ಕೆಆರ್‌ಎಸ್‌ ನಲ್ಲಿ ಚಿರತೆ ಪ್ರತ್ಯಕ್ಷ: ಆತಂಕಗೊಂಡ ಪ್ರವಾಸಿಗರು – ಅಧಿಕಾರಿ ಗಳು

Team Newsnap
1 Min Read

ಶ್ರೀರಂಗಪಟ್ಟಣ ತಾಲ್ಲೂಕಿನ ಪ್ರಸಿದ್ದ‌ ಪ್ರವಾಸಿ ತಾಣವೂ ಆಗಿರುವ
ಕೆಆರ್‌ಎಸ್‌ ಬೃಂದಾವನದಲ್ಲಿ ರಾತ್ರಿ ವೇಳೆ ಚಿರತೆ ಕಾಣಿಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದು ಸ್ಥಳೀಯರು, ನೌಕರರು ಹಾಗೂ ಪ್ರವಾಸಿಗರಲ್ಲಿ ಆತಂಕ ಸೃಷ್ಟಿಸಿದೆ.

ಈ ಹಿಂದೆ ಬೃಂದಾವನ ದ ಉತ್ತರ ಬಾಗಿಲಿನಲ್ಲೂ ಕಾಣಿಸಿಕೊಂಡಿತ್ತು.
ಈಗ ಬೃಂದಾವನದ ದಕ್ಷಿಣ ದ್ವಾರದ ಬಳಿ ಚಿರತೆ ಹಾದುಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಪೊಲೀಸರು ಸ್ಥಳೀಯ ಗ್ರಾಮ ಪಂಚಾಯಿತಿಗೆ ಹಾಗೂ ಅರಣ್ಯ ಅಧಿಕಾರಿಗಳಿಗೆ ಚಿರತೆ ಸಂಚಾರದ ಬಗ್ಗೆ ಖಚಿತ ಮಾಹಿತಿ ನೀಡಿದ್ದಾರೆ.

ಈ ಮಾಹಿತಿ ಆಧರಿಸಿ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೇಬಿಬೆಟ್ಟ, ಕನ್ನಂಬಾಡಿ ಹಾಗೂ ನಾರ್ಥ್ ಬ್ಯಾಂಕ್‌ ಕಡೆಗಳ ಅರಣ್ಯ ಪ್ರದೇಶದಿಂದ ಚಿರತೆ ಈ ಭಾಗಕ್ಕೆ ಬಂದರುವ ಶಂಕೆ ವ್ಯಕ್ತವಾಗಿದೆ.

ಕೆಆರ್‌ಎಸ್‌ ಬೃಂದಾವನದಲ್ಲಿ ಚಿರತೆಯ ಹೆಜ್ಜೆ ಗುರುತು ಪತ್ತೆಯಾದರೆ ಬೋನು ಇರಿಸಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಸುನೀತಾ ತಿಳಿಸಿದ್ದಾರೆ.

ಮಹದೇವಪುರ, ನೇರಲಕೆರೆ ಗ್ರಾಮಗಳ ಬಳಿ ಚಿರತೆ ಸೆರೆಗೆ ಬೋನು ಇರಿಸಲಾಗಿದೆ ಎಂದು ಸುನೀತಾ ಮಾಹಿತಿ ನೀಡಿದ್ದಾರೆ.

Share This Article
Leave a comment