ಚೆಕ್ ಬೌನ್ಸ್ ಪ್ರಕರಣ: ನಟ ನಿನಾಸಂ ಅಶ್ವಥ್ ಬಂಧನ, ಬಿಡುಗಡೆ

Team Newsnap
1 Min Read

ನಟ ನೀನಾಸಂ ಅಶ್ವತ್ಥ ಅವರನ್ನು ಚೆಕ್ ಬೌನ್ಸ್ ಪ್ರಕರಣದಲ್ಲಿ ಹಾಸನ ಪೊಲೀಸರು ಬಂಧಿಸಿ, ನಂತರ ಬಿಡುಗಡೆ ಮಾಡಿದ್ದಾರೆ.

ಈ ಹಿಂದೆ ಕೂಡ ಅವಾಚ್ಯ ಶಬ್ದಗಳಿಂದ ನಿಂದನೆ, ಮಾನನಷ್ಟ, ಕೊಲೆ ಬೆದರಿಕೆ ಸೇರಿದಂತೆ ವಿವಿಧ ಪ್ರಕರಣಗಳು ಈ ನಟನ ವಿರುದ್ಧ ದಾಖಲಾಗಿದ್ದವು.

ಪ್ರಕರಣದ ಹಿನ್ನಲೆ:

ಹಾಸನ ಮೂಲದ ರೋಹಿತ್ ಎಂಬುವರಿಂದ ನಟ ನೀನಾಸಂ ಅಶ್ವತ್ಥ ಹಸುಗಳನ್ನು ಖರೀದಿ ಮಾಡಿ, 1.5 ಲಕ್ಷ ರು ಮೊತ್ತದ ಚೆಕ್ ಅನ್ನು ನೀಡಿದ್ದರು,

ಈ ವೇಳೆ ಬ್ಯಾಂಕ್‌ಗೆ ಹಾಕಿದಾಗ ಚೆಕ್‌ ಬೌನ್ಸ್‌ ಆಗಿತ್ತು. ಈ ಸಂಬಂಧ ಹಾಸನದ ಜೆಎಮ್‌ಎಫ್‌ಸಿ‌ ಕೋರ್ಟ್‌ನಲ್ಲಿ‌ ರೋಹಿತ್ ಕೇಸ್‌ ದಾಖಲಿಸಿದ್ದರು.

ನಾಲ್ಕೂ ಬಾರಿಯೂ ಕೋರ್ಟ್‌ಗೆ ನಟ ನೀನಾಸಂ ಅಶ್ವತ್ಥ ಹಾಜಾರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಐದನೇ ಬಾರಿ ಅರೆಸ್ಟ್ ವಾರಂಟ್ ಹೊರಡಿಸಿದ್ದರು ಕೂಡ ಅವರು ತಲೆ ಮರೆಸಿಕೊಂಡಿದ್ದರು ಎನ್ನಲಾಗಿದೆ.

ಈ ನಡುವೆ ಹಾಸನ ಬಡಾವಣೆ ಠಾಣೆ ಪೊಲೀಸರು ಜುಲೈ 8ರಂದು ರಾತ್ರಿ ನಟನನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.

ಬಳಿಕ ನಟ ನ್ಯಾಯಾಧೀಶರ ಮುಂದೆ ತಪ್ಪೊಪ್ಪಿಕೊಂಡು ಬಿಡುಗಡೆ ಮಾಡಿ ಬಾಕಿ ಹಣವನ್ನು ಶೀಘ್ರದಲ್ಲಿ ನೀಡುವುದಾಗಿ ತಿಳಿಸಿದ್ದಾರೆ.

Share This Article
Leave a comment