February 19, 2026

Newsnap Kannada

The World at your finger tips!

cbsc

ಫೆಬ್ರವರಿ ನಂತರವೇ ಸಿಬಿಎಸ್ ಸಿ 10- 12 ತರಗತಿ ಪರೀಕ್ಷೆ : ಕೇಂದ್ರ ಸಚಿವ ಪೊಖ್ರಿಯಾಲ್

Spread the love

ಸಿಬಿಎಸ್‌ಇ 10 ಮತ್ತು 12 ನೇ ತರಗತಿ ಪರೀಕ್ಷೆಗಳನ್ನು ಫೆಬ್ರವರಿ ನಂತರ ನಡೆಸಲು ನಿರ್ಧರಿಸಲಾಗಿದೆ ಹಾಗೂ ಶೀಘ್ರವೇ ಹೊಸ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ತಿಳಿಸಿದ್ದಾರೆ.

ಶಿಕ್ಷಕರು ಮತ್ತು ವಿದ್ಯಾರ್ಥಿ ಗಳೊಂದಿಗೆ ವೆಬಿನಾರ್ ಮೂಲಕ ಸಮಾಲೋಚನೆ ನಡೆಸಿದ ಸಚಿವ ರಮೇಶ್ ಫೆಬ್ರವರಿ 2021 ರ ವರೆಗೆ ಪರೀಕ್ಷೆಗಳು ನಡೆಯುವುದಿಲ್ಲ ಪರೀಕ್ಷೆ ರದ್ದಾಗಲ್ಲ ಎಂದರು.

ಪರೀಕ್ಷೆಯನ್ನು ರದ್ದುಗೊಳಿಸುವುದು ಮುಖ್ಯವಲ್ಲ. ಪರೀಕ್ಷೆಗಳಿಲ್ಲದೇ ವಿದ್ಯಾರ್ಥಿಗಳನ್ನು ಪಾಸ್ ಮಾಡುವುದು ಸರಿಯಾದ ಕ್ರಮವೂ ಅಲ್ಲ. ಹಾಗೆ ಮಾಡಿದರೆ ವಿದ್ಯಾರ್ಥಿಗಳಿಗೆ ಮುಂದೆ ಭವಿಷ್ಯದಲ್ಲಿ ಉನ್ನತ ಶಿಕ್ಷಣ, ಉದ್ಯೋಗ ಮತ್ತು ಪ್ರವೇಶ ಪಡೆಯುವಲ್ಲಿ ತೊಂದರೆ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಪರೀಕ್ಷೆಗಳನ್ನು ನಡೆಸುವ ಕುರಿತಾಗಿ ಫೆಬ್ರವರಿ ನಂತರವೇ ನಿರ್ಧರಿಸ ಲಾಗುತ್ತದೆ. ಪರೀಕ್ಷೆ ರದ್ದು ಮಾಡುವ ಯಾವುದೇ ಚಿಂತನೆ ಸರ್ಕಾರದ ಮುಂದಿಲ್ಲ ಎಂದಿದ್ದಾರೆ.

error: Content is protected !!