ಬೆಂಗಳೂರು : ಭಾರತದ ಬಹು ನಿರೀಕ್ಷಿತ ಮಿಷನ್ ಚಂದ್ರಯಾನ-3ರ ಕಕ್ಷೆ ಬದಲಾಯಿಸುವ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಮಾಹಿತಿಯಂತೆ ಇಂದು ಚಂದ್ರಯಾನ-3′ ಅನ್ನು ಚಂದ್ರನ ಕಕ್ಷೆಗೆ ಎತ್ತುವ ನಾಲ್ಕನೇ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು ಎಂದು ಹೇಳಿದೆ.
ಈ ಕೆಲಸವನ್ನು ಬೆಂಗಳೂರು ಇಸ್ರೋ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ (ISTRAC) ನಿಂದ ಮಾಡಲಾಗಿದೆ.
ಚಂದ್ರಯಾನ-3 ತನ್ನ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದು ಇಸ್ರೋ ಹೇಳಿದೆ.
ಈಗ ಜುಲೈ 25ರಂದು ಮಧ್ಯಾಹ್ನ 2 ರಿಂದ 3 ಗಂಟೆಯವರೆಗೆ ಮುಂದಿನ ಫೈರಿಂಗ್ ಮಾಡುವ ಯೋಜನೆ ಇದೆ.
ಅಂತಾರಾಷ್ಟ್ರೀಯ ಚಂದ್ರ ದಿನದ ಸಂದರ್ಭದಲ್ಲಿ ಭಾರತವು ಚಂದ್ರಯಾನ-3 ಅನ್ನು ಚಂದ್ರನ ಹತ್ತಿರಕ್ಕೆ ತಂದಿದೆ ಎಂದು ಇಸ್ರೋ ಹೇಳಿದೆ.ಕೃಷಿ ವಿವಿ ಘಟಿಕೋತ್ಸವದಲ್ಲಿ ನಾಳೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ `ಗೌರವ ಡಾಕ್ಟರೇಟ್’ ಪ್ರದಾನ
ಜುಲೈ 15ರಂದು ಚಂದ್ರಯಾನ-3 ಭೂಮಿಯ ಮೊದಲ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿತ್ತು. ನಂತರ, ಚಂದ್ರಯಾನವು ಜುಲೈ 17ರಂದು ಭೂಮಿಯ ಎರಡನೇ ಕಕ್ಷೆಯನ್ನು ಮತ್ತು ಜುಲೈ 18ರಂದು ಭೂಮಿಯ ಮೂರನೇ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದೆ
- ಚೆನಾಬ್ ಸೇತುವೆಯಲ್ಲಿ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ಯಶಸ್ವಿ: ಐತಿಹಾಸಿಕ ಕ್ಷಣ
- ತಿನಿಸುವುದರಲ್ಲಿನ ಆನಂದ ತಿನ್ನುವುದರಲ್ಲಿಲ್ಲ…!
- ಪುದೀನಾದ ಕಣ ಕಣದಲ್ಲೂ ಇದೆ ಔಷಧ ಗುಣ
- ರಾಷ್ಟ್ರೀಯ ಮತದಾರರ ದಿನ (ಜನವರಿ 25)
- ವಿಧಾನಸೌಧ ಆವರಣದಲ್ಲಿ ಜನವರಿ 27ಕ್ಕೆ ಭುವನೇಶ್ವರಿ ಕಂಚಿನ ಪ್ರತಿಮೆಯ ಅನಾವರಣ
- 26/11 ಉಗ್ರರ ದಾಳಿ: ತಹವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು US ಸುಪ್ರೀಂಕೋರ್ಟ್ ಅನುಮೋದನೆ
More Stories
ಚೆನಾಬ್ ಸೇತುವೆಯಲ್ಲಿ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ಯಶಸ್ವಿ: ಐತಿಹಾಸಿಕ ಕ್ಷಣ
ತಿನಿಸುವುದರಲ್ಲಿನ ಆನಂದ ತಿನ್ನುವುದರಲ್ಲಿಲ್ಲ…!
ಪುದೀನಾದ ಕಣ ಕಣದಲ್ಲೂ ಇದೆ ಔಷಧ ಗುಣ