ಪೋಷಕರು 2 ಡೋಸ್ ಲಸಿಕೆ ಪಡೆಯದಿದ್ದರೆ ಮಕ್ಕಳು ಶಾಲೆಗೆ ಬರುವಂತಿಲ್ಲ: ಸಚಿವ ಅಶೋಕ್

Team Newsnap
1 Min Read
Mandya District Minister R. Ashok is out of responsibility ಮಂಡ್ಯ ಜಿಲ್ಲಾಮಂತ್ರಿ ಜವಾಬ್ದಾರಿಯಿಂದ ಸಚಿವ ಆರ್ . ಅಶೋಕ್ ಔಟ್

ಶಾಲಾ, ಕಾಲೇಜುಗಳಿಗೆ ಹಾಜರಾಗುವ ಮಕ್ಕಳ ಪೋಷಕರು ಎರಡು ಡೋಸ್ ಲಸಿಕೆಯನ್ನು ಕಡ್ಡಾಯ ಪಡೆದಿರಬೇಕು. ಇಲ್ಲದಿದ್ದರೆ ಮಕ್ಕಳು ಶಾಲೆಗೆ ಬರುವಂತಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ. ಸಚಿವ ಆರ್ ಅಶೋಕ್ ಸರ್ಕಾರದ ತೀರ್ಮಾನದಂತೆ ಸಿನಿಮಾ, ಮಾಲ್ ಮತ್ತು ಶಾಲೆಗೆ ಹಾಜರಾಗುವವರು ಕಡ್ಡಾಯವಾಗಿ 2 ಡೋಸ್ ಲಸಿಕೆ ಪಡೆದಿರಬೇಕು. ಶಾಲೆಗಳಲ್ಲಿ ಸಭೆ ಸಮಾರಂಭಗಳಿಗೆ ಇಂದಿನಿಂದ ಅವಕಾಶವಿಲ್ಲ. ಶಾಲಾ, ಕಾಲೇಜುಗಳಲ್ಲಿ ಹೆಚ್ಚು ಸೋಂಕು ಕಂಡು ಬರುತ್ತಿರುವುದರಿಂದ ಈ ಕ್ರಮ ಕೈಗೊಂಡಿದ್ದೇವೆ ಎಂದು ಮಾಹಿತಿ ಹಂಚಿಕೊಂಡರು.

ರಾಜ್ಯದಲ್ಲಿ ಕಾಣಿಸಿಕೊಂಡಿರುವ ಓಮಿಕ್ರಾನ್ ವೈರಸ್‍ನಿಂದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯನ್ನು ಮಾಡಿದ್ದೇವೆ ಕೋವಿಡ್ ಸಂಬಂಧಪಟ್ಟಂತೆ ತಜ್ಞರೊಂದಿಗೆ ಸಭೆ ನಡೆಸಿದ್ದೇವೆ. ಇಡೀ ವಿಶ್ವದಲ್ಲಿ 400 ಓಮಿಕ್ರಾನ್ ಪ್ರಕರಣ ಪತ್ತೆಯಾಗಿದೆ. ಈ ವೈರಸ್ ತೀವ್ರ ಪ್ರಮಾಣದಲ್ಲಿ ಇಲ್ಲ. ಯಾವುದೇ ಸಾವಿನ ಪ್ರಕರಣ ಈ ವರೆಗೆ ಕಂಡುಬಂದಿಲ್ಲ . ಆದರೂ ರಾಜ್ಯದಲ್ಲಿ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

Share This Article
Leave a comment