January 14, 2026

Newsnap Kannada

The World at your finger tips!

kalarbugi , News , Drought

ಮಂಡ್ಯದಲ್ಲಿ ಜನವರಿಯಿಂದ ಕ್ಯಾನ್ಸರ್ ಆಸ್ಪತ್ರೆ ಆರಂಭ: ಎನ್ ಚಲುವರಾಯಸ್ವಾಮಿ

Spread the love

ಮಂಡ್ಯ – ಜಿಲ್ಲೆಯ ಮಿಮ್ಸ್ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಕ್ಯಾನ್ಸರ್ ಆಸ್ಪತ್ರೆಯನ್ನು ಜನವರಿಯಲ್ಲಿ ಪ್ರಾರಂಭಿಸಿಲು ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚಲುವರಾಯಸ್ವಾಮಿ ತಿಳಿಸಿದರು.

ಅವರು ಇಂದು ಬೆಳಿಗ್ಗೆ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಒಳ ಮತ್ತು ಹೊರರೋಗಿ ವಿಭಾಗ, ಹೆರಿಗೆ ವಾರ್ಡ್, ಔಷಧಿ ವಿಭಾಗ ಕೊಠಡಿ, ತುರ್ತು ಚಿಕಿತ್ಸಾ ವಿಭಾಗ ಸೇರಿದಂತೆ ವಿವಿಧ ವಾರ್ಡ್ ಗಳಿಗೆ ತೆರಳಿ ಪರಿಶೀಲನೆ ನಡೆಸಿ ನಂತರ ಮಾತನಾಡಿದರು. ಫೋಟೋ ಸೆಷನ್ ವೇಳೆ ಮೂರ್ಛೆ ಹೋದ ಬಿಜೆಪಿ ಸಂಸದ ನರಹರಿ ಅಮೀನ್

ಜಿಲ್ಲಾ ಕ್ಯಾನ್ಸರ್ ಆಸ್ಪತ್ರೆಗೆ ಸರ್ಕಾರದಿಂದ 12 ಕೋಟಿ ಬಿಡುಗಡೆ ಮಾಡಲಾಗಿತ್ತು, ಇದೀಗ ಹೆಚ್ಚುವರಿಯಾಗಿ 5 ಕೋಟಿ ಬಿಡುಗಡೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು.

ಕ್ಯಾನ್ಸರ್ ಆಸ್ಪತ್ರೆಯ ತಪಾಸಣೆ ಹಾಗೂ ಚಿಕಿತ್ಸೆಗೆ ಬೇಕಿರುವ ವೈಧ್ಯಕೀಯ ಯಂತ್ರೋಪಕರಣಗಳ ಖರೀದಿಯನ್ನು ರೂ.10 ಕೋಟಿ ವೆಚ್ಚದಲ್ಲಿ ಮಾಡಬೇಕಿರುತ್ತದೆ. ಟೆಂಡರ್ ಪ್ರಕ್ರಿಯೆಯನ್ನು ರಾಜ್ಯ ಮಟ್ಟದಲ್ಲಿ ನಡೆಸಬೇಕಿದ್ದು ಕ್ರಮ ಕೈಗೊಳ್ಳಲಾಗುವುದು. ಆಸ್ಪತ್ರೆಗೆ 235 ಸಿಬ್ಬಂದಿಗಳ ಆವಶ್ಯಕತೆ ಇದ್ದು, ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಇದನ್ನು ಪರಿಶೀಲನೆ ನಡೆಸಲಾಗುವುದು ಎಂದರು‌.

ಆಸ್ಪತ್ರೆ ಪ್ರಾರಂಭವಾಗಿ 30-40 ವರ್ಷಗಳಾಗಿದೆ. ದಿನಕ್ಕೆ 2000 ಹೊರ ರೋಗಿಗಳು, 160 ಒಳ ರೋಗಿಗಳು, ದಾಖಲಾಗುತ್ತಾರೆ. ಆಸ್ಪತ್ರೆಯಲ್ಲಿ 450 ಬೆಡ್ ಗಳು ಮಂಜೂರಾಗಿದ್ದು, ದಿನಕ್ಕೆ 850 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯಲ್ಲಿ ಸಾಕಷ್ಟು ಸಮಸ್ಯೆ ಇದೆ. ಇದನ್ನು ಹಂತ ಹಂತವಾಗಿ ಬಗೆಹರಿಸಲು ಕ್ರಮವಹಿಸಲಾಗುವುದು ಎಂದರು.

ಸ್ಕ್ಯಾನಿಂಗ್ ಗೆ ಸಂಬಂಧ ಪಟ್ಟಂತೆ ಪ್ರತಿ ದಿನ 500 ರೋಗಿಗಳಿಗೆ ಸ್ಕ್ಯಾನಿಂಗ್ ನಡೆಸಬೇಕಿರುತ್ತದೆ. 3 ಜನ ವೈದ್ಯರು ಲಭ್ಯವಿದ್ದಾರೆ. ಎಲ್ಲಾರಿಗು ಸಹ ಸೌಲಭ್ಯ ಒದಗಿಸಲು ಸದ್ಯಕ್ಕೆ ತುರ್ತು ಪರಿಸ್ಥಿತಿ ಆಧಾರದ ಮೇಲೆ ಎ.ಬಿ.ಸಿ ಎಂಬಂತೆ ಮೂರು ವಿಭಾಗ ಮಾಡಿಕೊಂಡು ರೋಗಿಗಳನ್ನು ತಕ್ಷಣ ಸ್ಪಂದಿಸುವಂತೆ ತಿಳಿಸಿದರು.

ಆಸ್ಪತ್ರೆಯ ಗ್ರಂಥಾಲಯ ಮತ್ತು ಪರೀಕ್ಷಾ ಕೊಠಡಿಗಳ ಕಾಮಾಗಾರಿಗೆ ಸರ್ಕಾರದಿಂದ 7 ಕೋಟಿಗೆ ಅನುಮೋದನೆಗೊಂಡಿದ್ದು, ಹೆಚ್ಚುವರಿ ಕಾಮಗಾರಿ ಕೈಗೊಳ್ಳಬೇಕಿದ್ದು, ಈ ಬಗ್ಗೆ ಸರ್ಕಾರದ ಹಂತದಲ್ಲಿ ನಿರ್ಧಾರವಾಗಬೇಕಿದೆ ಎಂದರು.

ಇದೇ ಸಂದರ್ಭದಲ್ಲಿ ಶಾಸಕರಾದ ಪಿ.ರವಿಕುಮಾರ್, ಕೆ.ಎಂ ಉದಯ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಕ್ ತನ್ವಿರ್ ಆಸಿಫ್, ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಮಿಮ್ಸ್ ನಿರ್ದೇಶಕ ಡಾ.ಮಹೇಂದ್ರ, ಅಧಿಕ್ಷಕರಾದ ಶ್ರೀಧರ್ ಸೇರಿದಂತೆ ಇನ್ನಿತರರು ಇದ್ದರು.

ಮಂಡ್ಯದಲ್ಲಿ ಜನವರಿಯಿಂದ ಕ್ಯಾನ್ಸರ್ ಆಸ್ಪತ್ರೆ ಆರಂಭ: ಎನ್ ಚಲುವರಾಯಸ್ವಾಮಿ – Cancer hospital to start in Mandya from January #congress #modi #bjp #mandya #mandyanews #karnataka

error: Content is protected !!