ಜೂನ್ 20 ರೊಳಗೆ ಸಿಬಿಎಸ್ ಇ 10 ನೇ ತರಗತಿ ಪರೀಕ್ಷಾ ಫಲಿತಾಂಶ – ಏನೆಲ್ಲಾ ಸಿದ್ದತೆ ?

Team Newsnap
1 Min Read
no extra fee to be collected for NEET JEE IIT exams

ಕೋವಿಡ್‌-19 ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿರುವ ಕೇಂದ್ರ ಪ್ರೌಢಶಿಕ್ಷಣ ಮಂಡಳಿಯ (ಸಿಬಿಎಸ್‌ಇ) 10ನೇ ತರಗತಿಯ ಪರೀಕ್ಷಾ ಫಲಿತಾಂಶವನ್ನು ಜೂನ್ 20ರೊಳಗೆ ಪ್ರಕಟಿಸಲಾಗುವುದು.

ಈ ವಿಷಯ ವನ್ನು ತಿಳಿಸಿರುವ ಪರೀಕ್ಷಾ ವಿಭಾಗದ ನಿಯಂತ್ರಕ ಸನ್ಯಂ ಭಾರದ್ವಾಜ್ ರದ್ದಾಗಿರುವ ಪರೀಕ್ಷೆಗಳಿಗೆ ಅಂಕಗಳನ್ನು ನಿಗದಿಪಡಿಸುವ ಯೋಜನೆಯನ್ನೂ ಸಿಬಿಎಸ್‌ಇ ರೂಪಿಸಿದೆ.

ಪ್ರತಿ ವರ್ಷಕ್ಕೆ 20 ಅಂಕಗಳು ಆಂತರಿಕ ಮೌಲ್ಯಮಾಪನ ಇರುತ್ತದೆ. ವರ್ಷವಿಡೀ ವಿವಿಧ ಪರೀಕ್ಷೆಗಳು ಅಥವಾ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಸಾಧನೆಯ ಆಧಾರದ ಮೇಲೆ 80 ಅಂಕಗಳನ್ನು ಲೆಕ್ಕಹಾಕಲಾಗುತ್ತದೆ ಎಂದಿದ್ದಾರೆ.

ಪ್ರಮುಖ ನಿರ್ಧಾರಗಳು :

1) ಫಲಿತಾಂಶಗಳನ್ನು ಅಂತಿಮಗೊಳಿಸಲು ಶಾಲೆಗಳು ಪ್ರಾಂಶುಪಾಲರ ನೇತೃತ್ವದಲ್ಲಿ ಮೇ 5ರೊಳಗೆ ಎಂಟು ಸದಸ್ಯರ ಸಮಿತಿಯನ್ನು ರಚಿಸಬೇಕು.

2) ಶಾಲಾವಾರು ಅಂಕಗಳ ವಿತರಣೆ ಮತ್ತು ದಾಖಲೆಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆಯನ್ನು ಮೇ 10ರೊಳಗೆ ಪೂರ್ಣಗೊಳಿಸಬೇಕು

3) ವರ್ಷವಿಡೀ ಕೆಲ ಪರೀಕ್ಷೆಗಳಲ್ಲಿ ಹಾಜರಾಗದವರಿಗೆ ಶಾಲೆಗಳು ಮೇ 15ರೊಳಗೆ ಆನ್‌ಲೈನ್ ಅಥವಾ ದೂರವಾಣಿ ಮೂಲಕ ಮೌಲ್ಯಮಾಪನ ನಡೆಸಲಿವೆ.

4) ಮೇ 25ರೊಳಗೆ ಫಲಿತಾಂಶವನ್ನು ಅಂತಿಮಗೊಳಿಸಲಿವೆ. ಜೂನ್ 11ರೊಳಗೆ ಎಲ್ಲಾ ಫಲಿತಾಂಶಗಳನ್ನು ಸಿಬಿಎಸ್‌ಇಗೆ ಸಲ್ಲಿಸಬೇಕು.

5) ಜೂನ್ 20ರೊಳಗೆ ಫಲಿತಾಂಶ ಹೊರಬೀಳಲಿದೆ.

Share This Article
Leave a comment