December 19, 2024

Newsnap Kannada

The World at your finger tips!

mysuru , news , politics

ಮೋದಿ ಸಾಗಿದ ರಸ್ತೆಗೆ ಸಗಣಿ ನೀರಿನ ಶುದ್ಧೀಕರಣ: ಕೈ ಕಾರ್ಯಕರ್ತರ ವಿರುದ್ಧ ಕೇಸ್‌

Spread the love

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೈಸೂರಿನಲ್ಲಿ ರೋಡ್ ಶೋ ನಡೆಸಿದ ಮಾರ್ಗವನ್ನು ಕಾಂಗ್ರೆಸ್ ಕಾರ್ಯಕರ್ತರು ಸಗಣಿ, ಗಂಜಲದಿಂದ ಶುದ್ಧೀಕರಣಗೊಳಿಸಿದ್ದಾರೆ.

ಮೈಸೂರು ಜಿಲ್ಲೆಯ ಒಟ್ಟು 11 ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಭರ್ಜರಿ ಗೆಲುವು ಸಾಧಿಸಿದೆ ಬಿಜೆಪಿಗೆ ತೀವ್ರ ಮುಖಭಂಗವಾಗಿದೆ.

ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ರೋಡ್ ಶೋ ನಡೆಸಿದ ಮಾರ್ಗವನ್ನು ಕಾಂಗ್ರೆಸ್ ಕಾರ್ಯಕರ್ತರು ಸಗಣಿ, ಗಂಜಲದಿಂದ ಶುದ್ಧೀಕರಣಗೊಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಶುದ್ಧೀಕರಣ ಕಾರ್ಯದ ನೇತೃತ್ವ ವಹಿಸಿದ್ದ ಮೈಸೂರು ನಗರದ ವಿದ್ಯಾರಣ್ಯಪುರ ನಿವಾಸಿ ಕಂಸಾಳೆ ರವಿ ‘ದಸರಾದಲ್ಲಿ ಜಂಬೂಸವಾರಿ ಸಾಗುವ ರಾಜ ಮಾರ್ಗವನ್ನು ರೋಡ್ ಶೋ ಮಾಡಿ ಅಪವಿತ್ರಗೊಳಿಸಲಾಗಿದೆ. ಮೈಸೂರು ರಾಜ ಮನೆತನ ಮತ್ತು ಚಾಮುಂಡೇಶ್ವರಿ ದೇವಿಯ ಭಕ್ತರಾದ ನಮಗೆ ಈ ಘಟನೆಯಿಂದ ಬಹಳ ನೋವಾಗಿದೆ ಹಾಗೂ ಬೇಸರವಾಗಿದೆ’ ಎಂದು ಹೇಳಿದರು.

ರೋಡ್ ಶೋ ಮೂಲಕ ಚುನಾವಣಾ ಪ್ರಚಾರ ಮಾಡಿದ್ದ ಪ್ರಧಾನಿ, ನಾಡದೇವಿ ಚಾಮುಂಡೇಶ್ವರಿ ಜಂಬೂಸವಾರಿ ಮೆರವಣಿಗೆ ಸಾಗುವ ದಾರಿಯಲ್ಲಿ ತೆರಳಿ ಅಪವಿತ್ರಗೊಳಿಸಿದ್ದಾರೆ. ಇದರಿಂದ ಅವರು ಸಾಗಿದ ಮಾರ್ಗವನ್ನು ಸಗಣಿ, ಗಂಜಲದಿಂದ ಶುದ್ಧೀಕರಣ ಗೊಳಿಸಿದ್ದೇವೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಹೇಳಿದ್ದಾರೆ.

ಪೊಲೀಸರಿಂದ ತಡೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರೋಡ್ ಶೋ ನಡೆಸಿದ ಮಾರ್ಗ ಶುದ್ಧೀಕರಣ ಕಾರ್ಯ ಕೆ.ಆರ್.ವೃತ್ತದಿಂದ ಆರಂಭವಾಗಿ ಸಯ್ಯಾಜಿ ರಾವ್ ರಸ್ತೆಯ ದೊಡ್ಡಾಸ್ಪತ್ರೆಗೆ ಸಾಗಿದ್ದು, ಸಯ್ಯಾಜಿ ರಾವ್ ರಸ್ತೆ ವೃತ್ತದ ಬಳಿ ಪೊಲೀಸರು ತಡೆದಿದ್ದಾರೆ.ಸಿಎಲ್ ಪಿ ಸಭೆ- ಸಿದ್ದುಗೆ 75, ಡಿಕೆಶಿಗೆ 40 ಶಾಸಕರ ಬೆಂಬಲ – ಎಐಸಿಸಿ ಅಂಗಳಕ್ಕೆ ಸಿಎಂ ಆಯ್ಕೆ ಚೆಂಡು

ಘಟನೆ ಸಂಬಂಧ ದೇವರಾಜ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಸಾರ್ವಜನಿಕವಾಗಿ ಅಶಾಂತಿ ಸೃಷ್ಟಿಸಿದ ಪ್ರಕರಣ ದಾಖಲಿಸಲಾಗಿದೆ.

Copyright © All rights reserved Newsnap | Newsever by AF themes.
error: Content is protected !!