ಪ್ಯಾಕೇಜ್ ಘೋಷಣೆ ಕುರಿತು ಚರ್ಚೆಗೆ ಅಧಿವೇಶನ ಕರೆಯಿರಿ : ಮಾಜಿ ಸಿಎಂ ಎಚ್ ಡಿ ಕೆ ಒತ್ತಾಯ

Team Newsnap
1 Min Read

ರಾಜ್ಯ ವಿಧಾನ ಸಭೆಯ ವಿಶೇಷ ಅಧಿವೇಶನ ಕರೆಯಲು ರಾಜ್ಯ ಸರ್ಕಾರಕ್ಕೆ ಎಚ್.ಡಿ.ಕುಮಾರಸ್ವಾಮಿ ಪತ್ರ ಬರೆದಿದ್ದಾರೆ.‌
ಈ ಕುರಿತಂತೆ ಚನ್ನಪಟ್ಟಣದಲ್ಲಿ ಹೇಳಿಕೆ ನೀಡಿರುವ ಮಾಜಿ ಸಿಎಂ ಕುಮಾರಸ್ವಾಮಿ
ಕೋವಿಡ್ ಸಂದರ್ಭದಲ್ಲಿ ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಿದೆ
ಈ ವಿಚಾರವಾಗಿ ಸರ್ಕಾರ ವಿಶೇಷ ಅಧಿವೇಶನ ಕರೆಯಬೇಕಿತ್ತು
ಸರ್ಕಾರ ಶಾಸಕರ ಅಭಿಪ್ರಾಯ ಕೇಳಬೇಕಿತ್ತು
ಸರ್ಕಾರದಿಂದ ಕೆಲ ಲೋಪದೋಷಗಳು ಆಗಿವೆ ಎಂದರು. ‌

ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆಯಾಗಬೇಕಿತ್ತು
ಆದರೆ ಸರ್ಕಾರ ಈ ಬಗ್ಗೆ ಯಾವುದೇ ಕ್ರಮವಹಿಸಿಲ್ಲ. ರಾಜ್ಯದ ಆರುವರೆ ಕೋಟಿ ಜನರು ತೆರಿಗೆ ಕಟ್ಟಿದ್ದಾರೆ .
ಆ ತೆರಿಗೆ ಹಣದಲ್ಲಿ ಪ್ಯಾಕೇಜ್ ಘೋಷಣೆ ಮಾಡಲಾಗಿದೆ
ಅದರಲ್ಲಿ ಆಗಿರುವ ಲೋಪದೋಷದ ಬಗ್ಗೆ ಚರ್ಚೆಯಾಗಬೇಕಿದೆ ಎಂದು ಒತ್ತಾಯಿಸಿದರು.

ಪಕ್ಕದ ಮಹಾರಾಷ್ಟ್ರದಲ್ಲಿ ಎರಡು ದಿನ ಅಧಿವೇಶನ ಕರೆಯಲಾಗಿದೆ
ಆದರೆ ಅಲ್ಲಿನ ಬಿಜೆಪಿ ಶಾಸಕರು ಎರಡು ದಿನ ಸಾಲಲ್ಲ ಎಂದಿದ್ದಾರೆ
ಇದು ರಾಷ್ಟ್ರೀಯ ಪಕ್ಷಗಳ ದ್ವಂದ್ವ ನಿಲುವುಗಳು.‌ ಇನ್ನು ಕನ್ನಡದ ವಿಚಾರವಾಗಿ ಕೇಂದ್ರ ಸರ್ಕಾರ ಭಾಷೆಯ ಪರವಾಗಿಲ್ಲ
ಈ ವಿಚಾರವಾಗಿ ಕೇಂದ್ರದ ಧೋರಣೆ ಸರಿಯಿಲ್ಲ
ಕೆಲ ಖಾಸಗಿ ಕಂಪನಿಗಳು ಅವಹೇಳನ‌ ಮಾಡಿದರೂ ಇದರ ಬಗ್ಗೆ ಯಾರು ಮಾತನಾಡಲ್ಲ
ರಾಜ್ಯದಲ್ಲಿ ಗೆದ್ದಿರುವ ಬಿಜೆಪಿ ಶಾಸಕರು, ಸಂಸದರು ಈ ಬಗ್ಗೆ ಮಾತನಾಡಲ್ಲ . ಈ ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ವಿಶೇಷ ಅಧಿವೇಶನ ಕರೆಯಬೇಕು
ಅದಕ್ಕಾಗಿ ಸರ್ಕಾರಕ್ಕೆ ವೈಯಕ್ತಿಕವಾಗಿ ಪತ್ರ ಬರೆದಿದ್ದೇನೆ .‌
ಸರ್ಕಾರ ಅಧಿವೇಶನ ಕರೆಯದಿದ್ದರೇ ಪಕ್ಷದ ವತಿಯಿಂದಲೇ ಸರ್ಕಾರದ ಮೇಲೆ ಒತ್ತಡ ಹಾಕಲಾಗುತ್ತದೆ ಎಂದರು.

Share This Article
Leave a comment