ಸಾರಿಗೆ ನೌಕರರ ಮುಷ್ಕರ : ಬಸ್ ಸಂಚಾರ ಸ್ಥಗಿತ – ಪ್ರಯಾಣಿಕರ ಪರದಾಟ

Team Newsnap
1 Min Read
Free bus pass - only up to 50 K.M from home ? ಉಚಿತ ಬಸ್ ಪಾಸ್ - ಮನೆಯಿಂದ 50 K.M ವರೆಗೆ ಮಾತ್ರ ?

ಕೆ ಎಸ್ ಆರ್ ಟಿ ಸಿ ಹಾಗೂ ಬಿಎಂಟಿಸಿ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸುವಂತೆ ಒತ್ತಾಯಿಸಿ ನಡೆಸಿರುವ ಬಸ್ ಸಂಚಾರ ಬಂದ್ ಮುಷ್ಕರದಿಂದಾಗಿ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಕೋಲಾರದ ಬಂಗಾರಪೇಟೆ ಬಸ್ ಡಿಪೋಗೆ ಸೇರಿದ ಮೂರು ಬಸ್ ಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ. ಬೈಕ್ ನಲ್ಲಿ ಬಂದ ಕಿಡಿಗೇಡುಗಳು ಬಂದು ಕಲ್ಲು ತೂರಿದ್ದರಿಂದ ಗಾಜುಗಳು ಪುಡಿ ಪುಡಿ ಯಾಗಿವೆ. ಇದೊಂದು ಘಟನೆ ಬಿಟ್ಟರೆ ಉಳಿದೆಡೆ ಶಾಂತಿಯುತ ಮುಷ್ಕರ ಮುಂದುವರಿದೆ.‌

ಬೆಂಗಳೂರಿನ ಮೆಜೆಸ್ಟಿಕ್, ಸ್ಯಾಟ್ ಲೈಟ್ ಸೇರಿದಂತೆ ಎಲ್ಲಾ ಬಸ್ ನಿಲ್ದಾಣಗಳಲ್ಲಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಿ ನೌಕರರು ಮುಷ್ಕರ, ಪ್ರತಿಭಟನೆಯಲ್ಲಿ ತೊಡಗಿದ್ದಾರೆ.

ಸಾರಿಗೆ ನೌಕರರ ಮುಷ್ಕರದಿಂದಾಗಿ ಸಾರ್ವಜನಿಕರಿಗೆ ತೀವ್ರ ತೊಂದರೆ ಯಾಗಿದೆ. ವಿಮಾನ ನಿಲ್ದಾಣಕ್ಕೆ ನಿತ್ಯ ತೆರಳುತ್ತಿದ್ದ ವಜ್ರ ಬಸ್ ಗಳೂ ಸಹ ಸೇವೆ ಸ್ಥಗಿತಗೊಳಿಸಿವೆ. ಇದರಿಂದ ವಿಮಾನ ಪ್ರಯಾಣಿಕರೂ ಕೂಡ ಪರದಾಟದಿಂದ ಹೊರತಾಗಿಲ್ಲ.

ರಾಜ್ಯದ ಮೈಸೂರು, ಹುಬ್ಬಳ್ಳಿ , ಕಾರವಾರ, ಮಂಡ್ಯ, ಹಾಸನ, ಕೊಡಗು, ಹಾವೇರಿ ಸೇರಿದಂತೆ ಇತರ ಜಿಲ್ಲೆಗಳಲ್ಲೂ ಕೂಡ ಬಸ್ ಸಂಚಾರ ಸ್ಥಗಿತವಾಗಿದೆ.

ಮಂಡ್ಯ ವರದಿ

ಮಂಡ್ಯ ಜಿಲ್ಲೆಯಲ್ಲಿ ಕೆಎಸ್ ಆರ್ ಟಿಸಿ ಬಸ್ ಸಂಚಾರ ಸ್ಥಗಿತಗೊಂಡಿದೆ. ಬೆಳಗ್ಗೆ ಒಂದಿಷ್ಟು ಬಸ್ ಸಂಚಾರ ಇತ್ತು. 9 ಗಂಟೆ ವೇಳೆಗೆ ಬಸ್ ಸಂಚಾರ ಸಾರಿಗೆ ಸಿಬ್ಬಂದಿಗಳು ಸ್ಥಗಿತಗೊಳಿಸಿದರು.
ಬಸ್ ಇಲ್ಲದೇ ಪ್ರಯಾಣಿಕರು ಪರದಾಡುತ್ತಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 6 ಡಿಪೋಗಳಿವೆ.
6 ಡಿಪೋಗಳ ಪೈಕಿ ಪ್ರತಿ ದಿನ 82 ಬಸ್ ಸಂಚಾರ ಮಾಡುತ್ತಿದ್ದವು. ಇಂದು ರಸ್ತೆಗಿಳಿದ ಕೇವಲ 30 ಬಸ್‌ಗಳು.
12000 ಸಿಬ್ಬಂದಿಗಳ ಪೈಕಿ 250 ಸಿಬ್ಬಂದಿಗಳು ಮಾತ್ರ ಕೆಸಲಕ್ಕೆ ಹಾಜರ್.
ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿ ಕೊಂಡಿರುವ ಚಾಲಕರು ಮತ್ತು ಕಂಡಕ್ಟರ್‌ಗಳು. ಪ್ರಯಾಣಿಕರು ಪರದಾಟ ಮಾತ್ರ ನಿರಂತರವಾಗಿದೆ.

ಮುಷ್ಕರ ಕೈಬಿಡಿ, ಕೆಲಸಕ್ಕೆ ಬನ್ನಿ

ಮುಖ್ಯಮಂತ್ರಿ ಯಡಿಯೂರಪ್ಪ ಮುಷ್ಕರ ನಿರತ ಸಾರಿಗೆ ನೌಕರರಲ್ಲಿ ಮನವಿ ಮಾಡಿ, ಕೊರೋನಾದಿಂದಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಸಂಕಷ್ಟದಲ್ಲಿ ಸಹಕಾರ ನೀಡಿ. ಈಗ ಕೆಲಸಕ್ಕೆ ಬನ್ನಿ ಎಂದು ಕೋರಿದ್ದಾರೆ.

Share This Article
Leave a comment