ವರ್ಕ್ ಫ್ರಮ್ ಹೋಂ ನೌಕರರಿಗೆ ಬಿಗ್ ಶಾಕ್- ಶೇ 5 ರಷ್ಟು ಹೆಚ್ಚುವರಿ ತೆರಿಗೆ

Team Newsnap
1 Min Read

ಕೊರೋನಾ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಬಹುತೇಕ ಕಂಪನಿಗಳ ನೌಕರರು ವರ್ಕ್ ಫ್ರಮ್ ಹೋಂ ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಸಮಯದ ಜೊತೆಗೆ ಪ್ರಯಾಣದ ವೆಚ್ಚ ಮತ್ತು ಹೋಟೆಲ್ ಊಟ, ತಿಂಡಿಯ ಖರ್ಚು ಉಳಿಯುತ್ತಿದೆ ಎಂದು ನೌಕರರು ಭಾವಿಸಿದ್ದರು. ಆದರೆ ವರ್ಕ್ ಫ್ರಮ್ ಹೋಂ ನಲ್ಲಿರುವ ನೌಕರರಿಗೆ ವೇತನದಲ್ಲಿ ಶೇ. 5 ರಷ್ಟು ತೆರಿಗೆ ವಿಧಿಸಲು ಕೇಂದ್ರ ಚಿಂತನೆ ಮಾಡುತ್ತಿದೆ

ಅಮೇರಿಕಾ, ಜರ್ಮನಿ, ಯುಕೆ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಈಗಾಗಲೇ ವರ್ಕ್ ಫ್ರಮ್ ಹೋಂನಲ್ಲಿರುವರಿಂದ ವೇತನದಲ್ಲಿ ಶೇಕಡಾ 5 ರಷ್ಟು ತೆರಿಗೆ ಸಂಗ್ರಹಿಸಲಾಗುತ್ತಿದೆ. ವಿಶ್ವದ ದೊಡ್ಡಣ್ಣ ಅಮೇರಿಕಾದಲ್ಲಿ ಇದರಿಂದ ವಾರ್ಷಿಕ 49 ಬಿಲಿಯನ್ ಡಾಲರ್, ಜರ್ಮನಿಯಲ್ಲಿ 20 ಬಿಲಿಯನ್ ಡಾಲರ್ ಮತ್ತು ಯುಕೆಯಲ್ಲಿ 7 ಬಿಲಿಯನ್ ಡಾಲರ್ ಸರ್ಕಾರಕ್ಕೆ ತೆರಿಗೆ ಬರುತ್ತಿದೆ.

ಖ್ಯಾತ Deutsche ಬ್ಯಾಂಕ್ ನ ಜಾಗತಿಕ ಸಂಶೋಧನೆ ವಿಭಾಗದ ಮುಖ್ಯಸ್ಥ ಜಿಮ್ ರೀಡ್ ಅವರ ಪ್ರಕಾರ, ವರ್ಕ್ ಫ್ರಮ್ ಹೋಂ ನೌಕರರಿಂದ ಶೇಖಡ 5 ರಷ್ಟು ತೆರಿಗೆ ಸಂಗ್ರಹಿಸುವ ಪ್ರಸ್ತಾಪ ಮಂಡಿಸಲಾಗಿದೆ ಎಂದು ತಿಳಿಸಿದ್ದಾರೆ. 

ಭಾರತದಲ್ಲಿ ಕೂಡ ಮುಂದಿನ ದಿನಗಳಲ್ಲಿ ವರ್ಕ್ ಫ್ರಮ್ ಹೋಂ ನೌಕರರಿಂದ ತೆರಿಗೆ ಸಂಗ್ರಹಿಸುವ ಕಾಲ ದೂರವಿಲ್ಲ ಎನ್ನಲಾಗುತ್ತಿದೆ. ಹೀಗಾದರೆ ಈಗಿರುವ ವೇತನದಲ್ಲಿ ಮತ್ತಷ್ಟು ಖೋತಾ ಆಗಲಿದೆ. 

ನೆಮ್ಮದಿಯಾಗಿ ಮನೆಯಲ್ಲಿ ಕೆಲಸ ಮಾಡಿದರೂ ಅಲ್ಲಿಂದಲೂ ತೆರಿಗೆ ಸಂಗ್ರಹಿಸಿದರೆ ಮತ್ತೇನು ಮಾಡಬೇಕು ಎಂದು ಈ ವಿಚಾರ ತಿಳಿದ ಕೆಲವರು ತಲೆ ಮೇಲೆ ಕೈ ಹೊತ್ತು ಕುಳಿತ್ತಿದ್ದಾರೆ.

Share This Article
Leave a comment