February 23, 2026

Newsnap Kannada

The World at your finger tips!

ravishankar prasad

ಕೇಂದ್ರದ ಐಟಿ ಖಾತೆ ಸಚಿವ ರವಿಶಂಕರ್ ಪ್ರಸಾದ್ ‌ಟ್ವಿಟ್ಟರ್ ಖಾತೆ ಗೆ ನಿರ್ಬಂಧ

Spread the love

ಈಗಾಗಲೇ ಹಲವು ನಾಯಕರ ಟ್ವಿಟ್ಟರ್ ಖಾತೆಯನ್ನು ಬ್ಲೂ ಟಿಕ್ ತೆಗೆದು ಹಾಕಿ, ವಿವಾದಕ್ಕೆ ಈಡಾಗಿರುವ ಟ್ವಿಟ್ಟರ್, ಈಗ ಕೇಂದ್ರ ಪ್ರಸಾರ ಖಾತೆ ಸಚಿವ ರವಿ ಶಂಕರ್ ಪ್ರಸಾದ್ ಅವರ ಖಾತೆಗೆ ಪ್ರವೇಶವನ್ನು ಟ್ವಿಟರ್ ನಿರಾಕರಿಸಿದೆ.

ಈ ಕುರಿತಂತೆ ಮತ್ತೊಂದು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿರುವಂತ ಕೇಂದ್ರ ಐಟಿ ಸಚಿವ ರವಿಶಂಕರ್ ಪ್ರಸಾದ್ ಅವರು, ಟ್ವಿಟ್ಟರ್ ನನ್ನ ಖಾತೆಯನ್ನು ಪ್ರವೇಶಿಸುವುದಕ್ಕೆ ನಿರ್ಬಂಧಿಸಿದೆ. ಈ ಬಗ್ಗೆ ಮಾಹಿತಿ ಪಡೆದಾಗ, ತಾವು ಯುಎಸ್‌ಎಯ ಡಿಜಿಟಲ್ ಮಿಲೇನಿಯಂ ಕೃತಿಸ್ವಾಮ್ಯ ಕಾಯ್ದೆಯ ಉಲ್ಲಂಘನೆಯಾಗಿದೆ ಎಂಬುದಾಗಿ ತಿಳಿಸಿದೆ ಎಂದಿದ್ದಾರೆ.

ಟ್ವಿಟ್ಟರ್ ಖಾತೆ ನಿರ್ಬಂಧದಿಂದಾಗಿ, ಕೇಂದ್ರ ಐಟಿ ಸಚಿವರೇ, ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ತಮ್ಮ ಟ್ವಿಟ್ಟರ್ ಖಾತೆಯನ್ನು ಪ್ರವೇಶಿಸಲು ಸಮಸ್ಯೆ ಆಗಿದೆ ಎಂಬ ಮಾಹಿತಿ ಹಂಚಿಕೊಂಡಿದ್ದಾರೆ.

error: Content is protected !!