ಚಂದ್ರಯಾನ-3 ಲ್ಯಾಂಡಿಂಗ್ ಸ್ಥಳ ‘ಶಿವಶಕ್ತಿ’ ಚಂದ್ರಯಾನ-2 ಪತನ ಸ್ಥಳಕ್ಕೆ ‘ತಿರಂಗಾ’ ನಾಮಕರಣ – ಪ್ರಧಾನಿ ಪ್ರಕಟ

Team Newsnap
1 Min Read

ಬೆಂಗಳೂರು:

ಚಂದ್ರಯಾನ -3 ರ ಚಂದ್ರನ ಲ್ಯಾಂಡರ್ ಇಳಿದ ಸ್ಥಳವನ್ನು ‘ಶಿವಶಕ್ತಿ’ ಎಂದು ಚಂದ್ರಯಾನ-2 ಪತನಗೊಂಡ ಸ್ಥಳಕ್ಕೆ ತಿರಂಗಾ ಎಂಬುದಾಗಿ ನಾಮಕರಣ ಮಾಡುವುದಾಗಿ ಎಂದು ಪ್ರಧಾನಿ ಮೋದಿ ಪ್ರಕಟಿಸಿದರು.

ಭಾರತ ಚಂದ್ರಯಾನ ಹಾಗೂ ಮಂಗಳಯಾನದಲ್ಲಿ ಯಶಸ್ಸನ್ನುಗಳಿಸಿ ಮಾನವಸಹಿತ ಗಗನಯಾನಕ್ಕೆ ಸಿದ್ಧತೆ ನಡೆಸುತ್ತಿದೆ. ಈ ಮೂಲಕ ಭಾರತೀಯ ನೆಲ, ಇಲ್ಲಿನ ಜನರ ಮನ ಹಾಗೂ ಚಂದ್ರನಲ್ಲೂ ತಿರಂಗಾ ಮನೆ ಮಾಡಿದೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರಿನ ಪೀಣ್ಯದ ಇಸ್ರೋ ಕಮಾಂಡಿಂಗ್ ಕೇಂದ್ರದಲ್ಲಿ ವಿಜ್ಞಾನಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮೋದಿ ಅವರು, ಚಂದ್ರಯಾನ 3 ರ ವಿಕ್ರಮ್ ಲ್ಯಾಂಡರ್ ಟಚ್ ಡೌನ್ ಆದ ಪಾಯಿಂಟ್ ಅನ್ನು ‘ಶಿವ ಶಕ್ತಿ’ ಎಂದು ಕರೆಯಲಾಗುವುದು ಎಂದು ಪ್ರಧಾನಿ ಮೋದಿ ಎಂದು ಹೇಳಿದರು.

ಚಂದ್ರಯಾನ 3 ರ ಯಶಸ್ಸಿನಿಂದಾಗಿ ದೇಶೀಯ ಉತ್ಪಾದನೆಗೆ ಉತ್ತೇಜನ ನೀಡಿರುವುದನ್ನು ಉಲ್ಲೇಖಿಸಿ ವಿಜ್ಞಾನಿಗಳು ಮೇಕ್ ಇನ್ ಇಂಡಿಯಾ ಉಪಕ್ರಮವನ್ನು ಚಂದ್ರನತ್ತ ಕೊಂಡೊಯ್ದಿದ್ದಾರೆ ಎಂದು ಅವರು ಹೇಳಿದರು.

ಭಾವುಕರಾದ ಮೋದಿ:

ಚಂದ್ರಯಾನ-3 ಮಿಷನ್‌ನಲ್ಲಿ ಭಾಗಿಯಾಗಿರುವ ವಿಜ್ಞಾನಿಗಳ ತಂಡದೊಂದಿಗೆ ಸಂವಾದ ನಡೆಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಭಾವುಕರಾದರು.

“ಭಾರತವು ಚಂದ್ರನ ಮೇಲಿದೆ. ನಮ್ಮ ರಾಷ್ಟ್ರೀಯ ಹೆಮ್ಮೆಯನ್ನು ನಾವು ಚಂದ್ರನ ಮೇಲೆ ಇರಿಸಿದ್ದೇವೆ” ಎಂದು ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕಮಾಂಡ್ ಸೆಂಟರ್‌ನಲ್ಲಿ ಮಾತನಾಡುವಾಗ ಪ್ರಧಾನಿ ಮೋದಿ ಭಾವುಕತೆಯಿಂದ ನುಡಿದರು.

Share This Article
Leave a comment