ರಮೇಶ್ ಜಾರಕಿಹೊಳಿ ಖಾಸಗಿ ವಿಡಿಯೋ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಹೈಕೋರ್ಟ್ ಮುಖ್ಯ ವಿಭಾಗೀಯ ಪೀಠದಲ್ಲಿ ಅರ್ಜಿಯ ವಿಚಾರಣೆ ನಡೆಯಿತು.
ಎಸ್ ಐಟಿ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ವರದಿ ಸಲ್ಲಿಸಿದರು. ಮೂರು ಎಫ್ಐಆರ್ಗಳ ಬಗ್ಗೆ ಹೈಕೋರ್ಟ್ಗೆ ರಿಪೋರ್ಟ್ ಸಲ್ಲಿಸಲಾಯಿತು. ಇದಕ್ಕೆ ಅರ್ಜಿದಾರರ ಪರ ವಕೀಲರಿಂದ ಆಕ್ಷೇಪಣೆಯೂ ಸಲ್ಲಿಕೆಯಾಯ್ತು.
ರಿಪೋರ್ಟ್ ನಲ್ಲಿ ಪ್ರಕರಣದ ತನಿಖೆ ಮುಂದುವರೆಯುತ್ತಿದೆ. ಈ ವೇಳೆ ಹೈಕೋರ್ಟ್ 17 ಜೂನ್ 2021 ರಂದು ಎಸ್ಐಟಿ ಮುಖ್ಯಸ್ಥರ ಸಹಿ ಸಮೇತ ವರದಿ ನೀಡಲು ಹೈಕೋರ್ಟ್ ಸೂಚನೆ ನೀಡಿತು.
ಎಸ್ಐಟಿ ಮುಖ್ಯಸ್ಥ ಇಲ್ಲದಿದ್ದರೆ ಅನುಮತಿ ಮೇಲೆ ಸಲ್ಲಿಸಿ. ಇಲ್ಲವೇ ಎಸ್ಐಟಿಗೆ ಸದ್ಯ ಇನ್ ಚಾಜ್೯ ಇರುವವರು ನೀಡಬೇಕು ಎಂದು ಹೈಕೋರ್ಟ್ ಹೇಳಿತು.
ಅರ್ಜಿ ವಿಚಾರಣೆಯನ್ನು ಜೂ. 18ಕ್ಕೆ ಮುಂದೂಡಿಕೆ ಮಾಡಲಾಯ್ತು.
ಎಸ್ಐಟಿ ಮುಖ್ಯಸ್ಥರ ಸಹಿ ಇಲ್ಲದೇ ವರದಿ ಸಲ್ಲಿಕೆ ಮಾಡುವ ಅಗತ್ಯವೇನಿತ್ತು.? ಎಂದು ಹೈಕೋರ್ಟ್ ಕೇಳಿದಾಗ ಅವರು ರಜೆ ಇರುವ ಕಾರಣ ಇವರಿಂದ ಸಲ್ಲಿಕೆ ಅಂತಾ ಉತ್ತರ ನೀಡಲಾಯ್ತು. ಅಲ್ಲದೆ ಇನ್ನೊಂದು ಪ್ರಕರಣದಲ್ಲಿ ಪ್ರಕರಣದ ತನಿಖಾ ವರದಿಯನ್ನು ಸೀಲ್ಡ್ ಕವರ್ನಲ್ಲಿ ಎಸ್ಐಟಿ ಟೀಂ ರಿಪೋರ್ಟ್ ಸಲ್ಲಿಕೆ ಮಾಡಿತು.
- BCCI ನೂತನ ಕಾರ್ಯದರ್ಶಿಯಾಗಿ ದೇವಜಿತ್ ಸೈಕಿಯಾ ಆಯ್ಕೆ
- ಹುಟ್ಟುಹಬ್ಬದ ದಿನವೇ ಬಾಲಕನ ದುರ್ಮರಣ
- KPSC ಪರೀಕ್ಷೆಗಳಲ್ಲಿ ಕನ್ನಡ ದೋಷಗಳ ವಿವಾದ – ಮರುಪರೀಕ್ಷೆಗೆ ಪ್ರಬಲ ಒತ್ತಾಯ
- ಮಂಡ್ಯ ರೈತರನ್ನು ಕಾಡುತ್ತಿರುವ ವಕ್ಫ್ ಭೂಮಿ ವಿವಾದ
- ಪ್ರತಿಸ್ಪಂದಿಸಿ ಆದರೆ ಪ್ರತಿಕ್ರಿಯಿಸಬೇಡಿ
More Stories
KPSC ಪರೀಕ್ಷೆಗಳಲ್ಲಿ ಕನ್ನಡ ದೋಷಗಳ ವಿವಾದ – ಮರುಪರೀಕ್ಷೆಗೆ ಪ್ರಬಲ ಒತ್ತಾಯ
ರಾಜ್ಯ ಸರ್ಕಾರದಿಂದ 11 ಡಿವೈಎಸ್ಪಿ (ಸಿವಿಲ್) ಅಧಿಕಾರಿಗಳ ವರ್ಗಾವಣೆ
ರಾಜ್ಯ ಸರ್ಕಾರದಿಂದ 41 ಪೊಲೀಸ್ ಇನ್ಸ್ಪೆಕ್ಟರ್ಗಳ ದಿಢೀರ್ ವರ್ಗಾವಣೆ