January 13, 2025

Newsnap Kannada

The World at your finger tips!

yuvaraj 1

ಯುವರಾಜ್ ವಂಚನೆಗಳ ಕೇಸ್ :ತನಿಖೆ ಹೊಣೆ ಈಗ ಸಿಬಿಐ ಹೆಗಲಿಗೆ

Spread the love

ಬಿಜೆಪಿ ಮತ್ತು ಆರ್​ಎಸ್​ಎಸ್​ ನಾಯಕರ ಹೆಸರು ಹೇಳಿ ವಂಚನೆ ಮಾಡಿದ ಆರೋಪಿ ಯುವರಾಜ್ ಅಲಿಯಾಸ್​ ಸ್ವಾಮಿ ಪ್ರಕರಣದ ತನಿಖೆ ಸಿಬಿಐ ಹೆಗಲಿಗೆ ಹೊರಿಸಲಾಗಿದೆ

ರಾಜ್ಯದ ಎಸಿಬಿ ಅಧಿಕಾರಿಗಳ ಮೂಲಕ ಪ್ರಕರಣದ ತನಿಖೆಯ ಜವಾಬ್ದಾರಿ ಸಿಬಿಐಗೆ ಹೆಗಲಿಗೆ ಬಿದ್ದಿದೆ . ಈ ಮೂಲಕ ಯುವರಾಜ್ ಸ್ವಾಮಿ ಪ್ರಕರಣ ರಾಷ್ಟ್ರ ಮಟ್ಟದ ಪ್ರಕರಣವಾಗಿದೆ.

ಅದರಲ್ಲೂ ಪ್ರಮುಖ ಎರಡು ಪ್ರಕರಣವನ್ನು ಎಸಿಬಿ ಟೀಂ, ಸಿಬಿಐಗೆ ವರ್ಗಾಯಿಸಿದೆ.

ಹೈಕೋರ್ಟ್ ನಿವೃತ್ತ ಜಡ್ಜ್ ಇಂದ್ರಕಲಾ ಅವರಿಗೆ ಸಂಬಂಧಿಸಿದ 8.7 ಕೋಟಿ ರೂಪಾಯಿ ಪ್ರಕರಣ ಹಾಗೂ ಬಿಜೆಪಿ ಮುಖಂಡ ಎನಿತ್ ಕುಮಾರ್​ಗೆ ಸೇರಿದ 30 ಲಕ್ಷದ ಪ್ರಕರಣವನ್ನು ಸಿಬಿಐ, ಎಸಿಬಿ ನೀಡಿದೆ.

ಪ್ರಕರಣವನ್ನ ಸಿಬಿಐಗೆ ನೀಡುತ್ತಿರುವುದಾಗಿ ಎಸಿಬಿ ಅಧಿಕಾರಿಗಳು ದೂರುದಾರಿಗೆ ಲಿಖಿತ ರೂಪದಲ್ಲಿ ಬರೆದುಕೊಟ್ಟಿದ್ದಾರೆ.

ನಿಮ್ಮಿಬ್ಬರ ಕೇಸ್​ ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ಹೀಗಾಗಿ ಪ್ರಕರಣವನ್ನು ಸಿಬಿಐಗೆ ನೀಡುತ್ತಿದ್ದೇವೆ ಎಂದು ಹಿಂಬದಿಯಲ್ಲಿ ಎಸಿಬಿ ಅಧಿಕಾರಿಗಳು ಬರೆದುಕೊಟ್ಟಿದ್ದಾರೆ.

5 ಮಂದಿಯ ವಿರುದ್ಧ ಲಂಚ ಕೊಟ್ಟ ಆರೋಪದಡಿ ದೂರು ನೀಡಲಾಗಿತ್ತು. ಜನಾಧಿಕಾರ ಸಂಘರ್ಷ ಪರಿಷತ್ ಸಹ ಅಧ್ಯಕ್ಷ ಆದರ್ಶ ಐಯ್ಯರ್ 5 ಮಂದಿಯ ವಿರುದ್ಧ ಭ್ರಷ್ಟಚಾರ ಆರೋಪ ಮಾಡಿ ದೂರು ನೀಡಿದ್ದರು

Copyright © All rights reserved Newsnap | Newsever by AF themes.
error: Content is protected !!