ಮೈಸೂರು: ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವು ಜುಲೈ 27ರಿಂದ ಅಕ್ಟೋಬರ್ 26ರ ವರೆಗೆ ರಾಜ್ಯದ ವಿವಿಧೆಡೆ ಪ್ರಚಾರೋಪನ್ಯಾಸ ಮಾಲೆಯನ್ನು ಏರ್ಪಡಿಸಿದೆ.
27ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಚಾರೋಪನ್ಯಾಸ ಮಾಲೆಯ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದೆ.
ನಂತರ ಡಾ.ಅಂಬಳಿಕೆ ಹಿರಿಯಣ್ಣ ‘ಜಾನಪದ ಸಂಗ್ರಹ ಅಧ್ಯಯನ: ಪ್ರಾರಂಭಿಕ ಪ್ರಯತ್ನಗಳು’ ಕುರಿತು ಉಪನ್ಯಾಸ ನೀಡುವರು.
ಆಗಸ್ಟ್ 2ರಂದು ಬೆಳಿಗ್ಗೆ 11 ಗಂಟೆಗೆ ಚಾಮರಾಜನಗರದ ವಿಶ್ವವಿದ್ಯಾಲಯದಲ್ಲಿ ಡಾ.ಎಂ.ಜಿ.ಮಂಜುನಾಥ್ ಅವರು ‘ಕನ್ನಡ ಶಾಸನಗಳ ಅಧ್ಯಯನ: ಪ್ರಾರಂಭಿಕ ಪ್ರಯತ್ನಗಳು’ ಕುರಿತು ಮಾತನಾಡುವರು.
ಆಗಸ್ಟ್ 8ರಂದು ಬೆಳಿಗ್ಗೆ 11 ಗಂಟೆಗೆ ಹಾಸನದ ಹಾಸನ ವಿಶ್ವವಿದ್ಯಾಲಯದಲ್ಲಿ ಡಾ.ಎಫ್.ಟಿ.ಹಳ್ಳಿಕೇರಿ ಅವರು ‘ಕನ್ನಡ ಹಸ್ತಪ್ರತಿ ಅಧ್ಯಯನ’ ಕುರಿತು ಉಪನ್ಯಾಸ ನೀಡುವರು.
ಆಗಸ್ಟ್ 18ರಂದು ಬೆಳಿಗ್ಗೆ 11 ಗಂಟೆಗೆ ಉಜಿರೆಯ ಎಸ್ ಡಿಎಂ ಕಾಲೇಜಿನಲ್ಲಿ ಡಾ.ತಾಳ್ತಜೆ ವಸಂತಕುಮಾರ್ ಅವರು ‘ಪ್ರಾಚೀನ ಕನ್ನಡ ಸಾಹಿತ್ಯ ಅಧ್ಯಯನ’ ಕುರಿತು.
ಸೆಪ್ಟೆಂಬರ್ 4ರಂದು ಬೆಳಿಗ್ಗೆ 11 ಗಂಟೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರೊ.ಎನ್.ಎಸ್. ರಂಗರಾಜು ಅವರು ‘ಕರ್ನಾಟಕದಲ್ಲಿ ಪುರಾತತ್ವ ಅಧ್ಯಯನ’ ಕುರಿತು ಮಾತನಾಡುವರು.
ಸೆಪ್ಟೆಂಬರ್ 7ರಂದು ಬೆಳಿಗ್ಗೆ 11 ಗಂಟೆಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಡಾ.ಎಸ್.ಕಾರ್ತಿಕ್ ಅವರು ‘ ಕನ್ನಡ ನಿಘಂಟು ರಚನೆ’ ಕುರಿತು, ಸೆಪ್ಟೆಂಬರ್ 29ರಂದು ಬೆಳಿಗ್ಗೆ 11 ಗಂಟೆಗೆ ಮಂಗಳೂರು ವಿಶ್ವವಿದ್ಯಾಲಯದ ಕೊಣಾಜೆಯಲ್ಲಿ ಡಾ.ಎ.ವಿ.ನಾವಡ ‘ ಕನ್ನಡ ಸಾಹಿತ್ಯ ಚರಿತ್ರೆ’ ಕುರಿತು ಉಪನ್ಯಾಸ ನೀಡುವರು.
