December 23, 2024

Newsnap Kannada

The World at your finger tips!

santhosh

ಸಂಪುಟ ವಿಸ್ತರಣೆ- ಪುನರ್ ರಚನೆ ಡೌಟು : ಡಿ 15 ರವರೆಗೆ ವೇಟ್ – ಈಗ ಸಂತೋಷ್ ರಾಜೀನಾಮೆ?

Spread the love

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಲೆಕ್ಕಾಚಾರ ಎಲ್ಲವೂ ಉಲ್ಟಾ ಆಗುತ್ತಿದೆ.

ಸಿಎಂ ಯಡಿಯೂರಪ್ಪ ಅಂದುಕೊಂಡಂತೆ ಯಾವುದನ್ನೂ ನಡೆಯಲು ಬಿಜೆಪಿ ಹೈಕಮಾಂಡ್ ಬಿಡದೇ ಇರುವುದು ಸಿಎಂಗೆ ಬಿಸಿ ತುಪ್ಪದಂತೆ ಆಗಿದೆ.

ಸಧ್ಯಕ್ಕೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಯಾವುದೂ ಬೇಡ ಎನ್ನುವ ನಿರ್ಧಾರಕ್ಕೆ ಬಂದಿರುವ ಹೈಕಮಾಂಡ್ ಡಿ 15 ರವರೆಗೆ ಯಾವುದೇ ಕಾಯುವಂತೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.
ಹೈಕಮಾಂಡ್ ನಿಂದ ಇಂತಹ ಸಂದೇಶ ರವಾನೆಯಾಗುತ್ತಿದ್ದಂತೆ ಸಚಿವ ಆಕಾಂಕ್ಷಿಗಳು ತಳಮಳಗೊಂಡಿದ್ದಾರೆ. ಮುಂದಿನ ದಾರಿ ಕಾಣದೇ ಆಕಾಂಕ್ಷಿಗಳ ದಂಡು ಸಿಎಂ ಭೇಟಿಗೆ ದೌಡಾಯಿಸಿ ಬಂದು ಚರ್ಚೆಯಲ್ಲಿ ತೊಡಗಿದ್ದಾರೆ.

yediyurappa

ಈ ನಡುವೆ ಡಿ 7 ರಿಂದ 15 ರವರೆಗೆ ವಿಧಾನ ಸಭೆಯ ಚಳಿಗಾಲದ ಅಧಿವೇಶನ ನಡೆಯಲಿದೆ. ಈ ಅಧಿವೇಶನ ಮುಗಿದ ನಂತರವೇ ಮತ್ತೆ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆಗೆ ಚಾಲನೆ ಸಿಗಬಹುದು. ಅಲ್ಲಿಯವರೆಗೂ ಕಾಯಲೇಬೇಕು.

ಸಂತೋಷ್ ರಾಜೀನಾಮೆ?

ಸಿಎಂ ಯಡಿಯೂರಪ್ಪ ಅವರ ಪರಮ ಆಪ್ತ , ರಾಜಕೀಯ ಕಾರ್ಯದರ್ಶಿ ಸಂತೋಷ್ ರಾಜೀನಾಮೆ ನೀಡುವಂತೆ ಸಿಎಂ ಖಡಕ್ ಸಂದೇಶ ನೀಡಿದ್ದಾರೆಂದು ಗೊತ್ತಾಗಿದೆ.

ನೀನಾಗಿ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡು ಇಲ್ಲದೇ ಹೋದರೆ ಕಿತ್ತು ಹಾಕುತ್ತೇನೆ ಎಂದು ಸಿಎಂ ಎಚ್ಚರಿಕೆ ನೀಡಿದ್ದಾರೆಂದು ಹೇಳಲಾಗಿದೆ.

ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಾರೆಂಬ ಆರೋಪಕ್ಕೆ ಗುರಿಯಾಗಿದ್ದ ಮತ್ತೊಬ್ಬ ರಾಜಕೀಯ ಕಾರ್ಯದರ್ಶಿ, ಹಿರಿಯ ಪತ್ರಕರ್ತ ಎಂ. ಬಿ. ಮರಮಕಲ್ ಅವರನ್ನು ಪದಚ್ಯುತ ಗೊಳಿಸಲಾಗಿದೆ. ಅಲ್ಲದೇ ಸಿಎಂ ಮಾಧ್ಯಮ ಸಲಹೆಗಾರ ಮಹದೇವ ಪ್ರಕಾಶ್ ರಾಜೀನಾಮೆ ನೀಡಿ ಯಡಿಯೂರಪ್ಪನವರ ಆಪ್ತ‌ ವಲಯದಿಂದ ಹೊರ ಬಂದಿದ್ದಾರೆ.

ಈಗ ಆಪ್ತ ಸಂತೋಷ ಅವರ ಹುದ್ದೆಗೂ ಕುತ್ತು ಬಂದಿದೆ. ಇದರೊಂದಿಗೆ ಯಡಿಯೂರಪ್ಪ ನವರ ಆಡಳಿತಕ್ಕೆ ಗ್ರಹಣ ಶುರುವಾಗಿದೆ ಅಥವಾ ಸಿಎಂ ಅವರನ್ನು ದುರ್ಬಲಗೊಳಿಸುವ ತಂತ್ರಗಳು ಆರಂಭವಾಗಿವೆ ಎನ್ನುವುದನ್ನು ಊಹಿಸಬಹುದಾಗಿದೆ.

Copyright © All rights reserved Newsnap | Newsever by AF themes.
error: Content is protected !!