ಬಾಲ ನಟಿ ವಂಶಿಕಾ ಹೆಸರಿನಲ್ಲಿ ವಂಚನೆ – ನಿಶಾ ವಿರುದ್ದ ದೂರು

Team Newsnap
1 Min Read

ಬೆಂಗಳೂರು :

ನನ್ನಮ್ಮ ಸೂಪರ್‌ ಸ್ಟಾರ್‌, ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋನಲ್ಲಿ ಬಾಲ ನಟಿಯಾಗಿದ್ದ ವಂಶಿಕಾ. ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಅಂಜನಿ ಕಶ್ಯಪಾ ಹೆಸರನ್ನು ದುರುಪಯೋಗ ಪಡಿಸಿಕೊಂಡು ಲಕ್ಷಾಂತರ ರೂಪಾಯಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಆ್ಯಡ್ ಶೂಟ್, ಮಕ್ಕಳ ಟ್ಯಾಲೆಂಟ್ ನೆಪದಲ್ಲಿ ಮಹಿಳೆಯೊಬ್ಬರು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ನಿಶಾ ನರಸಪ್ಪ ಎಂಬ ಮಹಿಳೆ ಪೋಷಕರಿಂದ ಲಕ್ಷ, ಲಕ್ಷ ಪಡೆದು ವಂಚನೆ ನಡೆಸಿದ್ದಾರೆ ಎನ್ನಲಾಗಿದೆ.

ಮೋಸ ಹೋಗಿರುವ ಪೋಷಕರೂ ಸಹ ಆರೋಪಿ ನಿಶಾ ನರಸಪ್ಪರನ್ನು ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ವಂಶಿಕಾ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸುಮಾರು 40 ಲಕ್ಷ ರೂ. ಹಣವನ್ನು ಪಡೆದಿದ್ದಾರೆ . ಈ ಬಗ್ಗೆ ನಿಶಾರ ಮೋಸಕ್ಕೆ ಒಳಗಾದ ವಂಶಿಕಾ ತಾಯಿ ಯಶಸ್ವಿನಿ ಆನಂದ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Share This Article
Leave a comment