ಸಿಬಿಎಸ್ಇ ಬೋಡ್೯ ಪರೀಕ್ಷೆ: 10 ನೇ ತರಗತಿಯಲ್ಲೂ ವಿದ್ಯಾರ್ಥಿಗಳನ್ನು ಫೇಲ್ ಮಾಡೋಲ್ಲ

Team Newsnap
1 Min Read

ಸ್ಕಿಲ್ ಇಂಡಿಯಾದ ಉದ್ದೇಶದ ಅನ್ವಯ ದಂತೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ ಇ ಬೋರ್ಡ್) ಹೊಸ ನಿಯಮಗಳನ್ನು ರೂಪಿಸಿದೆ. ಇದು ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ.

ಹೊಸ ನಿಯಮದ ಪ್ರಕಾರ, ಸಿಬಿಎಸ್ ಇ ವಿದ್ಯಾರ್ಥಿಗಳು ಇನ್ನು ಮುಂದೆ 10ನೇ ಪರೀಕ್ಷೆಯಲ್ಲಿ ( 2021) ಅನುತ್ತೀರ್ಣರಾಗುವುದಕ್ಕೆ ಅವಕಾಶ ಇಲ್ಲ.

ಅನೇಕ ವಿದ್ಯಾರ್ಥಿಗಳು ಗಣಿತ ಅಥವಾ ವಿಜ್ಞಾನ ವಿಷಯಗಳಲ್ಲಿ ಅನುತ್ತೀರ್ಣರಾಗುತ್ತಾರೆ, ಆದರೆ ಕಂಪ್ಯೂಟರ್ ಅಥವಾ ಇನ್ನಾವುದೇ ಕೌಶಲ್ಯದಲ್ಲಿ ಅವರು ಉತ್ತಮ ವಾಗಿದ್ದರೆ, ಕೇವಲ ಒಂದು ಅಥವಾ ಎರಡು ವಿಷಯಗಳಲ್ಲಿ ಉತ್ತಮ ಅಂಕಗಳನ್ನು ಗಳಿಸದೆ ಇದ್ದರೆ ಅವರು ಅನುತ್ತೀರ್ಣರಾಗಿ ಮಾಡುವುದಿಲ್ಲ.

ಸಿಬಿಎಸ್ ಇ ಯ ನೀತಿಯ ಪ್ರಕಾರ, ಒಬ್ಬ ವಿದ್ಯಾರ್ಥಿಯು ಮೂರು ಆಯ್ಕೆವಿಷಯಗಳಲ್ಲಿ (ಅಂದರೆ ವಿಜ್ಞಾನ, ಗಣಿತ ಮತ್ತು ಸಮಾಜ ವಿಜ್ಞಾನ) ಯಾವುದೇ ಒಂದು ವಿಷಯದಲ್ಲಿ ಅನುತ್ತೀರ್ಣನಾದರೆ, ಅನುತ್ತೀರ್ಣಗೊಂಡ ವಿಷಯವನ್ನು ‘ಸ್ಕಿಲ್ ಸಬ್ಜೆಕ್ಟ್’ (6ನೇ ಹೆಚ್ಚುವರಿ ವಿಷಯವೆಂದು ಪರಿಗಣಿಸಲಾಗುವುದು) ಎಂದು ಬದಲಾಯಿಸಲಾಗುತ್ತದೆ.

10 ನೇ ತರಗತಿ ಪರೀಕ್ಷೆಯ ಶೇಕಡಾವಾರು ಪ್ರಮಾಣವನ್ನು ಐದು ವಿಷಯಗಳ ಮೇಲೆ ಲೆಕ್ಕಹಾಕಲಾಗು ತ್ತದೆ. ಸಿಬಿಎಸ್‌ಇಯ ಈ ನಿಯಮಗಳು ಮಕ್ಕಳ ಒಂದು ವರ್ಷ ಹಾಳಾಗುವುದನ್ನು ಮಾಡುವುದನ್ನು ತಪ್ಪಿಸುತ್ತದೆ.

ಹೊಸ ಶಿಕ್ಷಣ ನೀತಿಗೆ ಸಂಬಂಧಿಸಿದಂತೆ ಶಾಲೆಗಳಲ್ಲಿ ಹಲವಾರು ಬದಲಾವಣೆ ಗಳನ್ನು ಮಾಡಲಾಗುತ್ತಿದೆ. ಇತ್ತೀಚೆಗೆ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ , ಸಿಬಿಎಸ್ ಇ ಮುಖ್ಯಸ್ಥರ ಜತೆ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಶಾಲೆಗಳಲ್ಲಿ ಹೊಸ ಶಿಕ್ಷಣ ನೀತಿ ಜಾರಿಗೆ ಒತ್ತು ನೀಡಿದ್ದಾರೆ ಎನ್ನಲಾಗಿದೆ. ಈ ಮಧ್ಯೆ, ಸಿಬಿಎಸ್ ಇ 10 ಮತ್ತು 12ನೇ ತರಗತಿಗಳ ಪರೀಕ್ಷಾ ವೇಳಾಪಟ್ಟಿಯನ್ನು ಫೆಬ್ರವರಿ 2ರಂದು ಪ್ರಕಟಿಸಲಿದೆ.

Share This Article
Leave a comment