ಕೋವೀಡ್ , ಒಮಿಕ್ರೋನ್‌ ಕರಿನೆರಳಿನ ನಡುವೆಯೂ ಗವಿಮಠ ರಥೋತ್ಸವ

Team Newsnap
7 Min Read

ನಾಡಿನ ಸುಪ್ರಸಿದ್ಧ ಜಾತ್ರೆಗಳಲ್ಲಿ ಒಂದಾಗಿರುವ ಉತ್ತರಕರ್ನಾಟಕ ಭಾಗದ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವ ಈ ವರ್ಷವೂ ಕೊವೀಡ್ ರೂಪಾಂತರಿ ವೈರಸ್‌ ಒಮಿಕ್ರೋನ್ ಕರಿನೆರಳಿನ ನಡುವೆ ಬೆಳಿಗ್ಗೆ 4-15 ರ ಸಮಯದಲ್ಲಿ ಶಾಸ್ತೋಕ್ತವಾಗಿ ಸರ್ಕಾರದ ಆದೇಶ ಮತ್ತು ಕೊವೀಡ್ ನಿಯಮದಂತೆ ಭಕ್ತ ಜನಸಂದಣಿ ಇಲ್ಲದೆ ಹೆಸರಾಂತ ಗವಿಮಠದ ಸ್ವಾಮೀಜಿಯವರು ರಥೋತ್ಸವ ನಡೆಸಿ ಪರಿಸರ ಸ್ನೇಹಿ ಜಾತ್ರೆ ಆಚರಿಸಿದರು.

ಪ್ರತಿ ವರ್ಷ ರಥೋತ್ಸವ ದಿನದಂದು ಸುಮಾರು10 ಲಕ್ಷ ಜನರ ನಡುವೆ ರಥೋತ್ಸವ ನಡೆಯುತ್ತಿತ್ತು.

ಆದರೆ ಕಳೆದ ಎರಡು ವರ್ಷ ಕೊರೋನ ನಡುವೆ ಸರ್ಕಾರದ ಆದೇಶ ಮತ್ತು ನಿಯಮ ಪಾಲನೆ ಮಾಡುವುದರ ಮೂಲಕ ಮಹಾ ರಥೋತ್ಸವವನ್ನು ಮಠದ ಸಿಬ್ಬಂದಿ ಮತ್ತು ಜಿಲ್ಲಾಡಳಿತ ನಡುವೆ ಯಾವುದೇ ತೊಂದರೆ ಆಗದಂತೆ ಕಾಪಾಡಿ ರಥವನ್ನು ದೇವಾಲಯದ ಮುಂಭಾಗದಲ್ಲಿ ಎಳೆಯಲಾಯಿತು.

ಕಳೆದ ವಾರ ಮಠದ ಆಡಳಿತ ಮಂಡಳಿ ಹೇಳಿಕೆ ನೀಡಿ ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿಯ ರಥೋತ್ಸವ ಮುಂದೂಡಲಾಗಿದೆ, ಮತ್ತು ಭಕ್ತರು ಬರುವಿಕೆಯನ್ನು ಸಹ ನಿರ್ಬಂದಿಸಲಾಗಿದೆ ಎಂದು ಹೇಳಿಕೆ ನೀಡಿದ್ದರಿಂದ ಇಂದು ನೆಡೆದ ರಥೋತ್ಸವ ಕ್ಕೆ ಜನರು ಅಷ್ಟಾಗಿ ಬಂದಿರಲಿಲ್ಲ.

