ಹಣ ಪಡೆದು ವಂಚನೆ : ಕನ್ನಡ ಸೀರಿಯಲ್ ನಟಿ ಉಷಾ ಬಂಧನ

Team Newsnap
1 Min Read
Cheating for money: Kannada serial actress Usha arrested ಹಣ ಪಡೆದು ವಂಚನೆ : ಕನ್ನಡ ಸೀರಿಯಲ್ ನಟಿ ಉಷಾ ಬಂಧನ #SerialActor #Usha #Crime

ಶಿವಮೊಗ್ಗ : ಕನ್ನಡ ಕಿರುತೆರೆ ನಟಿಯನ್ನು ಬಂಧಿಸಿದ ಘಟನೆ ವರದಿಯಾಗಿದೆ. ನ್ಯಾಯಾಲಯದ ವಿಚಾರಣೆಗೆ ಹಾಜರಾಗದ ನಟಿಯನ್ನು ಬಂಧಿಸಿ ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಸಿನಿಮಾ ನಟಿಯೊಬ್ಬರ ವಿರುದ್ಧ ಶಿವಮೊಗ್ಗ ನ್ಯಾಯಾಲಯದಲ್ಲಿ ಜಾಮೀನು ರಹಿತ ಬಂಧನ ವಾರೆಂಟ್‌ ಜಾರಿ ಮಾಡಲಾಗಿತ್ತು.

ಶಿವಮೊಗ್ಗದು ಶರವಣ ಎಂಬುವವರ ಬಳಿ ಹಣ ಪಡೆದು ವಂಚನೆ ಮಾಡಿದ್ದರು ಎಂಬ ಆರೋಪವಿದೆ.

ನಟಿ ಉಷಾ ಎಂಬವರ ವಿರುದ್ಧ ವಾರೆಂಟ್‌ ಜಾರಿಯಾಗಿತ್ತು. ಬೆಂಗಳೂರಿನಲ್ಲಿ ನಟಿ ಉಷಾ ಅವರನ್ನು ವಿನೋಬನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಮಂಡ್ಯ ಜಿಲ್ಲೆಯ ನೂತನ ಜಿಲ್ಲಾಧಿಕಾರಿಗಳ ಕಿರು ಪರಿಚಯ

ನಟಿಯನ್ನು ಮೆಗ್ಗಾನ್‌ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ನಂತರ ಪೊಲೀಸರು ನ್ಯಾಯಾಧೀಶರ ಮುಂದೆ ನಟಿಯನ್ನು ಹಾಜರುಪಡಿಸಿದರು.

Share This Article
Leave a comment