ಕನ್ನಡದ ಹಿರಿಯ ‘ಬಂಡಾಯ’ ಸಾಹಿತಿ ಚಂಪಾ ಇನ್ನಿಲ್ಲ

Team Newsnap
1 Min Read

ಚಂಪಾ ಎಂದೇ ಖ್ಯಾತರಾಗಿದ್ದ ಚಂದ್ರಶೇಖರ್ ಪಾಟೀಲ್ (83)ಇಂದು ಬೆಳಗಿನ ಜಾವ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ವೃತ್ತಿಯಿಂದ ಕನಾ೯ಟಕ ವಿ ವಿ ಯಲ್ಲಿ ಪ್ರೊಫೆಸರ್ ಆಗಿ ಸೇವೆ ಮಾಡುತ್ತುದ್ದ ಚಂಪಾ ಹಾವೇರಿ ಜಿಲ್ಲೆಯ ಸವಣೂರಿನ ಬಳಿ ಹಳ್ಳಿಯಲ್ಲಿ 1939 ರಲ್ಲಿ ಜನಿಸಿದ್ದರು.

ನಿಷ್ಠೂರವಾದಿ ಲೋಕವಿರೋಧಿ ಎಂಬಂತೆ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಬರವಣಿಗೆಯಿಂದಲೇ ಸಮಾಜ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡುತ್ತಿದ್ದರು.

ಸಾಹಿತ್ಯದ ಹಲವಾರು ಮಜಲುಗಳನ್ನು ಸೃಷ್ಠಿಸಿದ್ದ ಚಂಪಾ 2017 ರಲ್ಲಿ ಮೈಸೂರಿನಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕನ್ನಡ ಪ್ರಾಧಕಾರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ಹಾಗೂ ಬಂಡಾಯ ಸಾಹಿತ್ಯ ರಿಷತ್ ಅಧ್ಯಕ್ಷರೂ ಆಗಿದ್ದರು.

ನಾಡು ನುಡಿ ಹೋರಾಟಕ್ಕೆ ಸದಾ ಮುಂದೆ ನಿಲ್ಲುತ್ತಿದ್ದ ಚಂಪಾ ಅವರಿಗೆ ಬಸವ ಶ್ರೀ ಪ್ರಶಸ್ತಿ , ನಾಟಕ , ಸಾಹಿತ್ಯ ಅಕಾಡಮಿ, ಕನ್ನಡ
ರಾಜ್ಯೋತ್ಸವ ಸೇರಿದಂತೆ ಅನೇಕ ಪ್ರಶಸ್ತಿಗೆ ಭಾಜನರಾಗಿದ್ದರು.

Share This Article
Leave a comment