ಆದರೂ ಸುಮಾರು 40-50 ಸಾವಿರ ಭಕ್ತರು ಇಂದು ಹಾಜರಾಗಿ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು

ಶ್ರೀ ಗವಿಸಿದ್ಧೇಶ್ವರ ಜಾತ್ರೆ ಈ ವರ್ಷವೂ ನಡೆಯುವುದಿಲ್ಲವೇ ಎನ್ನುವ ಆತಂಕ ಭಕ್ತರಲ್ಲಿ ಎದುರಾಗಿತ್ತು .ಆದರೆ ಈ ದಿನ ನೆಡೆದ ರಥೋತ್ಸವದಿಂದ ಈ ಭಾಗದ ಭಕ್ತರಿಗೆ ಸಂತೋಷದ ನಡುವೆ ಆತಂಕ ಪಾರಾಗಿದೆ.

ಈ ಸಂಧರ್ಭದಲ್ಲಿ ಶ್ರೀ ಗವಿಮಠ ಜಾತ್ರೆಯಲ್ಲಿಯೂ ಸರ್ಕಾರದ ನಿಯಮಾವಳಿ ಪಾಲಿಸಲಾಗಿದ್ದು. ಕೋವಿಡ್‌ ನಿಯಂತ್ರಣಕ್ಕಾಗಿ ಸರ್ಕಾರದ ಗೈಡ್‌ಲೈನ್‌ನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗಿತ್ತು.

ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್ ಕಿಶೋರ ಸುರಳ್ಕರ್‌
ಎರಡು ವಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರಿಂದ ಜಾತ್ರಾ ಮಹೋತ್ಸವ ನೆರವೇರಲಿದೆಯೇ ಎಂಬ ಪ್ರಶ್ನೆ ಭಕ್ತರಲ್ಲಿ ಮೂಡಿತ್ತು. ಜನರು ಹೆಚ್ಚಾಗಿ ಆಗಮಿಸಿರಲಿಲ್ಲ ಈ ವರ್ಷದ ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರೆ ಸರಳತೆಯಲ್ಲೂ ಉಕ್ಕುತ್ತಿದೆ ಭಕ್ತಿ, ಕಡಿಮೆ ಭಕ್ತ ರೊಂದಿಗೆ ನೆರವೇರಿದೆ.

ಕೊರೋನಾ ಹೆಚ್ಚಳದಿಂದ ಸರಳವಾಗಿ ರಥೋತ್ಸವ ನಡೆಸಿ ಸಂಪ್ರದಾಯಕ್ಕೆ ಸೀಮಿತಗೊಳಿಸಲಾಗಿದೆ. ಆದರೆ, ‘ಸರಳ ಜಾತ್ರೆ ಸಮಾಜಮುಖಿ ಸೇವೆಗೆ’ ಅರ್ಪಣೆ ಎನ್ನುವ ತತ್ವ ಘೋಷಿಸಿದ್ದ ಗವಿಸಿದ್ಧೇಶ್ವರ ಶ್ರೀಗಳು ಪರಿಸರ,ಆರೋಗ್ಯ ಕ್ಕೆ ಕೈಯತ್ತಿರುತ್ತಾರೆ.

