ಚೆಕ್ ಬೌನ್ಸ್ ಪ್ರಕರಣ: ‘ಮಠ’ ಚಿತ್ರ ನಿರ್ದೇಶಕ ಗುರುಪ್ರಸಾದ್ ಬಂಧನ

Team Newsnap
1 Min Read
Check bounce case: 'Mata' film director Guruprasad arrested ಚೆಕ್ ಬೌನ್ಸ್ ಪ್ರಕರಣ: 'ಮಠ’ ಚಿತ್ರ ನಿರ್ದೇಶಕ ಗುರುಪ್ರಸಾದ್ ಬಂಧನ

ಮಠ, ಎದ್ದೇಳು ಮಂಜುನಾಥ ಸೇರಿದಂತೆ ಹಲವು ಚಿತ್ರಗಳ ನಿರ್ದೇಶಕ ನಿರ್ದೇಶಕ ಗುರುಪ್ರಸಾದ್ ಅವರನ್ನು ಗಿರಿನಗರ ಪೊಲೀಸರು ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದಾರೆನಂತರ ಅವರನ್ನು ನ್ಯಾಯಾಲಯಕ್ಕೆ ಕರೆದೊಯ್ಯಲಾಗಿದೆ.

ತಮ್ಮೊಂದಿಗೆ ಕೆಲಸ ಮಾಡುತ್ತಿದ್ದ ಶ್ರೀನಿವಾಸ್ ಎನ್ನುವವರಿಂದ ಗುರು ಪ್ರಸಾದ್ 30 ಲಕ್ಷ ರೂಪಾಯಿಯನ್ನು ಸಾಲವಾಗಿ ಪಡೆದುಕೊಂಡಿದ್ದರು.ಗುಜರಾತ್ ನಲ್ಲಿ ಸ್ಯಾಂಟ್ರೋ ರವಿ ಬಂಧನ ​..!

ಸಿನಿಮಾ ಮಾಡುವುದಾಗಿ ಸಾಲ ಪಡೆದಿದ್ದ ಗುರುಪ್ರಸಾದ್, ನಂತರ ಹಣ ಕೊಡದೇ ವಂಚಿಸಿದ್ದರು. ಹಣ ಕೇಳುವುದಕ್ಕೆ ಹೋದವರ ಮೇಲೆಯೇ ಸುಳ್ಳು ಕೇಸ್ ಅನ್ನು ಕೂಡ ದಾಖಲಿಸಿದ್ದರು. ಹಾಗಾಗಿ ಶ್ರೀನಿವಾಸ್ ಅವರು ಗುರುಪ್ರಸಾದ್ ಮೇಲೆ ಚೆಕ್ ಬೌನ್ಸ್ ಕೇಸ್ ದಾಖಲಿಸಿದ್ದರು.

ಶ್ರೀನಿವಾಸ್ ದೂರು ನೀಡಿದ ಹಿನ್ನೆಲೆಯಲ್ಲಿ ಕೋರ್ಟ್ ನಿಂದ ಎನ್.ಬಿ ಡಬ್ಲ್ಯು ಜಾರಿ ಆಗಿತ್ತು. ಎನ್.ಐ ಆಕ್ಟ್ ಅಡಿ ಗುರುಪ್ರಸಾದ್ ವಿರುದ್ದ ಚೆಕ್ ಬೌನ್ಸ್ ಕೇಸ್ ನಲ್ಲಿ ವಾರೆಂಟ್ ಜಾರಿ ಆಗಿತ್ತು. ಗಿರಿನಗರ ಪೊಲೀಸರು ಗುರುಪ್ರಸಾದ್ ಅವರನ್ನು ಬಂಧಿಸಿ, ಮೆಡಿಕಲ್ ಟೆಸ್ಟ್ ನಂತರ ಕೋರ್ಟ್ ಮುಂದೆ ಹಾಜರು ಪಡಿಸಲು ಕರೆದುಕೊಂಡು ಹೋಗಿದ್ದಾರೆ.

Share This Article
Leave a comment