ದೇಶದ ಮಕ್ಕಳು ಸಂಭ್ರಮದಿಂದ ಕುಣಿದು ಕುಪ್ಪಳಿಸುವ ಸುದಿನ ಮಕ್ಕಳ ದಿನಾಚರಣೆಯ ದಿನ. ನಮ್ಮ ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ( Jawahar Lal Nehru ) ಅವರು ಹುಟ್ಟಿದ ದಿನ. ಅವರ ಸವಿನೆನಪಿಗಾಗಿ ಮಕ್ಕಳ ದಿನವನ್ನು ಮೀಸಲಿಡಲಾಗಿದೆ.
1951ರಲ್ಲಿ ವಿಶ್ವಸಂಸ್ಥೆಯ ಒಂದು ಯೋಜನೆಯಡಿಯಲ್ಲಿ ಇಂಗ್ಲೆಂಡ್‌ನ ಮಕ್ಕಳ ಕಲ್ಯಾಣಕ್ಕಾಗಿ ವಿ.ಎನ್. ಕುಲಕರ್ಣಿ ಎನ್ನುವವರು ದುಡಿಯುತ್ತಿದ್ದರು. ಆ ದಿನಗಳಲ್ಲಿ ಬಡ ಮಕ್ಕಳ ಅಭಿವೃದ್ಧಿಗಾಗಿ ನಿಧಿ ಸಂಗ್ರಹಕ್ಕೆ ರಾಣಿ ಎಲಿಜ಼ಬೆತ್-2 ಅವರ ಜನ್ಮದಿನವನ್ನು, ‘ಧ್ವಜ ದಿನಾಚರಣೆ’ಯನ್ನಾಗಿ ಆಚರಿಸುತ್ತಾ ಧನ ಸಂಗ್ರಹಿಸಲಾಗುತ್ತಿತ್ತು. ಆ ಸಂದರ್ಭದಲ್ಲಿ ಕುಲಕರ್ಣಿಯವರ ಮನಸ್ಸು ಸಹಜವಾಗಿಯೇ ಭಾರತೀಯ ಮಕ್ಕಳ ಸ್ಥಿತಿಗತಿಯ ಕಡೆಗೆ ವಾಲಿತು. ಇಂತಹದೊಂದು ಯೋಜನೆ ಭಾರತದಲ್ಲೂ ನಡೆಯಬೇಕು; ಮಕ್ಕಳಿಗಾಗಿ ಧನ ಸಂಗ್ರಹಿಸಿ ವಿಶೇಷ ಕಾರ್ಯಕ್ರಮಗಳನ್ನು ನಡೆಸಬೇಕು ಎನ್ನುವ ಬಗ್ಗೆ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪವಿಟ್ಟರು. ಇದಕ್ಕೆ ಭಾರತದ ಮೊದಲ ಪ್ರಧಾನಮಂತ್ರಿಯಾಗಿದ್ದ ನೆಹರೂ ಅವರ ಜನ್ಮದಿನದಷ್ಟು ಪ್ರಶಸ್ತವಾದ ದಿನ ಬೇರೊಂದಿಲ್ಲ ಎನ್ನುವ ಅಭಿಪ್ರಾಯವನ್ನೂ ಮುಂದಿಟ್ಟರು.
ಮಕ್ಕಳ ಬಗ್ಗೆ ಅಪಾರ ಒಲವಿದ್ದ ನೆಹರುರವರು ಅತ್ಯಂತ ಸಂತೋಷದಿಂದ ತಮ್ಮ ಜನ್ಮದಿನವನ್ನು ‘ಮಕ್ಕಳ ದಿನಾಚರಣೆ’ಯೆಂದು ಆಚರಿಸಲು ಒಪ್ಪಿಕೊಂಡರು. ಈ ರೀತಿ 1951ರಲ್ಲಿ ನವೆಂಬರ್ 14ರಂದು ಭಾರತದಲ್ಲಿ ‘ಮಕ್ಕಳ ದಿನಾಚರಣೆ’ ಆರಂಭವಾಯಿತು.
ಸ್ವತಂತ್ರ ಭಾರತವು ತನ್ನ ಮಕ್ಕಳ ಏಳಿಗೆಯೊಂದಿಗೆ ಮಾತ್ರ ಸಮೃದ್ಧಿಯಾಗಬಲ್ಲದು ,ಮಕ್ಕಳು ರಾಷ್ಟ್ರದ ನಿಜವಾದ ಶಕ್ತಿ ಮತ್ತು ಸಮಾಜದ ಅಡಿಪಾಯ , “ಇಂದಿನ ಮಕ್ಕಳು ನಾಳಿನ ಭಾರತವನ್ನು ಕಟ್ಟುತ್ತಾರೆ. ನಾವು ಅವರನ್ನು ಬೆಳೆಸುವ ವಿಧಾನವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ ” .