ದೇಶದ ಅನೇಕ ಮಠಗಳು ಅನ್ನ ದಾಸೋಹಕ್ಕೆ ಹೆಸರುವಾಸಿಯಾಗಿದೆ ಅದರಲ್ಲಿ ಶ್ರೀ ಗವಿಸಿದ್ದೇಶ್ವರ ಮಠ ಕೊಪ್ಪಳ ಕ್ಷೇತ್ರವು ಸಹ ಒಂದು ಮತ್ತು ವಿಭಿನ್ನ ರೀತಿಯ ಅನ್ನದಾಸೋಹಕ್ಕೆ ಹೆಸರುವಾಸಿಯಾದ ಮಠ ಈ ಬಾರಿಯು ಸಹ ಸರಳವಾಗಿ,ಸುರಕ್ಷಿತವಾಗಿ, ಆರೋಗ್ಯಕರವಾಗಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಗುಡದಯ್ಯ ಗವಿಸಿದ್ದನಾದದ್ದು
ಕೊಪ್ಪಳದ ಗವಿಮಠ ಪುರಾತನ ಪರಂಪರೆ, ತತ್ವವನ್ನು ಅಕ್ಷರಶಃ ಪಾಲಿಸಿಕೊಂಡು ಬರುತ್ತಿದೆ. ಅನ್ನ, ಅಕ್ಷರ, ಆರೋಗ್ಯ ಮುಂತಾದ ತ್ರಿವಿಧ ದಾಸೋಹಗಳು ಇಲ್ಲಿನ ಬುನಾದಿ. ಅದು ದೇವರ ಹೆಸರಿನಲ್ಲಿ ಜನಸಾಮಾನ್ಯನನ್ನು ತಲುಪಿದೆ
ಮುಂದೊಂದು ದಿನ ನಂಬಿಕೆಯ ಜತೆ ಸ್ವಪ್ರಯತ್ನದಿಂದ ಬೆಳೆದು ಮುಂದೆ ಬಂದವರು ದೇವರಿಗೊಂದು ಕೃತಜ್ಞತೆ ಸಲ್ಲಿಸಲು ಸೇರುತ್ತಾರೆ. ಅಧ್ಯಾತ್ಮದ ಹೆಸರಿನ ವೇದಿಕೆ ಭಕ್ತರ ರೂಪದಲ್ಲಿ ಮನುಷ್ಯ ಸಂಬಂಧಗಳನ್ನು ಬೆಸೆಯುತ್ತದೆ. ಮನಸ್ಸುಗಳನ್ನು ಒಂದಾಗಿಸುತ್ತದೆ. ವೀರಶೈವ ಸಿದ್ಧಾಂತದ ಮಠವಾದರೂ ಜಾತಿ, ಮತ ಬೇಧವಿಲ್ಲದೇ ಎಲ್ಲರನ್ನೂ ತನ್ನತ್ತ ಸೆಳೆದಿದೆ. ಎಲ್ಲರನ್ನೂ ಅಪ್ಪಿಕೊಂಡಿದೆ. ಜನರೂ ಅದನ್ನು ಒಪ್ಪಿಕೊಂಡಿದ್ದಾರೆ.

ಎಲ್ಲ ಕೈಗಳು ಸೇರಿ ರೊಟ್ಟಿ ತಟ್ಟಿವೆ. ಮಾದಲಿ ತಯಾರಿಸಿವೆ. ತರಕಾರಿ, ದವಸ ಧಾನ್ಯಗಳನ್ನು ಬೆಳೆದು ಗವಿಸಿದ್ದೇಶ್ವರನ ಹೆಸರಿಗೆ ಅರ್ಪಿಸಿ ಮಹಾದಾಸೋಹದ ಮೂಲಕ ಹಸಿದ ಹೊಟ್ಟೆಗಳಿಗೆ ಉಣಿಸುತ್ತಿವೆ. ಇಂಥ ಸಹಸ್ರ ಕೈಗಳು ಸೇರಿ ಈ ಮಹಾ ಜಾತ್ರೆಯನ್ನು ನಡೆಸುತ್ತಿವೆ ಎನ್ನುತ್ತಾರೆ ಮಠದ ಒಡನಾಡಿಗಳು.

