March 31, 2023

Newsnap Kannada

The World at your finger tips!

anurag tivari

ನಿಗೂಢ ಸಾವು ಕಂಡ IAS ಅಧಿಕಾರಿ ಅನುರಾಗ್ ತಿವಾರಿ ಪ್ರಕರಣದ ಮರು ತನಿಖೆಗೆ CBI ಕೋರ್ಟ್ ಆದೇಶ

Spread the love

ಉತ್ತರ ಪ್ರದೇಶದಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ (36) ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ತಿವಾರಿ ಸಾವು ಸಹಜ ಎಂದು ನೀಡಿದ್ದ ಸಿಬಿಐ ವರದಿಯನ್ನು ಲಖನೌ ಸಿಬಿಐ ವಿಶೇಷ ನ್ಯಾಯಾಲಯ ತಿರಸ್ಕರಿಸಿ, ಮರು ತನಿಖೆ ನಡೆಸುವಂತೆ ನಿರ್ದೇಶನ ನೀಡಿದೆ.

ಅಕ್ಟೊಬರ್ 22 ರಿಂದ ಹೊಸ ತನಿಖೆ ಆರಂಭವಾಗಲಿದೆ, ಅನುರಾಗ್ ಕುಟುಂಬದವರ ದೂರಿನನ್ವಯ ಮರು ತನಿಖೆಗೆ ಕೋರ್ಟ್ ಆದೇಶ ಹೊರಡಿಸಿದೆ. ಕೋರ್ಟ್ ಆದೇಶದಿಂದ ಸಿಬಿಐಗೆ ಭಾರೀ ಹಿನ್ನಡೆಯಾಗಿದೆ.

2007ನೇ ಬ್ಯಾಚ್‍ನ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಮೃತದೇಹವು 2017ರಲ್ಲಿ ಲಖನೌದ ಹಜರತ್ ಗಂಜ್ ಗೆಸ್ಟ್ ಹೌಸ್‍ನಲ್ಲಿ ಪತ್ತೆಯಾಗಿತ್ತು. ಆಗ ತಿವಾರಿ ಕರ್ನಾಟಕ ರಾಜ್ಯದ ಆಹಾರ ಸರಬರಾಜು ಇಲಾಖೆಯ ಆಯುಕ್ತರಾಗಿದ್ದರು.

ಅನ್ನಭಾಗ್ಯ ಅಕ್ಕಿ ಹಗರಣದ ಬಗ್ಗೆ ತನಿಖೆ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲು ಸಜ್ಜಾಗಿದ್ದರು. ಸದ್ಯ ಸಾವಿಗೂ ಕೆಲ ದಿನಗಳ ಹಿಂದೆ ಸಹೋದರ ಮಯಾಂಕ್‍ಗೆ, ಕರ್ನಾಟಕದಲ್ಲಿ ದಕ್ಷ ಐಎಎಸ್ ಅಧಿಕಾರಿಗಳಿಗೆ ಕೆಲಸ ಮಾಡಲು ಆಗುತ್ತಿಲ್ಲ. ನನಗೂ ಸಹ ಜೀವ ಭಯವಿದೆ. ಆದಷ್ಟು ಬೇಗ ಮರಳಿ ಉತ್ತರಪ್ರದೇಶಕ್ಕೆ ಬರುವುದಾಗಿ ಮೆಸೇಜ್ ಮಾಡಿದ್ದರು. ರಾಜ್ಯದಲ್ಲಿ 11133 ಗುತ್ತಿಗೆ ಪೌರ ಕಾರ್ಮಿಕ ಸೇವೆ ಕಾಯಂಗೆ ನಿರ್ಧಾರ

ಅಧಿಕಾರಿ ಅನುರಾಗ್ ತಿವಾರಿ ಅವರ ಶವ ಉತ್ತರಪ್ರದೇಶದ ಹಜರತ್‍ಗಂಜ್‍ನಲ್ಲಿ ಮೇ 17ರಂದು ಪತ್ತೆಯಾಗಿತ್ತು. ಅನುರಾಗ್ ತಿವಾರಿ ಅವರ ಜನ್ಮದಿನದಂದೇ ಇಲ್ಲಿನ ಮೀರಾ ಬಾಯಿ ಗೆಸ್ಟ್‍ಹೌಸ್ ಬಳಿ ಶವವಾಗಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.

error: Content is protected !!