ಕೋಟಿ ಒಡತಿ ನಾಡ ಅಧಿದೇವತೆ! ಚಾಮುಂಡೇಶ್ವರಿ ಬೊಕ್ಕಸಕ್ಕೆ 1 ಕೋಟಿ 29 ಲಕ್ಷ ರು ಸಂಗ್ರಹ

Team Newsnap
1 Min Read

ಮೈಸೂರಿನ ಅಧಿದೇವತೆಯ ಚಾಮುಂಡೇಶ್ವರಿ ದೇವಸ್ಥಾನದ ಹುಂಡಿಗೆ ಕೋಟ್ಯಂತರ ರೂ. ಕಾಣಿಕೆ ಹರಿದುಬಂದಿದೆ.

ಚಾಮುಂಡಿ ಬೆಟ್ಟದ ಹುಂಡಿಯಲ್ಲಿ 1,29,64,792 ರೂ. ಹಣ ಸಂಗ್ರಹವಾಗಿದೆ 3500 ರೂ. ಮೊತ್ತದ ಅಮಾನ್ಯ ನೋಟು ಸಹ ಪತ್ತೆಯಾಗಿದೆ. ಜೊತೆಗೆ 11 ವಿದೇಶಿ ನೋಟು, 270 ಗ್ರಾಂ ಚಿನ್ನ, 765 ಗ್ರಾಂ ಬೆಳ್ಳಿ ಆಭರಣಗಳು ಕಾಣಿಕೆ ರೂಪದಲ್ಲಿ ಹರಿದು ಬಂದಿದೆ ಎಂದು ಚಾಮುಂಡೇಶ್ವರಿ ದೇವಾಲಯದ ಕಾರ್ಯ ನಿರ್ವಹಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಳೆದ ಮೂರು-ನಾಲ್ಕು ತಿಂಗಳಿಂದಲೂ ಚಾಮುಂಡಿ ಬೆಟ್ಟಕ್ಕೆ ಭಕ್ತರ ಹೆಚ್ಚಾಗಿದೆ.ಮೈಸೂರು ಮಾತ್ರವಲ್ಲದೇ ಹೊರರಾಜ್ಯಗಳಿಂದಲೂ ಹೆಚ್ಚಿನ ಭಕ್ತರು ಆಗಮಿಸಿದ್ದಾರೆ . ವಿವಿಧ ಸೇವೆಗಳನ್ನು ಅಧಿದೇವತೆಗೆ ಸಮರ್ಪಣೆ ಮಾಡುತ್ತಿದ್ದಾರೆ, ಪರಿಣಾಮವಾಗಿ ಹುಂಡಿಯಲ್ಲಿ ಹೆಚ್ಚು ದೇಣಿಗೆ ಸಂಗ್ರಹವಾಗಿದೆ .

ಏಪ್ರಿಲ್, ಮೇ ತಿಂಗಳಿಗೆ ಶಾಲಾ ಕಾಲೇಜುಗಳು ಬಹುತೇಕ ರಜೆ ಕಾರಣ , ಮೈಸೂರಿನ ಪ್ರವಾಸಿ ತಾಣಗಳಲ್ಲಿ ಮತ್ತಷ್ಟು ಜನಜಂಗುಳಿ ಇರಲಿದೆ.

ಚಾಮುಂಡಿ ಬೆಟ್ಟ ಮಾತ್ರವಲ್ಲದೇ ಮೈಸೂರು ಮೃಗಾಲಯ , ಕಾರಂಜಿಕೆರೆ , ಅರಮನೆ ಸೇರಿ ಎಲ್ಲಾ ಪ್ರವಾಸಿ ತಾಣಗಳು ತುಂಬಿ ತುಳುಕಲಿದ್ದು, ಮುಂದಿನ 1 ತಿಂಗಳು ಮೈಸೂರಿಗೆ ಪ್ರವಾಸಿಗರು ಲಗ್ಗೆ ಇಡಲಿದ್ದಾರೆ.

Share This Article
Leave a comment