ಕಾಲ ಬದಲಾಗಲಿ. ನಂಬಿಕೆ, ಭಕ್ತಿ ಬದಲಾಗಿಲ್ಲ. ಎಲ್ಲವೂ ಆಧುನಿಕ ವ್ಯವಸ್ಥೆಯ ತೆಕ್ಕೆಯೊಳಗೆ ಸೇರಿಕೊಳ್ಳಲು ಹವಣಿಸುತ್ತಿವೆ. ಆದರೆ, ಪರಂಪರೆ, ಸಂಪ್ರದಾಯ ತತ್ವಗಳು ಅಲ್ಲ. ಅವು ಸದಾ ಸ್ಥಿರ. ಮುಂದೆಯೂ ಹೀಗೇ ಇರುತ್ತವೆ ಎನ್ನುತ್ತಾರೆ ಭಕ್ತರು. ಮಠ ಎಲ್ಲರೊಳ ಗೊಂದಾಗಿದೆ. ಜನರೆಲ್ಲರೂ ಮಠದ ಜತೆ ಬೆರೆತಿದ್ದಾರೆ. ಇದು ವಿದಿತ ಮಹಾ ಕೊಪಣಪುರದ ವಿಶೇಷ
ಗವಿಸಿದ್ದನ ಗದ್ದುಗೆಯಿಂದ…
ಶಾಲಿವಾಹನ ಶಕ 1008 ರಲ್ಲಿ ರುದ್ರಮುನಿ ಶಿವಯೋಗಿ ಅವರಿಂದ ಸಂಸ್ಥಾನ ಗವಿಮಠ ಸ್ಥಾಪನೆಯಾಯಿತು. ಇದುವರೆಗೆ 18 ಪೀಠಾಧಿಪತಿಗಳನ್ನು ಕಂಡಿದೆ. 11ನೇ ಪೀಠಾಧಿಪತಿ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಕಾಯಕ ತತ್ವ, ಪೂಜೆ, ಅನುಷ್ಠಾನ ಇಂಥ ಸಾಧನೆಗಳಿಂದ ಪ್ರಸಿದ್ಧರಾದರು. ಲಿಂಗಕ್ಕೆ ಬೆಳಗಿದ ಬೆಳಕಿನಲ್ಲೇ ಲೀನವಾದರು. ಹೀಗೆ ಸಜೀವ ಸಮಾಧಿ ಹೊಂದಿದ ಗವಿಸಿದ್ದೇಶ್ವರರ ಗದ್ದುಗೆ ಮಠದ ಹೃದಯ.
ಕೊಪ್ಪಳ ಸಮೀಪದ ಮಂಗಳಾ­ಪುರ ಗ್ರಾಮ ಗವಿಸಿದ್ದೇಶ್ವ­ರರ ಹುಟ್ಟೂರು. ಅಲ್ಲಿನ ಹಿರೇಮಠದ ಗುರುಲಿಂಗಮ್ಮ– ಮಹಾದೇವಯ್ಯ ದಂಪತಿಯ ಪುತ್ರ. ಗುಡದಯ್ಯ ಮೂಲ ಹೆಸರು. ಕೊಪ್ಪಳ ನಗರದ ಹೊರವಲಯ­ದಲ್ಲಿರುವ ಮಳೆಮಲ್ಲೇಶ್ವರ (ಮಳಲಮ­ಲ್ಲೇಶ್ವರ) ಬೆಟ್ಟದಲ್ಲಿ ಗುಡದಯ್ಯ ಸದಾ ಧ್ಯಾನಾಸಕ್ತರಾಗಿರುತ್ತಿದ್ದರು.

