December 3, 2024

Newsnap Kannada

The World at your finger tips!

mandya band 1

ತಮಿಳುನಾಡಿಗೆ ಕಾವೇರಿ ನೀರು – ಪ್ರತಿಭಟನೆಗೆ ಸಾಥ್ ನೀಡಿದ ಚುಂಚಶ್ರೀಗಳು

Spread the love

ಕಾವೇರಿ ನದಿ ನೀರು ತಮಿಳುನಾಡಿಗೆ ಹರಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಮಂಡ್ಯದಲ್ಲಿ ರೈತರ ಪ್ರತಿಭಟನೆಗಳು ತೀವ್ರವಾಗಿ ನಡೆಯುತ್ತಿವೆ. ಪ್ರತಿಭಟನೆಗೆ ಇಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಶ್ರೀಗಳು ಜೊತೆಗೂಡಿದ್ದು, ಆದಿಚುಂಚನಗಿರಿ ಮಠವು ಸದಾ ರೈತರ ಜೊತೆ ಸದಾ ಇರುತ್ತದೆ ಎಂದು ತಿಳಿಸಿದರು.

ರೈತಪರ ಸಂಘಟನೆಗಳು ಮತ್ತು ವಿವಿಧ ಸಂಘಟನೆಗಳ ವತಿಯಿಂದ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನಡೆಯುತ್ತಿರುವ ಪ್ರತಿಭಟನೆಗೆ ಆಗಮಿಸಿದ ನಿರ್ಮಲಾನಂದನಾಥ ಶ್ರೀ ಕಾವೇರಿ ಪರ ಹೋರಾಟಕ್ಕೆ ಬೆಂಬಲ ನೀಡಿದರು.

ಸಂಕಷ್ಟದ ಸ್ಥಿತಿ ಕುರಿತು ಕೇಂದ್ರ ಸಚಿವರಿಗೂ ಮನವರಿಕೆ ಮಾಡಬೇಕು.ನಾವು ಕೂಡ ರಾಜ್ಯ ಹಾಗೂ ಕೇಂದ್ರ ಸಚಿವರ ಜೊತೆ ಮಾತನಾಡುತ್ತೇವೆ. ಈ ಮೂಲಕ ರೈತರಿಗೆ ಅನುಕೂಲ ಕಲ್ಪಿಸಲಿ.ರೈತರ ಪರವಾಗಿ ಆದಿಚುಂಚನಗಿರಿ ಮಠ ಸದಾ ನಿಮ್ಮ ಜೊತೆಗೆ ಇರುತ್ತದೆ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಕಾನೂನು ಹೋರಾಟವನ್ನು ಮುಂದುವರಿಸಲಿ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿ ಹೋರಾಟ ಮುಂದುವರೆಸಲಿ ಎಂದು ನಿರ್ಮಲಾನಂದನಾಥ ಶ್ರೀ ಹೇಳಿದರು.

ಹಲವಾರು ದಶಕಗಳಿಂದ ಕಾವೇರಿ ಸಮಸ್ಯೆ ಹಾಗೇ ಉಳಿದಿದೆ. ಆದ್ಯತೆ ಮೇರೆಗೆ ಕುಡಿಯುವ ನೀರು ಕೊಡಬೇಕು. ಅನಂತರ ವ್ಯವಸಾಯಕ್ಕೆ, ಬಳಿಕ ಕೈಗಾರಿಕಾ ಮತ್ತು ಇತರೆ ಬಳಕೆಗೆ ಕೊಡಬೇಕು. ತಮಿಳುನಾಡಿಗೆ 419 TMC ನೀರು ಪ್ರತಿವರ್ಷ ಕೊಡಲಾಗುತ್ತೆ. ಕರ್ನಾಟಕಕ್ಕೆ ಪ್ರತಿವರ್ಷ 270 TMC ನಿಗದಿ ಮಾಡಲಾಗಿದೆ. ಆದರೆ ‌ಮಳೆ ಕಡಿಮೆ ಆದ ಸಂದರ್ಭದಲ್ಲಿ ಸಂಕಷ್ಟ ಸೂತ್ರ ರಚಿಸಬೇಕಿತ್ತು ಎಂದು ಹೇಳಿದರು.

Copyright © All rights reserved Newsnap | Newsever by AF themes.
error: Content is protected !!