ಬಹು ಕೋಟಿ ಹಣ ವಂಚಿಸಿದ ಆರೋಪಿ ಚೈತ್ರಾ ಕುಂದಾಪುರ ಕುಸಿದು ಬಿದ್ದು ವಿಕ್ಟೋರಿಯಾಗೆ ದಾಖಲು

Team Newsnap
1 Min Read

ಬೆಂಗಳೂರು : ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಉದ್ಯಮಿಗೆ 5 ಕೋಟಿ ರು ವಂಚಿಸಿದ ಪ್ರಕರಣ ಸಂಬಂಧ ಸಿಸಿಬಿ ವಶದಲ್ಲಿರುವ ಚೈತ್ರಾ ಕುಂದಾಪುರ ಕುಸಿದು ಬಿದ್ದಿದ್ದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿನ್ನೆಯಿಂದ ಸಿಸಿಬಿ ವಶದಲ್ಲಿರುವ ಚೈತ್ರಾ ಕುಂದಾಪುರ ಅವರನ್ನು ಸಿಸಿಬಿ ಪೊಲೀಸರು ತಿವ್ರ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆಯ ಎರಡನೇ ದಿನವಾದ ಇಂದು ಚೈತ್ರಾ ಅನಾರೋಗ್ಯದಿಂದ ಕುಸಿದುಬಿದ್ದಿರುವುದಾಗಿ ತಿಳಿದುಬಂದಿದೆ.

ಕೂಡಲೇ ಅವರನ್ನು ಸಿಸಿಬಿ ಕಚೇರಿಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಹಿಳಾ ಸಾಂತ್ವನ ಕೇಂದ್ರದಲ್ಲಿದ್ದ ಚೈತ್ರಾಳನ್ನು ವಿಚಾರಣೆಗಾಗಿ ಸಿಸಿಬಿ ಕಚೇರಿಗೆ ಕರೆತರಲಾಗಿತ್ತು, ಈ ವೇಳೆ ಕುಸಿದು ಬಿದ್ದ ಚೈತ್ರಾರನ್ನು ಸ್ಟ್ರೆಚರ್ ತಂದು ಆಸ್ಪತ್ರೆ ಸಿಬ್ಬಂದಿ ಕರೆದೊಯ್ದಿದ್ದಾರೆ.

ಚೈತ್ರಾ ಕುಂದಾಪುರ ಮೂರ್ಛೆ ರೋಗದಿಂದ ಬಳತ್ತಿದ್ದು ಅವರ ಬಾಯಿಯಲ್ಲಿ ನೊರೆ ಬಂದಿದೆ ಎಂದು ತಿಳಿದು ಬಂದಿದೆ.

ಬೆಳಗ್ಗೆ ಆಕೆಯನ್ನು ಸಾಂತ್ವನ ಕೇಂದ್ರದಿಂದ ಕರೆತರಲಾಗಿತ್ತು, ಆಕೆ ಈ ನಡುವೆ ವಿಷ ಸೇವಿಸಿದ್ದಾಳೆ. ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಒಯ್ಯುವ ವೇಳೆ ಆಕೆಯ ಬಾಯಿಯಿಂದ ನೊರೆ ಬರುತ್ತಿದ್ದು, ಸಂಪೂರ್ಣ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ.ವಿಶ್ವರೂಪಿ ವಿಶ್ವೇಶ್ವರಯ್ಯನವರು.

ಸೆ. 12ರಂದು ಉಡುಪಿಯಲ್ಲಿ ಬಂಧನಕ್ಕೆ ಒಳಗಾದಾಗಲೂ ಚೈತ್ರಾ ಕುಂದಾಪುರ ಇಂಥಹುದೇ ಪ್ರಯತ್ನ ನಡೆಸಿದ್ದರು. ಅಂದು ಬಂಗಾರದ ಉಂಗುರ ನುಂಗಿ ಆತ್ಮಹತ್ಯೆಗೆ ಪ್ರಯತ್ನಿಸಿದ ಆಕೆಯನ್ನು ರಕ್ಷಿಸಲಾಗಿತ್ತು.

Share This Article
Leave a comment