ಅದೇ ಗುಡ್ಡದಲ್ಲಿ ಒಮ್ಮೆ ಮಾಲೀಗೌಡರ ಹಸು ಮರಣ ಹೊಂದಿತು. ಗೌಡರ ದುಃಖ ಅರಿತ ಗುಡದಯ್ಯ ತಮ್ಮ ಪವಾಡ ಶಕ್ತಿಯಿಂದ ಹಸುವನ್ನು ಬದುಕಿಸಿದರಂತೆ. ಈ ಪವಾಡವನ್ನು ಅರಿತ ಮಾಲಿಗೌಡರು ಗುಡದಯ್ಯನನ್ನು ತಮ್ಮ ಮನೆಗೆ ಕರೆತಂದರು. ಭಕ್ತರ ಕಷ್ಟ ಕಾರ್ಪಣ್ಯಗಳಿಗೆ ಗುಡದಯ್ಯ ಸ್ಪಂದಿಸುತ್ತಿದ್ದದ್ದು, ಪವಾಡ ತೋರುತ್ತಿದ್ದದ್ದು ನಡೆಯಿತು. ಮಾಲಿಗೌಡರ ಮನೆಯೇ ಮಠವಾಯಿತು. ಮುಂದೆ ಮಾಲಿಗೌಡರು ಗುಡದಯ್ಯರನ್ನು ಗವಿಮಠದ ಹತ್ತನೇ ಪೀಠಾಧಿಪತಿ ಚೆನ್ನಬಸವ ಸ್ವಾಮೀಜಿ ಅವರಿಗೆ ತಂದು ಒಪ್ಪಿಸಿದರು. ಗೌಡರ ಮನೆ ತೊರೆದು ಬರುವಾಗ ಗುಡದಯ್ಯ ತನ್ನ ಜಡೆಯನ್ನು ಮಾಲಿಗೌಡರ ಪತ್ನಿಗೆ ಅರ್ಪಿಸಿದರು. ಮುಂದೆ ಆ ಮನೆತನಕ್ಕೆ ಜಡೇಗೌಡರ ಮನೆತನ ಎಂಬ ಹೆಸರು ಬಂದಿತು.
ಮುಂದೆ ಚೆನ್ನಬಸವ ಸ್ವಾಮೀಜಿಯಿಂದ ಸಂಸ್ಕಾರ ಪಡೆದು ಗವಿಸಿದ್ದೇಶ್ವರ ಸ್ವಾಮೀಜಿ ಎಂದು ನಾಮಕರಣಗೊಂಡು ಮಠದ ಅಧಿಕಾರ ಪಡೆದರು. ಚೆನ್ನಬಸವ ಸ್ವಾಮೀಜಿ ಎಲ್ಲ ಜವಾಬ್ದಾರಿಯನ್ನು ಗವಿಸಿದ್ದೇಶ್ವರರಿಗೆ ಒಪ್ಪಿಸಿ ತಾವು ಲಿಂಗದೊಳಗೆ ಬೆರೆಯುವುದಾಗಿ ಹೇಳಿ ತಮ್ಮ ಸಮಾಧಿ ನಿಮಿ೯ಸಲು ತೊಡಗಿದರು. ಆದರೆ, ಗುರುವನ್ನು ಅಗಲಲು ಒಪ್ಪದ ಗವಿಸಿದ್ದೇಶ್ವರ ಗುರುಗಳಿಗಾಗಿ ನಿರ್ಮಾಣಗೊಳ್ಳುತ್ತಿದ್ದ ಸಮಾಧಿಯ ಮೇಲೆಯೇ ಜಪ ಮಾಡುತ್ತಲೇ ಕ್ರಿ.ಶ. 1816ರಲ್ಲಿ ಲಿಂಗದೊಳಗೆ ಲೀನವಾದರು. ಚೆನ್ನಬಸವ ಸ್ವಾಮೀಜಿಯೇ ಗವಿಸಿದ್ದೇಶ್ವರರ ಸಮಾಧಿ ಕಾರ್ಯ ಮಾಡಬೇಕಾಯಿತು. ಗವಿಸಿದ್ದೇಶ್ವರರು ಕಾಲವಾದ, ಗುರುಗಳಿಂದಲೇ ಗೌರವಿಸಲ್ಪಟ್ಟ ದಿನವನ್ನೇ ಗವಿಸಿದ್ದೇಶ್ವರ ಜಾತ್ರೆಯಾಗಿ ಆಚರಿಸಲಾಗುತ್ತಿದೆ.
ಮುಂದೊಂದು ದಿನ ನಂಬಿಕೆಯ ಜತೆ ಸ್ವಪ್ರಯತ್ನದಿಂದ ಬೆಳೆದು ಮುಂದೆ ಬಂದವರು ದೇವರಿಗೊಂದು ಕೃತಜ್ಞತೆ ಸಲ್ಲಿಸಲು ಸೇರುತ್ತಾರೆ. ಅಧ್ಯಾತ್ಮದ ಹೆಸರಿನ ವೇದಿಕೆ ಭಕ್ತರ ರೂಪದಲ್ಲಿ ಮನುಷ್ಯ ಸಂಬಂಧಗಳನ್ನು ಬೆಸೆಯುತ್ತದೆ. ಮನಸ್ಸುಗಳನ್ನು ಒಂದಾಗಿಸುತ್ತದೆ. ವೀರಶೈವ ಸಿದ್ಧಾಂತದ ಮಠವಾದರೂ ಜಾತಿ, ಮತ ಬೇಧವಿಲ್ಲದೇ ಎಲ್ಲರನ್ನೂ ತನ್ನತ್ತ ಸೆಳೆದಿದೆ.
