ಉದ್ಯೋಗದ ಆಮಿಷ ತೋರಿಸಿ ವಂಚನೆ : ಚೀನಾ ಕಂಪನಿ ಮೇಲೆ‌ ED ದಾಳಿ- 5.85 ಕೋಟಿ ರು ಜಪ್ತಿ

Team Newsnap
1 Min Read
Cheating by showing the lure of employment: ED raid on Chinese company- Rs 5.85 crore seized ಉದ್ಯೋಗದ ಆಮಿಷ ತೋರಿಸಿ ವಂಚನೆ : ಚೀನಾ ಕಂಪನಿ ಮೇಲೆ‌ ED ದಾಳಿ- 5.85 ಕೋಟಿ ರು ಜಪ್ತಿ

ಬೆಂಗಳೂರಿನಲ್ಲಿ ಸಾಮಾಜಿಕ ಜಾಲತಾಣದ ಮೂಲಕ ನಿರುದ್ಯೋಗಿಗಳಿಗೆ ಪಾರ್ಟ್ ಟೈಮ್ ಕೆಲಸ ಕೊಡಿಸುವ ಸೋಗಿನಲ್ಲಿ ಹಣ ಹೂಡಿಕೆ ಮಾಡಿ ವಂಚಿಸುತ್ತಿದ್ದ ಚೀನಾ ಮೂಲದ ಕಂಪನಿಯ ಕಚೇರಿಗಳ ಮೇಲೆ ಇಡಿ 12 ಕಡೆಗಳಲ್ಲಿ ದಾಳಿ ಮಾಡಿ 5.85 ಕೋಟಿ ರು ಇಡಿ ಜಪ್ತಿ ಮಾಡಿದೆ.

ಬೆಂಗಳೂರಿನ ಬನಶಂಕರಿ, ಜಯನಗರ ಸೇರಿದಂತೆ ವಿವಿಧ ಭಾಗಗಳಲ್ಲಿ ಚೀನಾ ಮೂಲದ ಕಂಪನಿ ಮೇಲೆ ದಾಳಿ ಮಾಡಲಾಗಿದೆ. ಕಳೆದ ವರ್ಷ ಆನ್​​ಲೈನ್ ಪಾರ್ಟ್​ ಟೈಮ್ ಜಾಬ್ ಕೊಡಿಸುವ ಬಗ್ಗೆ ವಂಚನೆ ಪ್ರಕರಣ ದಾಖಲಾಗಿತ್ತು.ಇದನ್ನು ಓದಿ –J&K ಕಾರಾಗೃಹ DGP ಯನ್ನೇ ಕತ್ತು ಸೀಳಿ ಹತ್ಯೆ – ಗೃಹ ಸಚಿವರ ಭೇಟಿ ವೇಳೆಯಲ್ಲೇ ದುರಂತ

ಈ ಪ್ರಕರಣದ ಸಂಬಂಧ 5 ಮಂದಿಯನ್ನು ಬಂಧನ ಮಾಡಿದ್ದ ಪೊಲೀಸರು, ವಿಚಾರಣೆಯಲ್ಲಿ ಹಲವು ಮಾಹಿತಿಗಳನ್ನು ಸಂಗ್ರಹಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ವಾಟ್ಸಾಪ್ ಹಾಗೂ ಟೆಲಿಗ್ರಾಂ ಮುಖಾಂತರ ನಿರುದ್ಯೋಗಿಗಳಿಗೆ ಕೆಲಸದ ಭರವಸೆ ನೀಡಿ, ತಮ್ಮತ್ತ ಸೆಳೆದುಕೊಳ್ಳುತ್ತಿದ್ದ ಚೀನಾ ಮೂಲದ ಕೀಪ್ ಶೇರರ್ ಹೆಸರಿನ ಕಂಪನಿ, ನೋಂದಣಿ ಶುಲ್ಕ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿತ್ತು.

ಚೀನಾ ಮೂಲದ ಖಾತೆಗಳಿಗೆ ಕ್ರಿಪ್ಟೋ ರೂಪದಲ್ಲಿ ವಂಚಿಸಿದ ಕಂಪನಿಯು ಹಣವನ್ನು ವರ್ಗಾವಣೆ ಮಾಡಿರೋದಾಗಿ 92 ಜನರ ವಿರುದ್ಧ ಕೇಸ್​ ದಾಖಲಾಗಿದೆ.

Share This Article
Leave a comment