ಪ್ರೇಮಿಗಳ ಖಾಸಗಿ ವಿಡಿಯೋ ಸೆರೆ ಹಿಡಿದು 25 ಲಕ್ಷಕ್ಕೆ ಬೇಡಿಕೆ – ಉಷಾ , ಬಾಬು ಬಂಧನ

Team Newsnap
1 Min Read
Captured private video of lovers and demanded 25 lakhs - Usha, Babu arrested ಪ್ರೇಮಿಗಳ ಖಾಸಗಿ ವಿಡಿಯೋ ಸೆರೆ ಹಿಡಿದು 25 ಲಕ್ಷಕ್ಕೆ ಬೇಡಿಕೆ - ಉಷಾ , ಬಾಬು ಬಂಧನ #Thenewsnap #Latestnews #Cyber_crime #Bengaluru #mandya #Couple #Video #Mysuru #India

ಬೆಂಗಳೂರಿನಲ್ಲಿ ಪ್ರೇಮಿಗಳಿಬ್ಬರ ಖಾಸಗಿ ವಿಡಿಯೋ ಸೆರೆ ಹಿಡಿದು ಹಣಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ

ಉಷಾ ಹಾಗೂ ಸುರೇಶ್​​ ಬಾಬು ಎಂಬುವರೇ ಬಾಗಲೂರು ಪೊಲೀಸರಿಂದ ಬಂಧನಕ್ಕೆ ಒಳಗಾದವರು.ಇದನ್ನು ಓದಿ –ರಾಷ್ಟ್ರೀಯ ಹೆದ್ದಾರಿ ಕುರಿತು ಕೇಂದ್ರ ಸಾರಿಗೆ ಸಚಿವರ ಜೊತೆ ಸುಮಲತಾ ಚರ್ಚೆ

ಈ ಆರೋಪಿಗಳು ಕೂಡ ಪ್ರೇಮಿಗಳು. ಕೆಲವು ದಿನಗಳ ಹಿಂದೆ ಯಲಹಂಕ ಬಳಿಯ ಖಾಸಗಿ ಹೋಟೆಲ್​​​​ಗೆ ಭೇಟಿ ನೀಡಿದ್ದ ಈ ಜೋಡಿ ರೂಮ್​​ನಲ್ಲಿ ಯಾರಿಗೆ ಗೊತ್ತಿಲ್ಲದ ಹಾಗೇ ಕ್ಯಾಮರಾ ಫಿಕ್ಸ್​ ಮಾಡಿತ್ತು.

ಬಳಿಕ ಈ ರೂಮ್​​ಗೆ ಬಂದಿದ್ದ ಇನ್ನೊಂದು ಪ್ರೇಮಿಗಳ ಖಾಸಗಿ ವಿಡಿಯೋ ಕ್ಯಾಮರಾದಲ್ಲಿ ಸೆರೆಯಾಗಿತ್ತು.ಬೆಂಗಳೂರು : ಡಿಕೆಶಿ ಒಡೆತನದ ಶಾಲೆಗೆ ಬಾಂಬ್ ಬೆದರಿಕೆ

ಬಳಿಕ ಸಂತ್ರಸ್ತ ಪ್ರೇಮಿಗಳಿಗೆ ಆ ಖಾಸಗಿ ವಿಡಿಯೋವನ್ನು ವಾಟ್ಸಪ್​​ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.

25 ಲಕ್ಷ ಹಣ ನೀಡದೆ ಹೋದರೆ ವಿಡಿಯೋ ವೈರಲ್​ ಮಾಡೋದಾಗಿ ಬೆದರಿಕೆ ಹಾಕಿದ್ದರು. ಪೊಲೀಸರಿಗೆ ಸಂತ್ರಸ್ತ ಮಹಿಳೆ ದೂರು
ಇದರಿಂದ ಬೇಸತ್ತ ಸಂತ್ರಸ್ತ ಜೋಡಿ ಬಾಗಲೂರು ಪೊಲೀಸ್​ ಠಾಣೆಗೆ ದೂರು ನೀಡಿತ್ತು.

ಸದ್ಯ ಪೊಲೀಸ್​​ ಇಬ್ಬರು ಆರೋಪಿಗಳನ್ನು ಅರೆಸ್ಟ್​ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ.

Share This Article
Leave a comment