ಎಲ್ಲ ಕೈಗಳು ಸೇರಿ ರೊಟ್ಟಿ ತಟ್ಟಿವೆ. ಮಾದಲಿ ತಯಾರಿಸಿವೆ. ತರಕಾರಿ, ದವಸ ಧಾನ್ಯಗಳನ್ನು ಬೆಳೆದು ಗವಿಸಿದ್ದೇಶ್ವರನ ಹೆಸರಿಗೆ ಅರ್ಪಿಸಿ ಮಹಾದಾಸೋಹದ ಮೂಲಕ ಹಸಿದ ಹೊಟ್ಟೆಗಳಿಗೆ ಉಣಿಸುತ್ತಿವೆ. ಇಂಥ ಸಹಸ್ರ ಕೈಗಳು ಸೇರಿ ಈ ಮಹಾ ಜಾತ್ರೆಯನ್ನು ನಡೆಸುತ್ತಿವೆ.
ಒಮ್ಮೆ ಭೇಟಿಯಾಗಿ ಅಜ್ಜನ ಆಶೀರ್ವಾದ ಪಡೆಯಿರಿ.
ಸಂಸ್ಥಾನದ ಶ್ರೀ ಗವಿಮಠದ 16 ನೇ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಶ್ರೀ ಮರಿಶಾಂತವೀರ ಶಿವಯೋಗಿಗಳು ತಪೋನಿಷ್ಠರು, ಆಯುರ್ವೇದ ಪಂಡಿತರು ಮತ್ತು ವಾಕ್ ಸಿದ್ಧಿಯನ್ನು ಪಡೆದಂತ ಮಹಾನ ತಪಸ್ವಿಗಳು, ಒರಗಾಲದ ಬವಣೆಯ ಈ ನಾಡ ಜನತೆಯ ಬದುಕನ್ನು ಉದ್ಧರಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಅರಿತು 1951 ರಲ್ಲಿ ಶ್ರೀ ಗವಿಸಿದ್ದೇಶ್ವರ ಪ್ರೌಢಶಾಲೆಯನ್ನು ಆರಂಭಿಸಿದರು. 1963 ರಲ್ಲಿ ಶ್ರೀ ಗವಿಸಿದ್ದೇಶ್ವರ ವಿದ್ಯಾವರ್ಧಕ ಸಂಸ್ಥೆಯನ್ನು ಸ್ಥಾಪಿಸಿ ಶ್ರೀ ಗವಿಮಠದ ಸಮಸ್ತ ಆಸ್ತಿಯನ್ನು ಈ ಸಂಸ್ಥೆಗೆ ಧಾರೆ ಎರೆದು ತಮ್ಮ ಕೊನೆಯ ಕ್ಷಣದ ವರೆಗೂ ಸಮಸ್ತ ಭಕ್ತ ಕೋಟಿಯ ಉದ್ದಾರಕ್ಕಾಗಿ ತಮ್ಮನ್ನು ತಾವು ಶ್ರೀ ಗಂಧದಂತೆ ಸವೆಸಿಕೋಂಡ ಮಹಿಮಾಶೀಲರು ಇವರು.
ಇಂದಿನ 28 ನೇಯ ಪೀಠಾಧೀಶ್ವರರಾದ ಶ್ರೀ ಗವಿಸಿದ್ದೇಶ್ವರ ಶಿವಯೋಗಿಗಳು ವಾಗ್ಮೀಗಳು, ಪರಿಸರ ಪ್ರೇಮಿಗಳು , ವಿದ್ಯಾವಂತರು, ಹಾಗೂ ವಿದ್ಯಾ ಪ್ರೇಮಿಗಳು ಆಗಿದ್ದಾರೆ. ಪೂರ್ವದ ಶಿವಯೋಗಿಗಳು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನೆಡೆಯುತ್ತಾ ಅವರ ಸತ್ಯ ಸಂಕಲ್ಪವನ್ನು ನೆರೆವೇರಿಸಿತ್ತಾ ಸಾಗಿದ್ದಾರೆ ಇದು ನಮ್ಮ ಕೊಪ್ಪಳ ನಗರದ ಸಮಸ್ತ ಜನರ ಪುಣ್ಯವಾಗಿದೆ ಮತ್ತು ಭಾಗ್ಯ ವಾಗಿದೆ.

