ಔಷಧವೊಂದರ ಪ್ರಾಯೋಗಿಕ ಚಿಕಿತ್ಸೆ : 18 ರೋಗಿಗಳೂ ಕ್ಯಾನ್ಸರ್‌ ಮುಕ್ತ

Team Newsnap
1 Min Read

“ಡೋಸ್ಟರ್‌ಲಿಮಾಬ್‌’ ಎಂಬ ಔಷಧವನ್ನು ಗುದನಾಳದ ಕ್ಯಾನ್ಸರ್‌ಗೆ ತುತ್ತಾಗಿದ್ದ ಸುಮಾರು 18 ರೋಗಿಗಳಿಗೆ ಕಳೆದ 6 ತಿಂಗಳಿಂದ ಪರೀಕ್ಷಾರ್ಥವಾಗಿ ಔಷಧ ನೀಡಲಾಗುತ್ತಿತ್ತು. ಔಷಧವೊಂದರ ಪ್ರಾಯೋಗಿಕ ಚಿಕಿತ್ಸೆಗೆ ಒಳಗಾಗಿದ್ದ ಎಲ್ಲಾ ರೋಗಿಗಳು ಗುಣಮುಖರಾಗಿದ್ದಾರೆ.

ಎಂಡೋಸ್ಕೋಪಿ, ಪಾಸಿಟ್ರನ್‌ ಎಮಿಷನ್‌ ಟೋಮೋಗ್ರಫಿ , ಪಿಇಟಿ ಸ್ಕ್ಯಾನ್‌ ಮತ್ತು ಎಂಆರ್‌ಐ ಸ್ಕ್ಯಾನ್‌… ಹೀಗೆ ಎಲ್ಲ ರೀತಿಯ ಪರೀಕ್ಷೆಗೆ ಒಳಪಡಿಸಿದರೂ, ಅವರಲ್ಲಿದ್ದ ಕ್ಯಾನ್ಸರ್‌ ಗೆಡ್ಡೆಗಳು ಕಾಣಿಸುತ್ತಿಲ್ಲ! ಚಿಕಿತ್ಸೆಯ ಕೊನೆಯ ಹಂತದಲ್ಲಿ ರೋಗಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಎಲ್ಲಾ 18 ಮಂದಿಯಲ್ಲೂ ಕ್ಯಾನ್ಸರ್‌ ನಿರ್ಮೂಲನೆಯಾಗಿದೆ. ರೋಗಿಗಳು ಕ್ಯಾನ್ಸರ್ ನಿಂದ ಮುಕ್ತರಾದ ಸಂತಸದಲ್ಲಿದ್ದಾರೆ.

ಇದನ್ನು ಓದಿ –ವಿಶ್ವ ನಗು ದಿನ – 2022

ಭರವಸೆ ಮೂಡಿಸಿದ ಪ್ರಯೋಗ:
ನ್ಯೂಯಾರ್ಕ್‌ನ ಮೆಮೋರಿಯಲ್‌ ಸ್ಲೋವನ್‌ ಕೆಟರಿಂಗ್‌ ಕ್ಯಾನ್ಸರ್‌ ಕೇಂದ್ರದ ಡಾ. ಲೂಯಿಸ್‌ ಎ ಡಿಯಾಜ್‌ ಜೆ “ಇಂಥದ್ದೊಂದು ಪವಾಡ ನಡೆದಿರುವುದು ಕ್ಯಾನ್ಸರ್‌ ಇತಿಹಾಸದಲ್ಲಿ ಮೊದಲು’ ಈ ಸಂಶೋಧನೆಯು ವೈದ್ಯಕೀಯ ಜಗತ್ತಿನಲ್ಲೇ ಸಂಚಲನ, ಹೊಸ ಭರವಸೆಯನ್ನು ಮೂಡಿಸಿದೆ ಎಂದೂ ಅವರು ತಿಳಿಸಿದ್ದಾರೆ.

Share This Article
Leave a comment