ರಾಷ್ಟ್ರ ನಿರ್ಮಾಣದ ಇಟ್ಟಿಗೆಗಳು ರಾಷ್ಟ್ರವನ್ನು ಒಂದು ಕಟ್ಟಲಾಗುತ್ತಿರುವ ಮನೆಯೆಂದು ಪರಿಗಣಿಸುವುದಾದರೆ ಮಕ್ಕಳು ಆ ಮನೆ ನಿರ್ಮಾಣದ ಇಟ್ಟಿಗೆಗಳಂತೆ!. ನಾವೆಷ್ಟು ಉತ್ತಮವಾದ ಇಟ್ಟಿಗೆಯನ್ನು ಮನೆಯ ನಿರ್ಮಾಣಕ್ಕಾಗಿ ಸಜ್ಜುಗೊಳಿಸುತ್ತೇವೆಯೋ ಅಷ್ಟು ಸುಂದರವಾದ ಮನೆ ನಿರ್ಮಾಣವಾಗುತ್ತದೆ. ದೇಶದ ಸಂಸ್ಕೃತಿ, ಕಲೆ, ಸಾಹಿತ್ಯ, ಸಂಪ್ರದಾಯ ಎಲ್ಲವೂ ಉಳಿದು ಬೆಳೆದು ಸಾಗಬೇಕು ಎಂದಾದರೆ ಪ್ರತಿಯೊಬ್ಬ ಹಿರಿಯರೊಳಗಿರುವ ಮಗುವೂ ಜೀವಂತವಾಗಿರಬೇಕು ಮತ್ತು ಪ್ರತಿ ಮಗುವಿಗೂ ಅತ್ಯುತ್ತಮ ಪೋಷಣೆಯ ಅಡಿಪಾಯ ದೊರೆಯಬೇಕು.
ಮಕ್ಕಳ ದಿನಾಚರಣೆಯಂದು ವಿವಿಧೆಡೆ ಕಲಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಶಾಲೆಗಳಲ್ಲಿ ಮಕ್ಕಳಿಗಾಗಿಯೇ ವಿಶೇಷ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಆಟಗಳು, ಚರ್ಚೆ, ವಿಚಾರ ಸಂಕಿರಣ, ಅಂತ್ಯಾಕ್ಷರಿ, ನೃತ್ಯ ಸಂಗೀತ, ಪ್ರಬಂಧ, ಭಾಷಣ, ಚಿತ್ರಕಲೆ ಸ್ಪರ್ಧೆಗಳಿರುತ್ತವೆ.
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – ಯುವತಿ ಸಜೀವ ದಹನ
- 100 ಕೋಟಿ ವಂಚನೆ ಪ್ರಕರಣ: ದೆಹಲಿಯಲ್ಲಿ ಚೀನಾ ಪ್ರಜೆ ಬಂಧನ
- ರೈತರ ಕೃಷಿ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ : ಸಚಿವ ಜಾರ್ಜ್ ಪ್ರಕಟ
- ಶಬರಿಮಲೈ ಭಕ್ತರಿದ್ದ ಬಸ್ ಪಲ್ಟಿ: ರಾಜ್ಯದ 27 ಮಂದಿ ಗಾಯ
- ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭಾರತ ತಂಡದ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಭೇಟಿ
- ಉಪಚುನಾವಣಾ ಫಲಿತಾಂಶಕ್ಕೂ ಮುನ್ನ ಸಿಪಿ ಯೋಗೇಶ್ವರ್ ವಿರುದ್ಧ ಮಗನ ದೂರು: ನಕಲಿ ಸಹಿ ಆರೋಪ
More Stories
ಜಲಗಾರ ಮತ್ತು ಕಾಲ ಜ್ಞಾನಿ ಕನಕ ನಾಟಕಗಳಲ್ಲಿ ದೈವ-ದೇಗುಲ ಸಂಕಥನ
ಕನ್ನಡ ರಾಜ್ಯೋತ್ಸವ
ಬದುಕಿದ್ದೂ ಸತ್ತಂತಿರುವವರು ನೂರಾರು ; ಸತ್ತೂ ಬದುಕಿರುವ ಒಂದೇ ಒಂದು ಕೊಹಿನೂರು..!