545 PSI ಹುದ್ದೆಗಳ ನೇಮಕಾತಿ ರದ್ದು – ಆರೋಪಿಗಳನ್ನು ಬಿಟ್ಟು ಉಳಿದವರಿಗೆ ಮರು ಪರೀಕ್ಷೆ

Team Newsnap
1 Min Read

ರಾಜ್ಯದಲ್ಲಿ 2020ರಲ್ಲಿ ನಡೆದಿದ್ದ 545 PSI ನೇಮಕಾತಿಯನ್ನು ರದ್ದು ಮಾಡಿ ರಾಜ್ಯ ಸರ್ಕಾರ ಆದೇಶ ನೀಡಿದೆ

ಇದೇ ವೇಳೆ PSI ಹುದ್ದೆಗೆ ಮರು ಪರೀಕ್ಷೆಗೆ ನಡೆಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಕಟಿಸಿದರು.

ವಿಕಾಸ ಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಗೃಹ ಸಚಿವರು ಹಣಕ್ಕಾಗಿ ಹುದ್ದೆಗಳು ಎಂಬುದನ್ನ ಮರೆಯಬೇಕಿದೆ. ಕಠಿಣ, ನಿಯಮ, ಕಾಯ್ದೆಗಳನ್ನು ರೂಪಿಸಲು ಸರ್ಕಾರ ಚಿಂತನೆ. ಆಪಾದಿತರನ್ನ ಬಿಟ್ಟು ಇತರರಿಗೆ ಮರು ಪರೀಕ್ಷೆಗೆ ಅವಕಾಶ ನೀಡಲಾಗುತ್ತದೆ ಎಂದರು.

ಅನೇಕ ಪರೀಕ್ಷೆಗಳಲ್ಲಿ ಅಕ್ರಮ ನಡೆಯುತ್ತಿದೆ. ಆದ್ದರಿಂದ ಅಕ್ರಮಕ್ಕೆ ಭಾಗಿಯಾಗಿರುವವರ ವಿರುದ್ಧ ಕ್ರಮಕೈಗೊಳ್ಳಲು ಕಠಿಣ ಕಾಯ್ದೆಗಳನ್ನು ರೂಪಿಸಲು ಸರ್ಕಾರ ಚಿಂತನೆ ಮಾಡುತ್ತಿದೆ. ಶೀಘ್ರ ಈ ಬಗ್ಗೆ ಮಾಹಿತಿ ನೀಡುತ್ತೇವೆ. ಅಕ್ರಮದಲ್ಲಿ ಭಾಗಿಯಾಗಿರುವ ಆರೋಪಿತರನ್ನು ಬಿಟ್ಟು ಉಳಿದ ಅಭ್ಯರ್ಥಿಗಳು ಮತ್ತೆ ಪರೀಕ್ಷೆಯನ್ನು ಬರೆದುಬಹುದು. 54,289 ಮಂದಿಯಲ್ಲಿ ಆರೋಪಿಗಳನ್ನು ಹೊರತುಪಡಿಸಿ ಮರು ಪರೀಕ್ಷೆ ನಡೆಸಲಾಗುತ್ತದೆ.

ಪಿಎಸ್​ಐ ಅಕ್ರಮದಲ್ಲಿ ಆರೋಪಿಗಳಾಗಿರುವ ದಿವ್ಯಾ, ಅರ್ಚನಾ, ಸದ್ದಾಂ, ಸುರೇಶ್, ಸುನಂದ ಅವರನ್ನು ಪೊಲೀಸರು ಪುಣೆಯಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.

ಕರ್ನಾಟಕ್ಕೆ ಕರೆದುಕೊಂಡು ಬರಲಾಗುತ್ತಿದೆ. ಒಂದಕ್ಕಿಂತ ಹೆಚ್ಚು ಸೆಂಟರ್​ಗಳಲ್ಲಿ ಅಕ್ರಮ ನಡೆದಿರೋದು ಸರ್ಕಾರದ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಚರ್ಚೆ ಮಾಡಿ ಸರ್ಕಾರ ಪರೀಕ್ಷೆ ರದ್ದು ಮಾಡುವ ನಿರ್ಧಾರವನ್ನು ತೆಗೆದುಕೊಂಡಿದೆ. ಇದರಿಂದ ನಿಷ್ಠವಂತರಿಗೆ ಕೆಲಸ ಸಿಗಲಿದೆ ಎಂದು ಸ್ಪಷ್ಟಪಡಿಸಿದರು.

Share This Article
Leave a comment