲ ಕೆರಳಿಸಿದೆ.

Share This Article
Leave a comment