ಜಾತ್ರೆಯ ಪ್ರಮುಖ ಆರ್ಕಷಣೆ
ಗವಿಸಿದ್ಧೇಶ್ವರರ ಪೂರ್ವನಾಮ ಗುಡದಯ್ಯವೆಂಬುದಾಗಿತ್ತು. ಚನ್ನಬಸವ ಮಹಾಸ್ವಾಮಿಗಳವರು ಸಕಲ ಸಂಸ್ಕಾರವನ್ನು ನೀಡಿ ಶ್ರೀಮಠದ 11ನೇ ಅಧಿಪತಿಯನ್ನಾಗಿ ನೇಮಿಸಿ ಜ.ಗವಿಸಿದ್ಧೇಶ್ವರ ಮಹಾಸ್ವಾಮಿಗಳೆಂದು ಅಭಿದಾನವನ್ನಿತ್ತರು. ಅನ್ನದಾಸೋಹ, ಅಕ್ಷರದಾಸೋಹ ಹಾಗೂ ಆಧ್ಯಾತ್ಮದಾಸೋಹಗಳನ್ನು ನಿತ್ಯ ನಿರಂತರ ತಮ್ಮ ಕಾಯಕವನ್ನಾಗಿ ಮಾಡಿಕೊಂಡು ಬಂದವರು. ಸಮಾಜ್ಯೋದ್ಧಾರ್ಮಿಕ ಕಾರ್ಯಗಳನ್ನು ಮಾಡುತ್ತಾ ಬಂದ ಪೂಜ್ಯರು, ಗುರುಗಳ ಅಗಲಿಕೆಯ ಅನುತಾಪವನ್ನು ಕೇಳಿ ಗುರುಗಳಾಗಿದ್ದ ಚನ್ನಬಸವ ಮಹಾಸ್ವಾಮಿಗಳಿಗಾಗಿಯೇ ಸಿದ್ದಪಡಿಸಿದ್ದ ಸಮಾಧಿಯಲ್ಲಿ ತಾವೇ ಧ್ಯಾನಗೈಯುತ್ತಲೇ ಲಿಂಗೈಕ್ಯರಾದರು. ಹೀಗೆ ಸಜೀವ ಸಮಾಧಿಹೊಂದಿದ ಪೂಜ್ಯರನ್ನು ಗುರುಗಳು ಮುಂದಿನ ಕಾರ್ಯವನ್ನು ನೆರವೇರಿಸಿದರು. ಅಂದಿನಿಂದ ಇಂದಿನವರೆಗೂ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ನಿತ್ಯ ನಿರಂತರವಾಗಿ ಸಾಗಿಬಂದಿದೆ. ಪೂಜ್ಯ ರುದ್ರಮುನಿ ಶಿವಯೋಗಿಗಳವರಿಂದಲೇ ಆರಂಭಗೊಂಡ ಶ್ರೀಮಠದ ಭವ್ಯ ಪರಂಪರೆ ಈಗಾಗಲೇ 18 ಪೀಠಾಧೀಶ್ವರರನ್ನು ಹೊಂದಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ರಥೋತ್ಸವ ಈ ನಾಡಿನ ಬಹುದೊಡ್ಡ ಹಬ್ಬವಾಗಿ ಪರಿಣಮಿಸಿದೆ. ಜ.ಮರಿಶಾಂತವೀರ ಹಾಗೂ ಜ.ಶಿವಶಾಂತವೀರ ಶಿವಯೋಗಿಗಳವರ ತಪ ಶಕ್ತಿಯಿಂದ ಶ್ರೀಮಠವು ಬಹುದೊಡ್ಡ ಆಧ್ಯಾತ್ಮಿಕ ಕೇಂದ್ರವಾಗಿ ಬೆಳೆದಿದೆ.

