December 19, 2024

Newsnap Kannada

The World at your finger tips!

god

ಕಾಳಿ ಮಾತೆ ಬಾಯಲ್ಲಿ ಸಿಗರೇಟ್​! ಕ್ಷಮೆ ಕೇಳದ ನಿರ್ದೇಶಕಿ ಲೀನಾ ಮಣಿಮೇಕಲೈ

Spread the love

ಸಾಕ್ಷ್ಯಚಿತ್ರವೊಂದರಲ್ಲಿ ಹಿಂದು ದೇವತೆಗೆ ಅಪಮಾನ ಮಾಡಿರುವ ಘಟನೆ ನಡೆದಿದೆ.

ಹಿಂದೂಗಳು ಆರಾಧಿಸುವ ಕಾಳಿ ಮಾತೆಯ ಬಾಯಲ್ಲಿ ಸಿಗರೇಟ್​ ಇಟ್ಟು ತಮಿಳುನಾಡು ನಿರ್ದೇಶಕಿ ಲೀನಾ ಮಣಿಮೇಕಲೈ ಅವಮಾನಿಸಿದ್ದಾರೆ.

ಡಾಕ್ಯುಮೆಂಟರಿ ಫಿಲ್ಮ್ ಮೇಕರ್ ಲೀನಾ ಮಣಿಮೇಕಲೈ ಅವರು ಕಾಳಿ ದೇವಿ ಪಾತ್ರಧಾರಿ ಸಿಗರೇಟ್ ಸೇರುತ್ತಿರುವಂತೆ ಪೋಸ್ಟರ್​ ಹಾಕಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ.

ವಿವಾದಾತ್ಮಕ ಪೋಸ್ಟ್ ನೋಡಿ ಹಿಂದೂ ಸಂಘಟನೆಗಳು ರೊಚ್ಚಿಗೆದ್ದು ಕೂಡಲೇ ನಿರ್ದೇಶಕಿ ಹಿಂದೂಗಳ ಬಳಿ ಕ್ಷಮೆಯಾಚಿಸುವಂತೆ ಪಟ್ಟು ಹಿಡಿದಿದ್ದಾರೆ. ಆದರೂ ನಿರ್ದೇಶಕಿ ಹಠ ಮಾಡುತ್ತಿದ್ದಾರೆ. ‘ನನ್ನನ್ನು ಅರೆಸ್ಟ್​ ಮಾಡಿ ಎನ್ನಬೇಡಿ, ಲವ್​ ಯೂ ಲೀನಾ ಎಂದು ಟ್ವೀಟ್​ ಮಾಡಿದ್ದಾರೆ. ಇದನ್ನು ಓದಿ – ನಾಗಮಂಗಲ : ಬೆಳ್ಳೂರಿನಲ್ಲಿ ಯುವಕನ ಬರ್ಬರ ಹತ್ಯೆ ಕೊಲೆಗೈದ ದುಷ್ಕರ್ಮಿಗಳು ಪರಾರಿ

ಲೀನಾ ಮೈಣಿಮೇಕಲೈ ನಿರ್ದೇಶನದ ‘ಕಾಳಿ’ ಡಾಕ್ಯುಮೆಂಟರಿ ಸಿನಿಮಾದ ಪೋಸ್ಟರ್​ನಲ್ಲಿ ಕಾಳಿದೇವಿಯ ಒಂದು ಕೈಯಲ್ಲಿ ತ್ರಿಶೂಲ, ಮತ್ತೊಂದು ಕೈಯಲ್ಲಿ LGBTQ (ಗೇ, ಟ್ರಾನ್ಸ್ ಜೆಂಡರ್ ಸಮುದಾಯದ್ದು) ಧ್ವಜ ಹಿಡಿದಿರುವ, ಬಾಯಲ್ಲಿ ಸಿಗರೇಟ್​ ಇದೆ. ಕೆನಾಡದ ಫಿಲ್ಮ್ ಪೆಸ್ಟಿವಲ್​ನಲ್ಲಿ ಕಾಳಿ ಮಾತೆ ಸಿಗರೇಟ್ ಸೇದುವ ಪೋಸ್ಟರ್ ವೈರಲ್​ ಆಗಿದ್ದು, ಹಿಂದು ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದೆ.

ಸಾಮಾಜಿಕ ಜಾಲತಾಣದಲ್ಲೂ ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಉದ್ದೇಶಪೂರ್ವಕ‌ವಾಗಿಯೇ ಹಿಂದು ದೇವತೆಗಳ ಟಾರ್ಗೆಟ್​ ಮಾಡಿ ಹೀಗೆ ಮಾಡಲಾಗುತ್ತಿದೆ. ನಮ್ಮ ದೇಶದಲ್ಲಿ ಅಶಾಂತಿ ಸೃಷ್ಟಿಸಲು ಕಾಣದಕೈಗಳು ಕೆಲಸ ಮಾಡುತ್ತಿವೆ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ. ಅರೆಸ್ಟ್ ಲೀನಾ ಮಣಿಮೇಕಲೈ ಎಂಬ ಹ್ಯಾಷ್​ ಟ್ಯಾಗ್​ನೊಂದಿಗೆ ಹಿಂದೂಗಳ ಅಭಿಯಾನ ಶುರುಮಾಡಿದ್ದಾರೆ.

ನಿರ್ದೇಶಕಿ ರೂಪಾ ಅಯ್ಯರ್ ಕೂಡ ​ಲೀನಾ ಮಣಿಮೇಕಲೈ ವಿರುದ್ಧ ಕಿಡಿಕಾರಿದ್ದಾರೆ. ಇಂತಹವರನ್ನ ನಮ್ಮ ದೇಶಕ್ಕೆ ಬಾರದಂತೆ ನಿಷೇಧ ಹೇರಬೇಕು. ನಮ್ಮ ಧರ್ಮದ ಬಗ್ಗೆ ನೆಗೆಟಿವ್​ ಆಗಿ ಯೋಚನೆ ಮಾಡಿ ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ. ಬೇರೆ ಧರ್ಮದ ಬಗ್ಗೆ ಕೆಟ್ಟದ್ದಾಗಿ ಬಿಂಬಿಸಿ ಅವರು ಬದುಕಲಿ ಎಂದು ಆಕ್ರೋಶ ಹೊರಹಾಕಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!