March 15, 2026

Newsnap Kannada

The World at your finger tips!

naguvanahalli

ಸಿಸಿಟಿವಿಯಲ್ಲಿ ಆತ್ಮಗಳ ಸಂಚಾರದ ದೃಷ್ಯ ಸೆರೆ : ಮಂಡ್ಯದ ನಗುವನಹಳ್ಳಿಯಲ್ಲಿ ವಿಸ್ಮಯ – ನಿಗೂಢ, ಆತಂಕ

Spread the love

ಭೂಮಿಯ ಮೇಲೆ ಆತ್ಮಗಳು ಸಂಚಾರ ಮಾಡುತ್ತವೆ , ಇಲ್ಲ ಎನ್ನುವ ತರ್ಕಗಳ ನಡುವೆಯೂ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ‌ ನಗುವನಹಳ್ಳಿಯಲ್ಲಿ ಆತ್ಮ ಸಂಚಾರ ಮಾಡಿದೆ ಎನ್ನಲಾದ ದೃಶ್ಯವೊಂದು ಸಿಸಿಟಿವಿಯಲ್ಲಿ ದಾಖಲಾಗಿದೆ.

ನಗುವಿನಹಳ್ಳಿ ಗ್ರಾಮದ ಗೋಪಾಲ್ ಎಂಬವರ ತೋಟದ ಮನೆಯಲ್ಲಿ ಜನವರಿ 31 ರಂದು ಇದ್ದಕ್ಕಿದ್ದ ಹಾಗೆ ಕಪ್ಪು ನೆರಳೊಂದು ಸಂಚಾರ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನು ಕಂಡ ಜನರೆಲ್ಲಾ ಇದು ಆತ್ಮ ಸಂಚಾರ ಮಾಡುವ ದೃಶ್ಯ ಎಂದು ಹೇಳುತ್ತಿದ್ದಂತೆ ಆತಂಕದ ವಾತಾವರಣ ಸೃಷ್ಟಿಯಾಯಿತು.

ಗೋಪಾಲ್ ತೋಟದ ಮನೆ ನಗುವಿನಹಳ್ಳಿ ಗ್ರಾಮದ ಹೊರ ಭಾಗದಲ್ಲಿರುವ ಒಂದು ಹಳ್ಳ ಹರಿಯುತ್ತಿದೆ.

ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯು ಸಹ ಇದೆ. ಇಲ್ಲಿ ಹಲವು ವರ್ಷಗಳ ಹಿಂದೆ ಮಹಿಳೆ ಹಾಗೂ ಯುವಕ ಅಪಘಾತದಿಂದ ಮೃತಪಟ್ಟಿದ್ದರು. ಜೊತೆಗೆ ಓರ್ವ ಕುಡಿದ ಮತ್ತಿನಲ್ಲಿ ಹಳ್ಳಕ್ಕೆ ಬಿದ್ದು ಸಾವನ್ನಪ್ಪಿದ್ದಾನೆ. ಈ ಘಟನೆಗಳ ಆತ್ಮಗಳು ಸಂಚಾರ ಮಾಡುವ ದೃಶ್ಯಗಳು ಸೆರೆಯಾಗಿವೆ ಎಂದು ಸ್ಥಳೀಯರ ಅನಿಸಿಕೆ.

ಗೋಪಾಲ್ ಕಳ್ಳರ ಭಯದಿಂದ ಸಿಸಿಟಿವಿ ಕ್ಯಾಮೆರಾವನ್ನು ತಮ್ಮ ತೋಟದ ಮನೆಯಲ್ಲಿ ಸಿಸಿಟಿವಿ ಹಾಕಿಸಿದ್ದರು. ಇದೀಗ ಅದೇ ಸಿಸಿಟಿವಿಯಲ್ಲಿ ಕಳ್ಳರ ಬದಲಿಗೆ ಆತಂಕ ಹುಟ್ಟಿಸುವ ದೃಶ್ಯವೊಂದು ಸೆರೆಯಾಗಿರುವುದನ್ನು ನೋಡಿ ಗ್ರಾಮಸ್ಥರಲ್ಲಿ ಒಂದಷ್ಟು ಆತಂಕ ಹುಟ್ಟಿದೆ.

error: Content is protected !!