January 11, 2025

Newsnap Kannada

The World at your finger tips!

kalarbugi , News , Drought

ಸಿದ್ದು ಗುಣಗಾನ ಮಾಡಿದ ಚಲುವರಾಯಸ್ವಾಮಿ : ಜೆಡಿಎಸ್ ಗೆ ಟಾಂಗ್

Spread the love

ನಾಟಕ, ಥಳಕು ಇಲ್ಲದ, ಬಿಚ್ಚು ಮನಸ್ಸಿನ ರಾಜಕಾರಣಿ ಸಿದ್ದರಾಮಯ್ಯ‌ ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಶನಿವಾರ ಮನಸಾರೆ ಬಣ್ಣನೆ ಮಾಡಿದರು.

ಮಂಡ್ಯದಲ್ಲಿ ಡಾ ಹಾಮಾನಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಚಲುವರಾಯಸ್ವಾಮಿ ಇಂದಿನ ರಾಜಕಾರಣದಲ್ಲಿ ನಾಟಕ, ಗಿಮಿಕ್, ಥಳಕು ಕಲಿತರೆ ಉತ್ತಮ ರಾಜಕಾರಣಿ ಆಗಬಹುದು.ಆದರೆ, ಸಿದ್ದರಾಮಯ್ಯ, ನಾವು ಅದನ್ನ ಕಲಿಯಲಿಲ್ಲ.
ಜನರೂ ಕೂಡ ಅದನ್ನ ಕಲಿಸಲಿಲ್ಲ.
ರಾಜಕೀಯವಾಗಿ ಆ ರೀತಿ ನಡೆದುಕೊಳ್ಳಲು ನಮಗೆ ಇಂದಿಗೂ ಸಾಧ್ಯವಿಲ್ಲ ಎಂದರು.

ರಾಜಕಾರಣದಲ್ಲಿ ಜಿಲ್ಲೆಯ ಜನ ದುಡುಕಿನ ನಿರ್ಧಾರ ಮಾಡಬಾರದು.
ಅದರಿಂದ ಬೇರೆಯವರಿಗಿಂತ, ನಮಗೇ ಹೆಚ್ಚಿನ ತೊಂದರೆ ಆಗುತ್ತೆ. ಅದನ್ನು ಈಗ ನಾವು ನೋಡ್ತಿದ್ದೇವೆ.ಅದಕ್ಕಾಗಿ ಯೋಚನೆ ಮಾಡಿ, ವಿವೇಚನೆಯಿಂದ ನಿರ್ಧಾರ ಮಾಡಿ ಎಂದು ಪರೋಕ್ಷವಾಗಿ ಜೆಡಿಎಸ್ ಗೆ ಬೆಂಬಲ ನೀಡುವುದಕ್ಕೆ ಟಾಂಗ್ ನೀಡಿದರು.

ಸಿದ್ದರಾಮಯ್ಯ ಜಾತಿವಾದಿಯಲ್ಲ:

ಸಿದ್ದರಾಮಯ್ಯನವರನ್ನು ಜಾತಿವಾದಿ ಅಂತಾ ಬಿಂಬಿಸ್ತಾರೆ. ಅವರು ಜಾತಿವಾದಿಯಲ್ಲ, ಎಲ್ಲಾ ವರ್ಗದ ಬಡವರ ಪರ. ಅವರು 5 ಸಿಎಂ ಆಗಿ ನೀಡಿದ ಕೊಡುಗೆಗಳೇ ಸಾಕ್ಷಿ.
ಆರ್ಥಿಕ, ಸಾಮಾಜಿಕ, ಸಾಹಿತ್ಯಿಕ, ಶೈಕ್ಷಣಿಕವಾಗಿ ವಿಷಯ ಕರಗತ ಮಾಡಿಕೊಂಡಿದ್ದಾರೆ.
ಆರ್ಥಿಕ ತಜ್ಞ ಅಲ್ಲದಿದ್ದರೂ, ಅತೀ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಕೀರ್ತಿ ಇದೆ.

ನೇರ ನಡೆ, ನುಡಿಗೆ ಸಿದ್ದರಾಮಯ್ಯ ಪ್ರಸಿದ್ಧಿಯಾಗಿದ್ದಾರೆ. ಅದನ್ನು ಅರಗಿಸಿಕೊಳ್ಳದವರಿಂದ ಸಿದ್ದರಾಮಯ್ಯನವರ ಬಗ್ಗೆ ಟೀಕೆ ಕೇಳಿ ಬರುತ್ತವೆ ಎಂದರು.

Copyright © All rights reserved Newsnap | Newsever by AF themes.
error: Content is protected !!