ಕೈಲಾಸ ಮಂಟಪದಲ್ಲಿನ ಕಾರ್ಯಕ್ರಮಗಳು
ನಾಡಿನ ಹರ ಗುರು ಚರಮೂರ್ತಿಗಳ ದಿವ್ಯ ಸಾನಿಧ್ಯದಲ್ಲಿ ಜರುಗುತ್ತದೆ. ವೇದಿಕೆಯು ನೈರ್ಸಗಿಕವಾಗಿದ್ದು ವಿಹಂಗಮವಾಗಿದೆ.
ಮದ್ದು ಸುಡುವದು
ಇದಕ್ಕೆ ಕಡುಬಿನ ಕಾಳಗ ಎಂದು ಕೂಡಾ ಕರೆಯುತ್ತಾರೆ. ಜಾತ್ರೆಯ ಯಶಸ್ಸಿನ ಸಂಕೇತವಾಗಿ ಆಗಸದಲ್ಲಿ ಚಿತ್ತಾರಗಳನ್ನು ಮೂಡಿಸುವ ಈ ಕಾರ್ಯಕ್ರಮವನ್ನು ವಿಕ್ಷಿಸಲು ಲಕ್ಷಾಂತರ ಭಕ್ತಾಧಿಗಳು ಆಗಮಿಸುತ್ತಿದ್ದರೂ, ಪ್ರತಿವರ್ಷ ಗವಿಮಠದ ಕೆರೆಯಲ್ಲಿ ಜರುಗುವ ತೆಪ್ಪೋತ್ಸವ ಅತ್ಯಂತ ಆರ್ಕಷಣೀಯವಾಗಿರುತ್ತಿತ್ತು.
ಗವಿಸಿದ್ಧೇಶ್ವರ ಜಾತ್ರೆಯ ಪ್ರಸಾದದ ವೈವಿಧ್ಯತೆ ವರ್ಣಿಸಲು ಅಸಾಧ್ಯಆದರೆ ಕೊರೋನಾದಿಂದ ಭಕ್ತರಿಗೆ ನಿರಾಶೆಯಾಗಿದೆ.
ಒಟ್ಟಾರೆ ಪರಿಸರಕ್ಕೆ, ಆರೋಗ್ಯಕ್ಕೆ ಹೆಚ್ಚಾಗಿ ಮಹತ್ವ ನೀಡಿ ,ಭಕ್ತರ ಮೇಲಿನ ಕಾಳಜಿ ಈ ಭಾಗದ ನೆಡೆದಾಡುವ ದೈವ ಪರಿಸರ ಪ್ರೇಮ ಇದಿನ ರಥೋತ್ಸವಕ್ಕೆ ನಾಂದಿಯಾಯಿತು.

ವರದಿ :
ಮುರಳೀದರ್ ನಾಡಿಗೇರ್
ಹೊಸಪೇಟೆ- 9008017727

Share This Article
Leave a comment