ಅಕ್ಟೋಬರ್ 10ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಡಾ.ಎ.ಮುರಿಗೆಪ್ಪ ‘ಕನ್ನಡ ಭಾಷಾ ವಿಜ್ಞಾನ ಅಧ್ಯಯನ’ ಕುರಿತು ಮಾತನಾಡುವರು.
ಅಕ್ಟೋಬರ್ 16ರಂದು ಬೆಳಿಗ್ಗೆ 11 ಗಂಟೆಗೆ ಮಡಿಕೇರಿಯ ಕೊಡಗು ವಿಶ್ವವಿದ್ಯಾಲಯದಲ್ಲಿ ಡಾ.ಆರ್ವಿಯಸ್ ಸುಂದರಂ ‘ಕವಿರಾಜಮಾರ್ಗ: ಹೊಸ ಓದು’ ಕುರಿತು ಮಾತನಾಡುವರು.
ಅಕ್ಟೋಬರ್ 26ರಂದು ಬೆಳಿಗ್ಗೆ 11 ಗಂಟೆಗೆ ಉಪನ್ಯಾಸ ಮಾಲೆಯ ಕೊನೆಯ ಕಂತು ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಡಾ.ಪಾದೇಕಲ್ಲು ವಿಷ್ಣುಭಟ್ ‘ಕನ್ನಡ ಲಕ್ಷಣ ಗ್ರಂಥಗಳ ಅಧ್ಯಯನ’ ಕುರಿತು ಮಾತನಾಡುವರು.ಅಂದಿನ ಪರಿಸ್ಥಿತಿ ನೋಡಿಕೊಂಡು ಬಿಜೆಪಿ – ಜೆಡಿಎಸ್ ಮೈತ್ರಿ ನಿರ್ಧಾರ – ದೇವೇಗೌಡ
ಕಸಾಪ ನಿಕಟಪೂರ್ವ ಅಧ್ಯಕ್ಷ ಡಾ.ಮನು ಬಳಿಗಾರ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಪ್ರೊ.ಶೈಲೇಂದ್ರ ಮೋಹನ್ ಅಧ್ಯಕ್ಷತೆ ವಹಿಸಲಿದ್ದಾರೆ.
- ಮೀಸಲಾತಿ ಹಕ್ಕುಗಳಿಗೆ ಆಗ್ರಹಿಸಿ ರಾಯಚೂರಿನಲ್ಲಿ ಬಂದ್
- ದೇವಿ ಆರಾಧಕರ ವಿಶೇಷ ಪರ್ವ ನವರಾತ್ರಿ
- ಜರ್ಮನ್ ಏಕತಾ ದಿನ | German Unity Day in kannada
- ಡಿ.29ಕ್ಕೆ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಮರುಪರೀಕ್ಷೆ
- ಮೈಸೂರು ದಸರಾ 2024: ನಾಳೆ ಉದ್ಘಾಟನೆ, ವಿಶೇಷ ಕಾರ್ಯಕ್ರಮಗಳ ವಿವರ
- ಕರ್ತವ್ಯ ನಿರತ ಪೊಲೀಸ್ ಪೇದೆ ಹೃದಯಘಾತದಿಂದ ಸಾವು
More Stories
ಮೀಸಲಾತಿ ಹಕ್ಕುಗಳಿಗೆ ಆಗ್ರಹಿಸಿ ರಾಯಚೂರಿನಲ್ಲಿ ಬಂದ್
ದೇವಿ ಆರಾಧಕರ ವಿಶೇಷ ಪರ್ವ ನವರಾತ್ರಿ
ಜರ್ಮನ್ ಏಕತಾ ದಿನ | German Unity Day in kannada