ಕೆನರಾ ಬ್ಯಾಂಕ್​ನಲ್ಲಿ ಡಿಗ್ರಿ ಪಾಸಾದವರಿಗೆ ಉದ್ಯೋಗ: ಇಂದೇ ಕೊನೆದಿನ

Team Newsnap
1 Min Read

ಕೆನರಾ ಬ್ಯಾಂಕ್​​ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಒಟ್ಟು 500 ಪ್ರೊಬೇಶನರಿ ಆಫೀಸರ್/ ಮ್ಯಾನೇಜ್​ಮೆಂಟ್ ಟ್ರೈನಿ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.

ಈ ಮೊದಲು ಆಗಸ್ಟ್ 21, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿತ್ತು. ಬಳಿಕ ಆ ದಿನಾಂಕವನ್ನು ಆಗಸ್ಟ್ 28ರವರೆಗೆ ವಿಸ್ತರಿಸಲಾಗಿತ್ತು. ಆ ಪ್ರಕಾರ, ನಾಳೆಯೊಳಗೆ ಅಭ್ಯರ್ಥಿಗಳು ಆನ್​ಲೈನ್ (Online) ಮೂಲಕ ಅರ್ಜಿ ಸಲ್ಲಿಸಬೇಕು.

ಕೆನರಾ ಬ್ಯಾಂಕ್​​

  • ಹುದ್ದೆ ಪ್ರೊಬೇಶನರಿ ಆಫೀಸರ್/ ಮ್ಯಾನೇಜ್​ಮೆಂಟ್ ಟ್ರೈನಿ
  • ಒಟ್ಟು ಹುದ್ದೆ 500
  • ವಿದ್ಯಾರ್ಹತೆ ಪದವಿ
  • ವೇತನ ನಿಗದಿಪಡಿಸಿಲ್ಲ
  • ಉದ್ಯೋಗದ ಸ್ಥಳ ಭಾರತ
  • ಅರ್ಜಿ ಸಲ್ಲಿಸಲು ಕೊನೆಯ ದಿನ ಆಗಸ್ಟ್ 28, 2023

ಶೈಕ್ಷಣಿಕ ಅರ್ಹತೆ:
ಕೆನರಾ ಬ್ಯಾಂಕ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ ಪೂರ್ಣಗೊಳಿಸಿರಬೇಕು.

ವಯೋಮಿತಿ:
ಕೆನರಾ ಬ್ಯಾಂಕ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಆಗಸ್ಟ್ 1, 2023ಕ್ಕೆ ಕನಿಷ್ಠ 20 ವರ್ಷ ಮತ್ತು ಗರಿಷ್ಠ 30 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:
ಒಬಿಸಿ (NCL) ಅಭ್ಯರ್ಥಿಗಳು- 3 ವರ್ಷ
SC/ST ಅಭ್ಯರ್ಥಿಗಳು- 5 ವರ್ಷ
PwBD ಅಭ್ಯರ್ಥಿಗಳು- 10 ವರ್ಷ

ಅರ್ಜಿ ಶುಲ್ಕ:
SC/ST/PwD ಅಭ್ಯರ್ಥಿಗಳು- 175 ರೂ.
ಉಳಿದ ಎಲ್ಲಾ ಅಭ್ಯರ್ಥಿಗಳು- 850 ರೂ.
ಪಾವತಿಸುವ ಬಗೆ- ಆನ್​ಲೈನ್

ವೇತನ:
ನಿಗದಿಪಡಿಸಿಲ್ಲ.

ಉದ್ಯೋಗದ ಸ್ಥಳ:
ಭಾರತದಲ್ಲಿ ಎಲ್ಲಿ ಬೇಕಾದರೂ

ಆಯ್ಕೆ ಪ್ರಕ್ರಿಯೆ:
ಪೂರ್ವಭಾವಿ ಪರೀಕ್ಷೆ
ಮುಖ್ಯ ಪರೀಕ್ಷೆ
ಸಂದರ್ಶನ

Canara Bank- ನೋಟಿಫಿಕೇಶನ್

Extended Notification

ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅಪ್ಲೈ ಮಾಡಲು .ಬಿಜೆಪಿ ದಿವಾಳಿ : ಮೈಸೂರಿನಲ್ಲಿ ಸಿದ್ದು ವಾಗ್ದಾಳಿ

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 01/08/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಆಗಸ್ಟ್ 28, 2023

Share This Article
Leave a comment