ರಾಜಸ್ಥಾನದ CM ಸಹೋದರನ ನಿವಾಸ, ಕಚೇರಿ ಮೇಲೆ CBI ದಾಳಿ

Team Newsnap
1 Min Read

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಸಹೋದರ ಅಗ್ರಸೇನ್ ಗೆಹ್ಲೋಟ್ ಅವರ ಮನೆ ಮೇಲೆ ಶುಕ್ರವಾರ CBI ಭ್ರಷ್ಟಾಚಾರ ಆರೋಪದ ಮೇಲೆ ದಾಳಿ ನಡೆಸಿದೆ. ತನಿಖಾ ಸಂಸ್ಥೆ ತಂಡವು ಅಗ್ರಸೇನ್ ಗೆಹ್ಲೋಟ್ ಅವರಿಗೆ ಸಂಬಂಧಿಸಿದ ಕಚೇರಿ ಮೇಲೂ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.

ರಸಗೊಬ್ಬರ ರಫ್ತು ಪ್ರಕರಣದ ಆರೋಪ ಹೊತ್ತಿರುವ ಅಗ್ರಸೇನ್ ಗೆಹ್ಲೋಟ್ ಈಗಾಗಲೇ ಜಾರಿ ನಿರ್ದೇಶನಾಲಯ (ED) ವಿಚಾರಣೆಗೆ ಒಳಪಟ್ಟಿದ್ದಾರೆ. 2007 ಮತ್ತು 2009ರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗೊಬ್ಬರವನ್ನು ಅಕ್ರಮವಾಗಿ ರಫ್ತು ಮಾಡಲಾಗಿದೆ ಎಂದು ಇಡಿ ಆರೋಪಿಸಿತ್ತು.

ಇದನ್ನು ಓದಿ –ಜೂನ್ 19ರಂದು ಮಧ್ಯರಾತ್ರಿ ತನಕವೂ ನಮ್ಮ ಮೆಟ್ರೋ ಸಂಚಾರ : 50 ರು ಟಿಕೆಟ್

ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಅಶೋಕ್ ಗೆಹ್ಲೋಟ್ ಮುಂಚೂಣಿಯಲ್ಲಿದ್ದರು. ಇದು ಮೋದಿ ಸರ್ಕಾರದ ಲಜ್ಜೆಗೆಟ್ಟ ಪ್ರತಿಕ್ರಿಯೆಯಾಗಿದೆ. ನಾವು ಮೌನವಾಗಿರುವುದಿಲ್ಲ ಎಂದು ಕಾಂಗ್ರೆಸ್‌ ನಾಯಕ ಜೈರಾಮ್ ರಮೇಶ್ ಟ್ವೀಟ್‌ ಮೂಲಕ ಕಿಡಿಕಾರಿದ್ದಾರೆ.

Share This Article
Leave a comment