December 22, 2024

Newsnap Kannada

The World at your finger tips!

road , accident , national highway

Car collides with a lorry near Gejjalagere in Maddur - Two youths died ಮದ್ದೂರಿನ ಗೆಜ್ಜಲಗೆರೆ ಬಳಿ ಲಾರಿಗೆ ಕಾರು ಡಿಕ್ಕಿ - ಇಬ್ಬರು ಯುವಕರ ಸಾವು

ಮದ್ದೂರಿನ ಗೆಜ್ಜಲಗೆರೆ ಬಳಿ ಲಾರಿಗೆ ಕಾರು ಡಿಕ್ಕಿ – ಇಬ್ಬರು ಯುವಕರ ಸಾವು

Spread the love

ಲಾರಿ – ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಯುವಕರು ಸಾವನ್ನಪ್ಪಿ , ಮೂವರು ಗಾಯಗೊಂಡ ಘಟನೆ ಮದ್ದೂರು ತಾಲೂಕಿನ ಗೆಜ್ಜಲಗೆರೆ ಬಳಿ ಸೋಮವಾರ ಜರುಗಿದೆ.

ಮಂಡ್ಯದ ಗುತ್ತಲು ಬಡಾವಣೆಯ ಕಾರು ಚಾಲಕ ಶಾಕಿಬ್ (25) ಹಾಗೂ ಪತ್ರಿಕಾ ವಿತರಕ ಸದ್ದಾಂ ಷರೀಪ್ (23) ಮೃತರು. ನಸೀರಾ (24), ನಿಖತ್ (20) ಹಾಗೂ ಜಹೀಬ್ (36) ಅವರುಗಳು ಗಾಯಗೊಂಡಿದ್ದಾರೆ.

ಸದ್ದಾಂ ಷರೀಫ್ ಇತರರು ಸಂಬಂಧಿಕರ ಬೀಗರ ಔತಣ ಕೂಟಕ್ಕೆಂದು ಬೆಂಗಳೂರಿಗೆ ಹೋಗಿ ವಾಪಸ್ಸು ಕಾರಿನಲ್ಲಿ ಮಂಡ್ಯಕ್ಕೆ ಬರುತ್ತಿದ್ದ ವೇಳೆ ಲಾರಿ ಡಿಕ್ಕಿ ಹೊಡೆದಿದೆ.ಸ್ಯಾಂಡಲ್ ವುಡ್ ಹಿರಿಯ ನಿರ್ದೇಶಕ ಎಸ್ . ಕೆ . ಭಗವಾನ್ ಇನ್ನಿಲ್ಲ

ತೀವ್ರವಾಗಿ ಗಾಯಗೊಂಡ ಕಾರು ಚಾಲಕ ಶಾಕೀಬ್ ಮತ್ತು ಸದ್ದಾಂ ಷರೀಫ್ ಅವರು ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮೂವರಿಗೆ ಮಂಡ್ಯದ ಮಿಮ್ಸ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಗನ ಸಾವಿನ ಸುದ್ದಿ ತಿಳಿದೂ ಪತ್ರಿಕೆ ಹಂಚಿದ ಹೃದ್ರೋಗಿ ತಂದೆ
ಮೃತ ಸದ್ದಾಂ ತಂದೆಕಲೀಂ ಷರೀಪ್ ಮಂಡ್ಯ ನಗರದ ಗುತ್ತಲು ಬಡಾವಣೆಯ ಪತ್ರಿಕೆ ವಿತರಣೆ ಮಾಡಿದ್ದಾರೆ

ಕಲೀಂ ಷರೀಫ್ ಅವರಿಗೆ ಹೃದಯ ಶಸ್ತ್ರ ಚಿಕಿತ್ಸೆಯಾಗಿದ್ದರಿಂದ ಸದ್ದಾಂ ಅವರೇ ಮನೆ ಮನೆಗೆ ಪತ್ರಿಕೆಗಳ ವಿತರಣೆ ನೋಡಿಕೊಳ್ಳುತ್ತಿದ್ದರು.

ಪತ್ರಿಕೆಗಳನ್ನು ವಿತರಣೆ ಮಾಡುವ ಸಲುವಾಗಿಯೇ ಮಧ್ಯರಾತ್ರಿ ಬೆಂಗಳೂರಿನಿಂದ ಮಂಡ್ಯಗೆ ಹೊರಟಿದ್ದರು.

ಅಪಘಾತದಲ್ಲಿ ಮಗ ಸತ್ತಿರುವ ಸುದ್ದಿ ತಿಳಿದ ಬಳಿಕವೂ ಕಲೀಂ ಷರೀಫ್ ಅವರು ಖುದ್ದು ತಾವೇ ಹೋಗಿ 600ಕ್ಕೂ ಹೆಚ್ಚು ಪತ್ರಿಕೆಗಳನ್ನು ವಿತರಣೆ ಮಾಡಿ, ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ.

ಮದ್ದೂರು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!