ಮಹಿಳಾ ಮೀಸಲಾತಿ ಮಸೂದೆಗೆ ಸಂಪುಟ ಅಸ್ತು: ಮಹಿಳೆಯರಿಗೆ ಶೇ.33ರಷ್ಟು ರಾಜಕೀಯ ಮೀಸಲಾತಿ

Team Newsnap
1 Min Read

ವಿಶೇಷ ಸಂಸತ್ ಅಧಿವೇಶನದ ನಡುವೆಯೂ ಸೋಮವಾರ ಸಂಜೆ ನಡೆಸಲಾದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಶೇ 33ರಷ್ಟು ರಾಜಕೀಯ ಮಹಿಳಾ ಮೀಸಲಾತಿ ಪ್ರಸ್ತಾಪಕ್ಕೆ ಅನುಮೋದನೆ ನೀಡಿದೆ

ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಮಹಿಳಾ ಮೀಸಲಾತಿ ಪ್ರಸ್ತಾಪಕ್ಕೆ ಅನುಮೋದನೆ ದೊರೆತಿದೆ.

ಪ್ರತಿ ಚುನಾವಣೆಗೂ ಕ್ಷೇತ್ರ ಮೀಸಲಾತಿ ಬದಲು :

ಈ ಮಸೂದೆಯು ಎಸ್ಸಿ, ಎಸ್ಟಿ ಮತ್ತು ಆಂಗ್ಲೋ-ಇಂಡಿಯನ್ನರಿಗೆ ಶೇ 33 ರಷ್ಟು ಕೋಟಾದೊಳಗೆ ಉಪ ಮೀಸಲಾತಿಯನ್ನುಕೂಡ ಪ್ರಸ್ತಾಪಿಸುತ್ತದೆ.

ಅಲ್ಲದೆ ಪ್ರತಿ ಸಾರ್ವತ್ರಿಕ ಚುನಾವಣೆಯ ನಂತರ ಮೀಸಲು ಸ್ಥಾನಗಳನ್ನು ಬದಲಾವಣೆ ಮಾಡಬೇಕು ಎಂದು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ಪ್ರಧಾನಿ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಅನುಮೋದನೆ ನೀಡಲಾಗಿದೆ

ಮೂಲಗಳ ಪ್ರಕಾರ, ಮಸೂದೆಯನ್ನು ನಾಳೆ ಹೊಸ ಸಂಸತ್ತಿನಲ್ಲಿ ಮಂಡಿಸುವ ಸಾಧ್ಯತೆಯಿದೆ.

Share This Article
Leave a comment