ರಾಜ್ಯ ವಿಧಾನಪರಿಷತ್ 3 ಸ್ಥಾನಗಳಿಗೆ ಜೂ.30ರಂದು ಉಪ ಚುನಾವಣೆ ಪ್ರಕಟ

Team Newsnap
1 Min Read

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಬೆನ್ನಲ್ಲೇ, ಚುನಾವಣಾ ಆಯೋಗದಿಂದ ಕರ್ನಾಟಕ ವಿಧಾನಪರಿಷತ್ತಿನ ಮೂರು ಸ್ಥಾನಗಳಿಗೆ ಉಪ ಚುನಾವಣೆಯನ್ನು ಘೋಷಣೆ ಮಾಡಿದೆ.

ಈ ಸಂಬಂಧ ಮಂಗಳವಾರ ಕೇಂದ್ರ ಚುನಾವಣಾ ಆಯೋಗದಿಂದ ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಶಾಸಕ ಲಕ್ಷ್ಮಣ್ ಸವದಿ ಅವರ ವಿಧಾನ ಪರಿಷತ್ ಸದಸ್ಯ ಸ್ಥಾನದ ಅವಧಿ ಜೂನ್.14ಕ್ಕೆ, ಬಾಬು ರಾವ್ ಚಿಂಚನಸೂರ್ ಜೂನ್.17ರಂದು ಹಾಗೂ ಆರ್ ಶಂಕರ್ ಅವರ ಅಧಿಕಾರಾವಧಿ ಜೂನ್.30ರಂದು ಕೊನೆಗೊಳ್ಳಲಿದೆ.

ಮೂವರು ಕರ್ನಾಟಕ ವಿಧಾನ ಪರಿಷತ್ ಸದಸ್ಯರ ಅಧಿಕಾರಾವಧಿ ಕೊನೆಗೊಳ್ಳುತ್ತಿರುವ ಹಿನ್ನಲೆಯಲ್ಲಿ ಈ ಮೂರು ಸ್ಥಾನಗಳಿಗೆ ಜೂನ್.30ರಂದು ಉಪ ಚುನಾವಣೆ ನಡೆಸುವುದಾಗಿ ತಿಳಿಸಿದೆ.

ಇನ್ನೂ ಜೂನ್.13ರಂದು ಅಧಿಸೂಚನೆಯನ್ನು ಹೊರಡಿಸಲಾಗಿತ್ತದೆ. ಜೂನ್.20ರಂದು ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿದೆ. ಜೂನ್.21ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜೂನ್.23ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಜೂನ್. 30ರಂದು ಮತದಾನವನ್ನು ನಿಗದಿ ಪಡಿಸಲಾಗಿದೆ.ಹೇಮಂತ್ ನಿಂಬಾಳ್ಕರ್ ವಾರ್ತಾ ಇಲಾಖೆ ಕಮೀಷನರ್ ನೇಮಕ

ಜೂನ್.30ರಂದು ಬೆಳಿಗ್ಗೆ 9 ರಿಂದ 4 ಗಂಟೆಯವರೆಗೆ ನಡೆಸಲಾಗುತ್ತದೆ. ಸಂಜೆ 5 ಗಂಟೆಗೆ ಮತಗಳ ಏಣಿಕೆ ಕಾರ್ಯ ಹಾಗೂ ಫಲಿತಾಂಶ ಕೂಡ ಅಂದೇ ಘೋಷಣೆಯಾಗಲಿದೆ.

Share This Article
Leave a comment