March 14, 2026

Newsnap Kannada

The World at your finger tips!

charulath somala

ಚಾಮರಾಜನಗರ ಡಿ ಸಿ,ಎಂ ಆರ್ ರವಿ ವರ್ಗಾವಣೆ – ಚಾರುಲತಾ ನೂತನ ಡಿ ಸಿ

Spread the love

ಕೊನೆಗೂ ಚಾಮರಾಜನಗರ ಡಿಸಿ ಡಾ .ಎಂ ಆರ್ ರವಿ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.

ತೆರವಾದ ರವಿ ಸ್ಥಾನಕ್ಕೆ ಚಾರುಲತಾ ಸೊಮಾಲ್ ಅವರನ್ನು ಚಾಮರಾಜನಗರ ನೂತನ ಡಿಸಿಯಾಗಿ ನೇಮಕ ಮಾಡಲಾಗಿದೆ.

ವಗಾ೯ವಣೆಯಾದ ನಿರ್ಗಮಿತ ಡಿಸಿ. ಎಂ. ಆರ್.ರವಿಗೆ ಯಾವುದೇ ಸ್ಥಾನ ತೋರಿಸಿಲ್ಲ.

ರವಿ ಮೂಲತಃ ಚಾಮರಾಜನಗರ ಜಿಲ್ಲೆಯ ಮಾಂಬಳ್ಳಿಯವರಾಗಿದ್ದಾರೆ. ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಸ್ವಂತ ಜಿಲ್ಲೆಯವರು ಅಧಿಕಾರಿ ಕೆಲಸ ನಿವ೯ಹಣೆ ಮಾಡುವಂತಿಲ್ಲ. ಹೀಗಾಗಿ ರವಿ ಅವರನ್ನು ವರ್ಗಾವಣೆ ಮಾಡಲಾಗಿದೆ.

ಈ ಹಿಂದೆ ಚಾಮರಾಜನಗದಲ್ಲಿ ಕೊವಿಡ್ ಕಾರಣದಿಂದಾಗಿ 32 ಮಂದಿ ಸಾವನ್ನಪ್ಪಿದ್ದರೂ ಡಿಸಿ ರವಿ ತಮ್ಮ ಪ್ರಭಾವ ಬಳಕೆ ಮಾಡಿಕೊಂಡು ವರ್ಗಾವಣೆ ಆಗದೇ ಅಲ್ಲೇ ಉಳಿದಿದ್ದರು.

error: Content is protected !!