February 24, 2026

Newsnap Kannada

The World at your finger tips!

chandrashekar film

ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಚಂದ್ರಶೇಖರ್ ನಿಧನ

Spread the love

ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಚಂದ್ರಶೇಖರ್ ನಿಧನರಾದರು. ಒಂದೇ ವಾರದಲ್ಲಿ ಇಬ್ಬರು ನಿರ್ಮಾಪಕರನ್ನು ಕನ್ನಡ ಚಿತ್ರರಂಗದ ಕಳೆದು ಕೊಂಡಂತಾಗಿದೆ.

23 ದಿನಗಳ ಹಿಂದೆ ಚಂದ್ರಶೇಖರ್​ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಈ ಹಿನ್ನೆಲೆ ಅವರನ್ನು ಮಣಿಪಾಲ್ ಸೆಂಟರ್​ಗೆ ದಾಖಲು ಮಾಡಲಾಗಿತ್ತು. ಕೋವಿಡ್ ವಾಸಿಯಾಗಿತ್ತು. , ಇದ್ದಕ್ಕಿದ್ದಂತೆ ಶ್ವಾಸಕೋಶದ ಸಮಸ್ಯೆ ಉಲ್ಬಣಗೊಂಡು ಕಳೆದ ರಾತ್ರಿ 11 ಗಂಟೆ ವೇಳೆಗೆ ಕೊನೆಯುಸಿರೆಳೆದರು.

ನಿಮಿಷಾಂಬ ಪ್ರೊಡಕ್ಷನ್ಸ್​ನ ನಿರ್ಮಾಪಕ ಚಂದ್ರಶೇಖರ್, ರವಿಚಂದ್ರನ್​ ಅಭಿನಯದ ಅಣ್ಣಯ್ಯ, ಪುನೀತ್​ ರಾಜ್​ಕುಮಾರ್​ ಅಭಿನಯದ ಬಿಂದಾಸ್, ಕಿಚ್ಚ ಸುದೀಪ್​ರ ರನ್ನ‌, ಏನೋ ಒಂಥರಾ.. ಸಿನಿಮಾಗಳನ್ನು ನಿರ್ಮಿಸಿದ್ದರು.

ಇತ್ತೀಚೆಗಷ್ಟೇ ಮಂಜು ಮಾಂಡವ್ಯ ನಿರ್ದೇಶನದಲ್ಲಿ ಉಪೇಂದ್ರ ನಟನೆಯ ಸಿನಿಮಾವೊಂದನ್ನು ನಿರ್ಮಿಸುವ ಪ್ರಕಟನೆ ಮಾಡಿದ್ದರು.

error: Content is protected !!