ಕೊರೋನಾ ಸಂಕಷ್ಟ ದೇಶದಲ್ಲಿ ತಾಂಡವವಾಡುತ್ತಿದೆ ಹೀಗಾಗಿ ಪೌರತ್ವ ಕಾಯ್ದೆ ತಿದ್ದುಪಡಿ ಜಾರಿಗೆ ತರಲು ವಿಳಂಬವಾಯಿತು. ಈಗ ಪರಿಸ್ಥಿತಿ ಸುಧಾರಣೆಗೊಂಡಂತೆ ಅದರ ಕೆಲಸಗಳೂ ಆರಂಭವಾಗಿವೆ.* ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದರು.
ಉತ್ತರ ಬಂಗಾಳ ಸಮುದಾಯ ಗುಂಪುಗಳ ಸಭೆಯಲ್ಲಿ ಮಾತನಾಡಿದ ಅವರು ‘ಕೋವಿಡ್‌ನ ಕಾರಣದಿಂದ ಪೌರತ್ವ ತಿದ್ದುಪಡಿ ಜಾರಿಗೆ ತರುವಲ್ಲಿ ತಡವಾಯ್ತು. ಪ್ರಸ್ತುತ ಪರಿಸ್ಥಿತಿ ತಿಳಿಯಾಗಿರುವುದರಿಂದ, ಕಾಯ್ದೆಯ ಕೆಲಸಗಳು ಮರು ಆರಂಭಗೊಂಡಿವೆ. ಸಂಸತ್ತಿನಲ್ಲಾಗಲೇ ಪೌರತ್ವ ತಿದ್ದುಪಡಿಯನ್ನು ಅಂಗೀಕಾರ ಮಾಡಲಾಗಿದೆ. ನಾವೆಲ್ಲರೂ ಅದಕ್ಕೆ ಬದ್ಧರಿದ್ದೇವೆ’ ಎಂದು ಹೇಳಿದರು.
ಇದೇ ವೇಳೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಆಡಳಿತದ ಬಗ್ಗೆ ಮಾತನಾಡಿದ ನಡ್ಡಾ ‘ತೃಣಮೂಲ ಕಾಂಗ್ರೆಸ್‌ನ ಹಿತಾಸಕ್ತಿಗೋಸ್ಕರ ಪಶ್ಚಿಮ ಬಂಗಾಳ ಸರ್ಕಾರವು ವಿಭಜಕ ಆಡಳಿತ ನಡೆಸುತ್ತಿದೆ’ ಎಂದು ಆರೋಪಿಸಿದರು.
More Stories
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್: ಗೃಹಸಚಿವ ಪರಮೇಶ್ವರ್ ದೃಢೀಕರಣ
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