ಪಾತ್ರಧಾರೆ ಚಾಮುಂಡೇಶ್ವರಿ ಅವತಾರ- ನಾಟಕದ ಪಾತ್ರದಾರಿಯನ್ನೇ ವಧೆ ಮಾಡಲು ಮುಂದಾದ ಕಲಾವಿದೆ

Team Newsnap
1 Min Read

ನಾಟಕದ ಪ್ರದರ್ಶನದ ವೇಳೆ ತಾಯಿ ಚಾಮುಂಡೇಶ್ವರಿ ಪಾತ್ರ ಮಾಡಿದ್ದ ಕಲಾವಿದೆಯೊಬ್ಬಳು ತಾನೇ ದೇವಿಯ ಅವತಾರ ಎಂದು ಭಾವಿಸಿ ಕೌಂಡಲಿಕ ಪಾತ್ರದಾರಿಯನ್ನು ತ್ರಿಶೂಲದಲ್ಲಿ ಕೊಲ್ಲುವ ಪ್ರಯತ್ನ ಮಾಡಿದ ಘಟನೆ ನಡೆದಿದೆ.‌

ಈ ಘಟನೆ ನಡೆದದ್ದು ಮಂಡ್ಯದ ಕಲಾಮಂದಿರ ದಲ್ಲಿ ಪೆ 6 ರಂದು.
ಕೌಂಡಲಿಕನ ವಧೆ ನಾಟಕದ ಪ್ರದರ್ಶನ ಮಾಡಲ ಸಂದರ್ಭದ ಘಟನೆ ಇದು.

ಈ ಸಮಯದಲ್ಲಿ ತಾಯಿ ಚಾಮುಂಡೇಶ್ವರಿ ಕೌಂಡಲಿಕನನ್ನು ವಧೆ ಮಾಡುವ ಸನ್ನಿವೇಶವೂ ಬಂತು.‌

ದೃಷ್ಯ ದ ಆರಂಭದಲ್ಲಿ ನಾಟಕದ ಪಾತ್ರದಾರಿ ಮೇಲೆ ತಾಯಿ ಚಾಮುಂಡೇಶ್ವರಿ ಆಹ್ವಾಹನೆ ಆಗಿರುವ ರೀತಿಯಲ್ಲಿ ನಟನೆ ಮಾಡಬೇಕು.‌ ನಂತರ ರಾಕ್ಷಸ ಸಂಸಾರ ಸನ್ನಿವೇಶದ ಮಾಡುವಂತೆ ಮೇಷ್ಟ್ರು ಹೇಳಿಕೊಟ್ಟಿ ದ್ದಾರೆ.

ಈ ವೇಳೆ ನಿಜವಾಗಿಯೂ ಕೌಂಡಲಿಕ ಪಾತ್ರ ಮಾಡಿದ ವ್ಯಕ್ತಿ ಯನ್ನು ಚಾಮುಂಡಿ ಪಾತ್ರ ಮಾಡಿದ್ದಾಕೆ ತ್ರಿಶೂಲದಲ್ಲಿ ಕೊಲ್ಲಲು ಮುಂದಾದಳು.

ಅಪಾಯದ ಮುನ್ಸೂಚನೆ ತಿಳಿದ ಬಳಿಕ ಮಹಿಳಾ ಪಾತ್ರಧಾರಿಯನ್ನು 4 ಜನ
ಗಂಡಸರು ಆಕೆಯನ್ನು ತಡೆದು ಕರೆದೊಯ್ಯುತ್ತಾರೆ.

ಆದರೂ ದೇವಿಯ ಪಾತ್ರದಾರಿ ಕೌಂಡಲಿಕನನ್ನು ಕೊಂದೇ ಕೊಲ್ಲುತೇನೆ ಅಂತ ಹಠಕ್ಕೆ ಬೀಳುತ್ತಾಳೆ.

ಪ್ರತಿ ಬಾರಿ ಈ ನಾಟಕ ನಡೆದಾಗಲೆಲ್ಲಾ ಚಾಮುಂಡಿ ಪಾತ್ರಧಾರಿಯಾಗುವ ಆಕೆಯ ಮೇಲೆ ತಾಯಿಯ ಆಹ್ವಾಹನೆ ಆಗುತ್ತೆಂಬ ನಂಬಿಕೆ ಇದೆ.

ಹಾಗಾಗಿ ರಾಕ್ಷಸನ ವಧೆ ಸನ್ನಿವೇಶ ವೇಳೆ ಚಾಮುಂಡಿ ಪಾತ್ರಧಾರಿಯನ್ನು ಪ್ರತಿಬಾರಿ ಹಿಡಿದು ಕರೆದೊಯ್ಯುತ್ತಾರಂತೆ ಆಯೋಜಕರು. ಅದೇ ರೀತಿ ಯಾವುದೇ ಕೆಟ್ಟ ಘಟನೆ ಸಂಭವಿಸಬಾರದು ಎಂಬ ಉದ್ದೇಶಕ್ಕೆ ಚಾಮುಂಡಿ ಪಾತ್ರಧಾರಿಯನ್ನು ಕರೆದೊಯ್ಯರು.

ಈ ಘಟನೆಯಿಂದ ಕೌಂಡಲಿಕ ಪಾತ್ರದಾರಿ ಕೆಲ ಕ್ಷಣ ಆಘಾತಕ್ಕೊಳಗಾಗಿ ವೇದಿಕೆ ಮೇಲೆ ಬಿದ್ದನು. ತರುವಾಯ ಆಯೋಜಿಕರು ಆತನ್ನನ್ನು ಎಚ್ಚರಿಸಿ ಸ್ಕ್ರೀನ್ ಹಿಂಭಾಗ ಕರೆದುಕೊಂಡು ಹೋದರು. ಈ ಘಟನೆ ವಿಡಿಯೋ ಈಗ ವೈರಲ್ ಆಗಿದೆ.

Share This Article
Leave a comment